ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚಿತ್ರಗಳಲ್ಲಿ: ಕಾಂಗರೂಗಳ ಕೇಕೆ, ಕಿವೀಸ್ ಕಂಬನಿ

By Mahesh

ಮೆಲ್ಬೋರ್ನ್, ಮಾ.29: ತವರು ನೆಲದಲ್ಲಿ ವಿಶ್ವಕಪ್ ಎತ್ತಿ ಹಿಡಿಯುವ ಖುಷಿಯೇ ಬೇರೆ. ಆಸ್ಟ್ರೇಲಿಯಾದ ಆಟಗಾರರು ಐದನೇ ಬಾರಿಗೆ ವಿಶ್ವ ಚಾಂಪಿಯನ್ ಎನಿಸಿಕೊಂಡು ಮೈದಾನದ ತುಂಬಾ ಓಡಾಡಿ ಸಂಭ್ರಮಿಸಿದೆ. ಕಾಂಗೂರು ನೆಗೆಯುತ್ತಾ ಕೇಕೇ ಹಾಕಿ ಮೈದಾನದ ತುಂಬಾ ಓಡಾಡಿ ವಿಜಯೋತ್ಸವ ಆಚರಿಸಿದ್ದಾರೆ.

ಮೆಲ್ಬೋರ್ನ್ ಕ್ರಿಕೆಟ್ ಮೈದಾನ(ಎಂಸಿಜಿ)ದಲ್ಲಿದ್ದ ಸುಮಾರು 93,000 ಮಂದಿ ಪ್ರೇಕ್ಷಕರ ಸಮ್ಮುಖದಲ್ಲಿ ವಿಶ್ವ ಚಾಂಪಿಯನ್ ಎನಿಸಿಕೊಂಡ ಆಸ್ಟ್ರೇಲಿಯಾ ಈ ಹಿಂದೆ ನಾಲ್ಕು ಬಾರಿ ವಿಶ್ವಕಪ್ ಗೆದ್ದಿದ್ದಕ್ಕಿಂತ ದುಪ್ಪಟ್ಟು ಸಂತೋಷ ಪಟ್ಟಿದೆ. ಜೊತೆಗೆ ನಾಯಕ ಮೈಕಲ್ ಕ್ಲಾರ್ಕ್ ಅವರಿಗೆ ಭಾವನಾತ್ಮಕ ವಿದಾಯವೂ ಸಿಕ್ಕಿದೆ. [ವಿಶ್ವಕಪ್ ಫೈನಲ್ ಪಂದ್ಯಗಳ ಮೆಲುಕು]

"ನಾವು ಈ ವಿಶ್ವಕಪ್ ನಲ್ಲಿ 16ಜನ ಆಟಗಾರರು ಆಡಿದೆವು. ಈ ವಿಶ್ವಕಪ್ ಗೆಲುವು ನನ್ನ ಕಿರಿಯ ಸೋದರ ಫಿಲ್ ಹ್ಯೂಸ್ ಗೆ ಅರ್ಪಿತ" ಎನ್ನುವ ಮೂಲಕ ಕ್ಲಾರ್ಕ್ ತಮ್ಮ ಗೆಲುವನ್ನು ಅಗಲಿದ ಕಿರಿಯ ಆಟಗಾರನಿಗೆ ಸಲ್ಲಿಸಿದ್ದಾರೆ. [ಕಪ್ ಗೆದ್ದ ಆಸೀಸ್ ಗೆ 25 ಕೋಟಿ ರು, ಭಾರತಕ್ಕೆಷ್ಟು?]

ನ್ಯೂಜಿಲೆಂಡ್ ತಂಡ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದರೂ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್ ಗಳ ಅಂತರ ಸೋಲುಕಂಡು ಕಂಬನಿ ಮಿಡಿದಿದೆ.

ವಿಶ್ವಕಪ್ ವಿಶೇಷ ಪುಟ</a> | <a class=ವಿಶ್ವಕಪ್ ಎತ್ತಿದ ಆಸ್ಟ್ರೇಲಿಯಾ" title="ವಿಶ್ವಕಪ್ ವಿಶೇಷ ಪುಟ | ವಿಶ್ವಕಪ್ ಎತ್ತಿದ ಆಸ್ಟ್ರೇಲಿಯಾ" />ವಿಶ್ವಕಪ್ ವಿಶೇಷ ಪುಟ | ವಿಶ್ವಕಪ್ ಎತ್ತಿದ ಆಸ್ಟ್ರೇಲಿಯಾ

ಎಂಸಿಜಿಯಲ್ಲಿ ಆಸೀಸ್ ಅಬ್ಬರ, ಕಿವೀಸ್ ತತ್ತರ, ಕ್ಲಾರ್ಕ್ ಗೆ ಶುಭ ಹಾರೈಕೆಗಳ ಮಹಾಪೂರ ಹರಿದು ಬಂದಿದೆ. ಈ ಅಂತಿಮ ಹಣಾಹಣಿಯ ರಸನಿಮಿಷಗಳನ್ನು ಚಿತ್ರಗಳಲ್ಲಿ ನೋಡಿ..

ಪಂದ್ಯಶ್ರೇಷ್ಠ, ಟೂರ್ನಿ ಶ್ರೇಷ್ಠ ಪ್ರಶಸ್ತಿ ನೀಡಿದ ಸಚಿನ್

ಪಂದ್ಯಶ್ರೇಷ್ಠ, ಟೂರ್ನಿ ಶ್ರೇಷ್ಠ ಪ್ರಶಸ್ತಿ ನೀಡಿದ ಸಚಿನ್

ಐಸಿಸಿ ವಿಶ್ವಕಪ್ 2015ರ ರಾಯಭಾರಿಯಾಗಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಅಂತಿಮ ಹಣಾಹಣಿಯ ಪಂದ್ಯ ಶ್ರೇಷ್ಠ (ಜೇಮ್ಸ್ ಫಾಲ್ಕ್ನರ್) ಹಾಗೂ ಟೂರ್ನಿಯ ಶ್ರೇಷ್ಠ (ಮಿಚೆಲ್ ಸ್ಟಾರ್ಕ್) ಆಟಗಾರರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದು ವಿಶೇಷವಾಗಿತ್ತು.

ಗೆಲುವಿನ ರನ್ ಬಾರಿಸಿದ ಸ್ಟೀವನ್ ಸ್ಮಿತ್

ಗೆಲುವಿನ ರನ್ ಬಾರಿಸಿದ ಸ್ಟೀವನ್ ಸ್ಮಿತ್

ಬೌಂಡರಿಗೆ ಚೆಂಡನ್ನು ಅಟ್ಟಿ ಗೆಲುವಿನ ಗುರಿ 184ರನ್ ದಾಟಿಸುವ ಮೂಲಕ ಜಯದ ಸಂಭ್ರಮ ಆಚರಣೆ ಶುರು ಮಾಡಿದ ಸ್ಮಿತ್ ಹಾಗೂ ವಾಟ್ಸನ್

ಐದನೇ ಬಾರಿಗೆ ವಿಶ್ವ ಚಾಂಪಿಯನ್ ಆದ ಆಸೀಸ್

ಐದನೇ ಬಾರಿಗೆ ವಿಶ್ವ ಚಾಂಪಿಯನ್ ಆದ ಆಸೀಸ್

1987ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ ನಲ್ಲಿ ಆಲಾನ್ ಬಾರ್ಡರ್ ನೇತೃತ್ವದ ಆಸ್ಟ್ರೇಲಿಯಾ ತಂಡ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಎನಿಸಿಕೊಂಡಿತು. ನಂತರ 1999ರಲ್ಲಿ ಇಂಗ್ಲೆಂಡ್ ನಲ್ಲಿ, 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ, 2007ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ಗೆಲುವು ಸಾಧಿಸಿತ್ತು. ಎರಡು ಫೈನಲ್ ನಲ್ಲಿ ಸೋಲು ಇಂಗ್ಲೆಂಡ್ (1975) ಹಾಗೂ ಪಾಕಿಸ್ತಾನ (1996) ದಲ್ಲಿ ಕಂಡಿತ್ತು.

ಪ್ರಶಸ್ತಿ ಮೊತ್ತ ಹಂಚಿಕೆ

ಪ್ರಶಸ್ತಿ ಮೊತ್ತ ಹಂಚಿಕೆ

ವಿಜೇತ ತಂಡ: USD&dollar;3,750,000 ರನ್ನರ್ ಅಪ್: USD&dollar;1,750,000

ಮೈಕಲ್ ಕ್ಲಾರ್ಕ್ ಅವರ ಕೊನೆ ಏಕದಿನ ಪಂದ್ಯ

ಮೈಕಲ್ ಕ್ಲಾರ್ಕ್ ಅವರ ಕೊನೆ ಏಕದಿನ ಪಂದ್ಯ

ಮೈಕಲ್ ಕ್ಲಾರ್ಕ್ ಅವರ ಕೊನೆ ಏಕದಿನ ಪಂದ್ಯ ಇದಾಗಿತ್ತು. ಕೊನೆ ಪಂದ್ಯದಲ್ಲಿ 74ರನ್ ಗಳಿಸಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದ ನಾಯಕನಿಗೆ ಇತರೆ ಆಟಗಾರರಿಂದ ಚಪ್ಪಾಳೆ ಮೂಲಕ ಸ್ವಾಗತ.

ಕಿವೀಸ್ ಗೆ ಆಘಾತ ತಂಡ ಆಸೀಸ್ ವೇಗಿಗಳು

ಕಿವೀಸ್ ಗೆ ಆಘಾತ ತಂಡ ಆಸೀಸ್ ವೇಗಿಗಳು

ಕಿವೀಸ್ ಬ್ಯಾಟ್ ಶಕ್ತಿಯನ್ನು ಬಗ್ಗು ಬಡಿಯುವಲ್ಲಿ ಮಿಚೆಲ್ ಸ್ಟಾರ್ಕ್, ಮಿಚೆಲ್ ಜಾನ್ಸನ್ ಹಾಗೂ ಪಂದ್ಯ ಶ್ರೇಷ್ಠ ಫಾಲ್ಕ್ನರ್ ಅದ್ಭುತ ಪ್ರದರ್ಶನ ನೀಡಿ ನ್ಯೂಜಿಲೆಂಡ್ ತಂಡವನ್ನು 183ರನ್ನಿಗೆ ನಿಯಂತ್ರಿಸಿದರು.

ಮೈಕಲ್ ಕ್ಲಾರ್ಕ್ ಕನಸು ನನಸು

ಮೈಕಲ್ ಕ್ಲಾರ್ಕ್ ಕನಸು ನನಸು

ನಾಯಕನಾಗಿ ವಿಶ್ವಕಪ್ ಗೆಲ್ಲಿಸುವ ಕನಸು ಹೊತ್ತಿದ್ದ ಮೈಕಲ್ ಕ್ಲಾರ್ಕ್ ಅವರು ವಿಶ್ವಕಪ್ ಟೂರ್ನಿಯುದ್ಧಕ್ಕೂ ಬೆನ್ನುನೋವಿನ ಸಮಸ್ಯೆ ಜೊತೆಗೆ ಕಣಕ್ಕಿಳಿಯುತ್ತಿದ್ದರು. ಅಂತಿಮ ಹಣಾಹಣಿಯಲ್ಲಿ ಹಾಗೂ ಭಾರತ ವಿರುದ್ಧದ ಪಂದ್ಯದಲ್ಲಿ ತೋರಿದ ನಾಯಕತ್ವದ ಜಾಣ್ಮೆ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಯಿತು.

ಮೆಕ್ಲಮ್ ರಿಂದ ಕ್ಲಾರ್ಕ್ ಗೆ ಶುಭ ವಿದಾಯ

ಮೆಕ್ಲಮ್ ರಿಂದ ಕ್ಲಾರ್ಕ್ ಗೆ ಶುಭ ವಿದಾಯ

ಫೈನಲ್ ಪಂದ್ಯದಲ್ಲಿ ತಮ್ಮ ಕೊನೆ ಏಕದಿನ ಇನ್ನಿಂಗ್ಸ್ ನಲ್ಲಿ 74ರನ್ ಗಳಿಸಿ ಔಟಾದ ಮೈಕಲ್ ಕ್ಲಾರ್ಕ್ ಅವರಿಗೆ ಕಿವೀಸ್ ನಾಯಕ ಬ್ರೆಂಡನ್ ಮೆಕ್ಲಮ್ ರಿಂದ ಶುಭ ವಿದಾಯ.

ಐಸಿಸಿ ವಿಶ್ವಕಪ್ 2015ನೊಂದಿಗೆ ಆಸ್ಟ್ರೇಲಿಯಾ

ಐಸಿಸಿ ವಿಶ್ವಕಪ್ 2015ನೊಂದಿಗೆ ಆಸ್ಟ್ರೇಲಿಯಾ

ಐಸಿಸಿ ವಿಶ್ವಕಪ್ 2015ನೊಂದಿಗೆ ಆಸ್ಟ್ರೇಲಿಯಾ ತಂಡದ ಸಂಭ್ರಮದ ಕ್ಷಣ

ಕಿವೀಸ್ ಆಟಗಾರರ ಕಂಬನಿಭರಿತ ಮುಖಗಳು

ಕಿವೀಸ್ ಆಟಗಾರರ ಕಂಬನಿಭರಿತ ಮುಖಗಳು

ಫೈನಲ್ ತನಕ ಬಂದು ಗೆಲ್ಲಲಾಗದೆ ಕಿವೀಸ್ ಆಟಗಾರರರು ಕಂಬನಿ ಮಿಡಿದರು.

ಅಸ್ಟ್ರೇಲಿಯಾದ ಕೋಚ್ ಲೀಮನ್

ಅಸ್ಟ್ರೇಲಿಯಾದ ಕೋಚ್ ಲೀಮನ್

ವಿಶ್ವಕಪ್ ಟ್ರೋಫಿಯೊಂದಿಗೆ ಆಸ್ಟ್ರೇಲಿಯಾದ ಕೋಚ್ ಡೆರನ್ ಲೀಮನ್

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X