ಪ್ರೀತಿ ಜಿಂಟಾರಿಂದ ದಕ್ಷಿಣ ಆಫ್ರಿಕಾದಲ್ಲಿ ಟಿ20 ತಂಡ ಖರೀದಿ

Posted By:

ಬೆಂಗಳೂರು, ಸೆ. 08: ಬಾಲಿವುಡ್ ನಟಿ, ಐಪಿಎಲ್ ನಲ್ಲಿ ಕಿಂಗ್ಸ್ ಎಲೆವೆನ್ ತಂಡದ ಸಹ ಒಡತಿ ಪ್ರೀತಿ ಜಿಂಟಾ ಅವರು ಈಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ನತ್ತ ಕಣ್ಣು ಹಾಯಿಸಿದ್ದಾರೆ.ಸ್ಟೆಲೆನ್ ಬಾಷ್ ಮೊನಾರ್ಕ್ಸ್ ಎಂಬ ಟಿ20 ತಂಡವನ್ನು ಖರೀದಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟಿ20 ಗ್ಲೋಬಲ್ ಲೀಗ್ ನಲ್ಲಿ ಈ ತಂಡ ಸೇರಿದಂತೆ ಎಂಟು ತಂಡಗಳು ಪಾಲ್ಗೊಳ್ಳಲಿವೆ. ಐಪಿಎಲ್, ಕೆರಿಬಿಯನ್ ಲೀಗ್ ನಂತರ ದಕ್ಷಿಣ ಆಫ್ರಿಕಾದಲ್ಲೂ ಕಿಂಗ್ ಖಾನ್ ಶಾರುಖ್ ಅವರು ತಂಡವೊಂದನ್ನು ಖರೀದಿಸಿದ್ದಾರೆ. ಈಗ ಪ್ರೀತಿ ಕೂಡಾ ಅದೇ ಹಾದಿ ಹಿಡಿದಿದ್ದಾರೆ.

Preity Zinta to own Monarchs in Global T20 league

'ಪ್ರೀತಿ ಅವರು ಐಪಿಎಲ್ ಕ್ರಿಕೆಟ್ ಗೆ ಉತ್ತೇಜನ ನೀಡಿದ್ದನ್ನು ನೋಡಿದ್ದೇವೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೀಗ್ ಗೆ ಸ್ವಾಗತ' ಎಂದು ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮುಖ್ಯ ಕಾರ್ಯನಿರ್ವಾಹಕ ಹರೂನ್ ಲೊರ್ಗಾಟ್ ಅವರು ಪ್ರತಿಕ್ರಿಯಿಸಿದ್ದಾರೆ.

ಬೋಲ್ಯಾಂಡ್ ಪಾರ್ಕಿನಲ್ಲಿ ಮೋನಾರ್ಕ್ಸ್ ತಂಡವನ್ನು ಹುರಿದುಂಬಿಸಲು ಪ್ರೀತಿ ಜಿಂಟಾ ಬರುತ್ತಾರೆ ಎಂಬುದು ಸ್ಥಳೀಯ ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸುದ್ದಿಯಾಗಲಿದೆ ಎಂದು ಮೋರ್ನಾಕ್ಸ್ ತಂಡದ ಪ್ರಮುಖ ಆಟಗಾರ ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ ಟಿ20 ತಂಡಗಳು ಹಾಗೂ ಮಾಲೀಕರು

1. ಬೆನೊನಿ ಜಲ್ಮಿ: ಜಾವೆದ್ ಅಫ್ರಿದಿ
2. ಬ್ಲೊಯಿಮ್ ಸಿಟಿ ಬ್ಲೇಜರ್ಸ್: ಸುಶೀಲ್ ಕುಮಾರ್
3. ಕೇಪ್ ಟೌನ್ ನೈಟ್ ರೈಡರ್ಸ್: ಶಾರುಖ್ ಖಾನ್
4. ಡರ್ಬನ್ ಖಲಂದರ್ಸ್: ರಾಣಾ ಫವಾದ್
5. ಜೋಹಾನ್ಸ್ ಬರ್ಗ್ ಜೈಂಟ್ಸ್: ಜಿಎಂಆರ್ ಗ್ರೂಪ್
6. ನೆಲ್ಸನ್ ಮಂಡೇಲ ಬೇ ಸ್ಟಾರ್ಸ್: ಅಜಯ್ ಸೇಥಿ
7. ಪ್ರೆಟೋರಿಯಾ ಮಾರ್ವೆರಿಕ್ಸ್: ಹರ್ಮಿತ್ ಸ್ಫೋರ್ಟ್ಸ್ ವೆಂಚರ್ಸ್
8. ಸ್ಟೆಲ್ಲೆನ್ ಬಾಶ್ ಮೋನಾರ್ಕ್ಸ್: ಪ್ರೀತಿ ಜಿಂಟಾ

Story first published: Friday, September 8, 2017, 17:04 [IST]
Other articles published on Sep 8, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ