ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಟಿ20 ವಿಶ್ವಕಪ್ ಗೆ ಅರ್ಹತೆ ಪಡೆದ ಐರ್ಲೆಂಡ್ ಪಪ್ಪುವಾ ನ್ಯೂ ಗಿನಿಯಾ

ICC T20 worldcup : Ireland and Papua New Guinea qualified for the first time | Oneindia Kannada
PNG, Ireland qualify for ICC T20 World Cup Australia 2020

ದುಬೈ ಅಕ್ಟೋಬರ್ 28: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜನೆಯ ಟಿ20 ವಿಶ್ವಕಪ್ ಟೂರ್ನಮೆಂಟ್ ಗೆ ಪಪ್ಪುವಾ ನ್ಯೂ ಗಿನಿಯಾ(ಪಿಎನ್ ಜಿ) ಹಾಗೂ ಐರ್ಲೆಂಡ್ ತಂಡಗಳು ಅರ್ಹತೆ ಪಡೆದುಕೊಂಡಿವೆ. 2020ರಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ.

ಇದೆ ಮೊದಲ ಬಾರಿಗೆ ಪುರುಷರ ಟಿ20 ವಿಶ್ವಕಪ್ ಟೂರ್ನಮೆಂಟ್ ಗೆ ಅರ್ಹತೆ ಪಡೆದುಕೊಂಡಿದೆ. ಅರ್ಹತಾ ಸುತ್ತಿನ ಪಂದ್ಯದಲ್ಲಿ ಕೀನ್ಯಾ ತಂಡದ ವಿರುದ್ಧ 45ರನ್ ಗಳಿಂದ ಜಯ ಪಿಎನ್ ಜಿ ಜಯ ದಾಖಲಿಸಿದೆ.

ಆದರೆ ನೆದರ್ಲೆಂಡ್ಸ್ ಮತ್ತು ಸ್ಕಾಟ್ಲೆಂಡ್ ನಡುವ ಪಂದ್ಯದ ಫಲಿತಾಂಶದ ಮೇಲೆ ಪಿಎನ್ ಜಿ ಭವಿಷ್ಯ ನಿಂತಿತ್ತು. 12.3 ಓವರ್ ಗಳಲ್ಲಿ 130 ರನ್ ಟಾರ್ಗೆಟ್ ಚೇಸ್ ಮಾಡಿದರೆ ನೆದರ್ಲೆಂಡ್ ಗುಂಪಿನ ಅಗ್ರಸ್ಥಾನಿಯಾಗಿ ಅರ್ಹತೆ ಪಡೆಯಬಹುದಾಗಿತ್ತು. ಆದರೆ 12.3 ಓವರ್ ಗಳಲ್ಲಿ ಟಾರ್ಗೆಟ್ ಚೇಸ್ ಮಾಡಲು ವಿಫಲವಾದ ಹಿನ್ನಲೆಯಲ್ಲಿ ಎ ಗುಂಪಿನ ಅಗ್ರಸ್ಥಾನಕ್ಕೇರಿದ ಪಿಎನ್ ಜಿ ಟಿ20 ವಿಶ್ವಕಪ್ ಗೆ ಅರ್ಹತೆ ಪಡೆದುಕೊಂಡಿದೆ.

ಇದೇ ರೀತಿ ಬಿ ಗುಂಪಿನಲ್ಲಿ ಐರ್ಲೆಂಡ್ ತಂಡದ ಅದೃಷ್ಟ ಕೂಡಾ ಒಮನ್ ಹಾಗೂ ಜರ್ಸಿ ತಂಡದ ಫಲಿತಾಂಶವನ್ನು ಅವಲಂಬಿಸಿತ್ತು. ಜರ್ಸಿ ತಂಡವನ್ನು ಒಮನ್ ಸೋಲಿಸಿದ್ದರೆ, ಒಮನ್ ಗೆ ಅರ್ಹತೆ ಸಿಗುತ್ತಿತ್ತು. ಆದರೆ ಜರ್ಸಿ ವಿರುದ್ಧ ಒಮನ್ 14ರನ್ ಗಳ ಸೋಲು ಕಂಡಿತು. ಹೀಗಾಗಿ ಐರ್ಲೆಂಡ್ ಬಿ ಗುಂಪಿನ ಅಗ್ರಸ್ಥಾನಿಯಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ. ಬಿ ಗುಂಪಿನಲ್ಲಿ ಒಮನ್ ಹಾಗೂ ಐರ್ಲೆಂಡ್ ತಲಾ 4 ಪಂದ್ಯಗಳನ್ನು ಗೆದ್ದು ಸಮನಾದ ಅಂಕ ಗಳಿಸಿದ್ದರೂ ಉತ್ತಮ ರನ್ ಸರಾಸರಿ ಆಧಾರ ಮೇಲೆ ಐರ್ಲೆಂಡ್ ಗೆ ಅದೃಷ್ಟ ಒಲಿದಿದೆ.

Story first published: Monday, October 28, 2019, 19:51 [IST]
Other articles published on Oct 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X