ಚತುಷ್ಕೋನ ಸರಣಿಯ ಎರಡು ಪಂದ್ಯಗಳು ಮಳೆಗೆ ಆಹುತಿ

ಮುಲಪಾಡು, ಆಗಸ್ಟ್ 17: ನಾಲ್ಕು ತಂಡಗಳ ಚತೊಷ್ಕೋನ ಸರಣಿಯ ಮೊದಲ ಎರಡೂ ಪಂದ್ಯಗಳು ಮಳೆಗೆ ಆಹುತಿಯಾಗಿವೆ.
ಆಂಧ್ರಪ್ರದೇಶದ ಮುಲಪಾಡುವಿನಲ್ಲಿ ಭಾರತ ಎ ಮತ್ತು ಆಸ್ಟ್ರೇಲಿಯಾ ಎ ಹಾಗೂ ವಿಜಯವಾಡದಲ್ಲಿ ಭಾರತ ಬಿ ಮತ್ತು ದಕ್ಷಿಣ ಆಫ್ರಿಕಾ ಬಿ ತಂಡಗಳ ನಡುವೆ ಶುಕ್ರವಾರ ಪಂದ್ಯಗಳು ನಡೆಯಬೇಕಿದ್ದವು.
ಆದರೆ, ಪ್ರತಿಕೂಲ ಹವಾಮಾನದ ಕಾರಣ ಎರಡೂ ಪಂದ್ಯಗಳು ಒಂದೂ ಎಸೆತ ಆಡದೆಯೇ ರದ್ದುಗೊಂಡವು. ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮೈದಾನಗಳು ಸಂಪೂರ್ಣ ಒದ್ದೆಯಾಗಿದ್ದವು. ಶನಿವಾರವೂ ಇಲ್ಲಿ ಪಂದ್ಯ ನಡೆಸುವುದು ಸಾಧ್ಯವಿಲ್ಲ ಎಂದು ಕ್ಯುರೇಟರ್ ಎಸ್. ಶ್ರೀರಾಮ್ ತಿಳಿಸಿದ್ದಾರೆ.
ಹೀಗಾಗಿ ಪಂದ್ಯದ ಅಧಿಕಾರಿಗಳು ಎರಡೂ ಪಂದ್ಯಗಳನ್ನು ರದ್ದುಗೊಳಿಸಲು ತೀರ್ಮಾನಿಸಿ, ನಾಲ್ಕು ತಂಡಗಳಿಗೆ ತಲಾ ಎರಡು ಅಂಕಗಳನ್ನು ಹಂಚಿದರು.
ಪ್ರತಿ ತಂಡವೂ ತಲಾ ಎರಡು ಬಾರಿ ಮುಖಾಮುಖಿಯಾಗಲಿದ್ದು, ಆಗಸ್ಟ್ 29ರಂದು ಫೈನಲ್ ಪಂದ್ಯ ನಡೆಯಲಿದೆ.
ಭಾರತ ಎ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದರೆ, ಭಾರತ ಬಿ ತಂಡಕ್ಕೆ ಮನೀಶ್ ಪಾಂಡೆ ನಾಯಕರಾಗಿದ್ದಾರೆ.
Story first published: Friday, August 17, 2018, 18:37 [IST]
Other articles published on Aug 17, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications