ಕೆಟ್ಟ ದಾಖಲೆ ನಿರ್ಮಿಸಿದ ಪಂಜಾಬ್ ಕಿಂಗ್ಸ್‌ನ ನಿಕೋಲಸ್ ಪೂರನ್

ಅಹ್ಮದಾಬಾದ್: ಪಂಜಾಬ್ ಕಿಂಗ್ಸ್‌ನ ಬ್ಯಾಟ್ಸ್‌ಮನ್, ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಬೇಡದ ದಾಖಲೆಗೆ ಕಾರಣರಾಗಿದ್ದಾರೆ. ಶನಿವಾರ (ಏಪ್ರಿಲ್ 30) ನಡೆದ ಐಪಿಎಲ್ 26ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪೂರನ್ ಈ ದಾಖಲೆಗೆ ನಿರ್ಮಿಸಿದ್ದಾರೆ.
ಪಂಜಾಬ್ ಕಿಂಗ್ಸ್ ಪರ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ನಿಕೋಲಸ್ ಪೂರನ್ 11.3ನೇ ಓವರ್‌ನಲ್ಲಿ ಕೈಲ್ ಜೇಮಿಸನ್ ಎಸೆತಕ್ಕೆ ಶಹಬಾಝ್ ಅಹ್ಮದ್‌ಗೆ ಕ್ಯಾಚಿತ್ತು 0 ರನ್‌ಗೆ ನಿರ್ಗಮಿಸಿದರು. ಇದರೊಂದಿಗೆ ಅವರ ಹೆಸರಿನಲ್ಲಿ ಕೆಟ್ಟ ದಾಖಲೆ ನಿರ್ಮಾಣವಾಗಿದೆ.
ಐಪಿಎಲ್‌ನಲ್ಲಿ 4 ಬಾರಿ ಡಕ್‌ಔಟ್ ಆಗಿರುವ ದಾಖಲೆ ಪಟ್ಟಿಯಲ್ಲಿ ಪೂರನ್ ಕೂಡ ಸೇರಿಕೊಂಡಿದ್ದಾರೆ. ಐಪಿಎಲ್‌ನಲ್ಲಿ 4ಕ್ಕೂ ಹೆಚ್ಚು ಸಾರಿ 0ಗೆ ವಿಕೆಟ್ ಒಪ್ಪಿಸಿದವರ ಪಟ್ಟಿಯಲ್ಲಿ ಈಗ 5 ಮಂದಿಯಿದ್ದಾರೆ. ಕನ್ನಡಿಗ ಮನೀಶ್ ಪಾಂಡೆ ಕೂಡ ಈ ಪಟ್ಟಿಯಲ್ಲಿದ್ದಾರೆ.
ಐಪಿಎಲ್ ಸೀಸನ್ ಒಂದರಲ್ಲಿ 4 ಬಾರಿ ಡಕ್‌ಔಟ್ ಆದವರ ಪಟ್ಟಿ
* ಹರ್ಷಲ್ ಗಿಬ್ಸ್, 2019ರಲ್ಲಿ
* ಮಿಥುನ್ ಮನ್‌ಹಾಸ್, 2009ರಲ್ಲಿ
* ಮನೀಶ್ ಪಾಂಡೆ, 2012ರಲ್ಲಿ
* ಶಿಖರ್ ಧವನ್, 2020ರಲ್ಲಿ
* ನಿಕೋಲಸ್ ಪೂರನ್, 2021*ರಲ್ಲಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications