ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಜಮಾಮ್ ಗೆ 1 ಕೋಟಿ ರು. ಬಹುಮಾನ: ಭುಗಿಲೆದ್ದ ಅಸಮಾಧಾನ

ಇಂಜಮಾಮ್ ಉಲ್ ಹಕ್ ಗೆ ಪಾಕಿಸ್ತಾನ ಸರ್ಕಾರ 1 ಕೋಟಿ ರು. ನಗದು ಬಹುಮಾನ. ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ತಂಡ ಗೆದ್ದಿದ್ದಕ್ಕೆ ಬಹುಮಾನ. ಆಯ್ಕೆ ಮಂಡಳಿ ಅಧ್ಯಕ್ಷರು, ಸದಸ್ಯರಿಗೆ ತಲಾ 1 ಕೋಟಿ ರು. ಬಹುಮಾನ.

ಇಸ್ಲಾಮಾಬಾದ್, ಜುಲೈ 7: ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಮಂಡಳಿ ಅಧ್ಯಕ್ಷರಾಗಿರುವ ಇಂಜಮಾಮ್ ಉಲ್ ಹಕ್ ಅವರಿಗೆ ಪಾಕಿಸ್ತಾನ ಸರ್ಕಾರ 1 ಕೋಟಿ ರು. ಬಹುಮಾನ ನೀಡಿರುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ವಲಯದಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಇತ್ತೀಚೆಗೆ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ, ಭಾರತವನ್ನು ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ, ಸಂತುಷ್ಟವಾಗಿರುವ ಪಾಕಿಸ್ತಾನ ಸರ್ಕಾರ, ತಂಡದ ಎಲ್ಲಾ ಸದಸ್ಯರಿಗೆ, ತಂಡದ ಕೋಚ್ ಹಾಗೂ ಸಹಾಯಕ ಕೋಚ್ ಹುದ್ದೆಯಲ್ಲಿರುವವರಿಗೆ ಬಹುಮಾನ ಘೋಷಿಸಿದೆ. ಹಾಗೆಯೇ, ಚಾಂಪಿಯನ್ಸ್ ಟ್ರೋಫಿಗಾಗಿ ತಂಡವನ್ನು ಆಯ್ಕೆ ಮಾಡಿದ್ದ ಆಯ್ಕೆ ಮಂಡಳಿ ಸದಸ್ಯರಿಗೂ ಬಹುಮಾನ ಘೋಷಿಸಿದೆ.

ಭಾರತವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಪಾಕಿಸ್ತಾನಭಾರತವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಪಾಕಿಸ್ತಾನ

Questions over Inzamam's Rs. 1 crore cash award post Champions Trophy win

ಆದರೆ, ಕೋಚ್ ಗಳಿಗೆ, ಸಹಾಯಕ ಕೋಚ್ ಗಳಿಗೆ ನೀಡಿರುವ ಬಹುಮಾನ ಮೊತ್ತಕ್ಕೆ ದುಪ್ಪಟ್ಟು ಮೊತ್ತವನ್ನು ಆಯ್ಕೆ ಮಂಡಳಿ ಸದಸ್ಯರಿಗೆ ಕೊಟ್ಟಿದ್ದು ಎಲ್ಲರ ಕೆಂಪೇರಿಸಿದೆ.

ಸೋತ ಪಂದ್ಯದಲ್ಲೂ ದಾಖಲೆ ಬರೆದ ಯುವರಾಜ್ ಸಿಂಗ್ಸೋತ ಪಂದ್ಯದಲ್ಲೂ ದಾಖಲೆ ಬರೆದ ಯುವರಾಜ್ ಸಿಂಗ್

ಈ ಬಗ್ಗೆ ಪ್ರತಿಕ್ರಯಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಮಂಡಳಿಯ ಮಾಜಿ ಸದಸ್ಯ ಹಾಗೂ ಪಾಕಿಸ್ತಾನ ತಂಡದ ಮಾಜಿ ತರಬೇತುದಾರ ಮೊಹ್ಶೀನ್ ಖಾನ್, ''ತಂಡದ ಆಟಗಾರರನ್ನು ಸೂಕ್ತ ರೀತಿಯಲ್ಲಿ ತಯಾರುಗೊಳಿಸಲು ಬೆವರಿಳಿಸಿದ ಕೋಚ್ ಗಳಿಗೆ 50 ಲಕ್ಷ ರು. ಬಹುಮಾನ ನೀಡಲಾಗಿದೆ. ಆದರೆ, ಆಯ್ಕೆ ಮಂಡಳಿ ಅಧ್ಯಕ್ಷರಾದ ಇಂಜಮಾಮ್ ಉಲ್ ಹಕ್ ಹಾಗೂ ಇತರ ಸದಸ್ಯರಿಗೆ ತಲಾ 1 ಕೋಟಿ ರು. ನೀಡಲಾಗಿದೆ. ಕೇವಲ ತಂಡವನ್ನು ಆರಿಸಿದವರಿಗೆ ಹೀಗೆ ದುಪ್ಪಟ್ಟು ಬಹುಮಾನ ನೀಡಿರುವುದು ಸರಿಯಲ್ಲ'' ಎಂದು ಹೇಳಿದ್ದಾರೆ.

ಇದೇ ರೀತಿ, ಪಾಕಿಸ್ತಾನ ಕ್ರಿಕೆಟ್ ಆಯ್ಕೆ ಮಂಡಳಿಯ ಮತ್ತೊಬ್ಬ ಮಾಜಿ ಅಧ್ಯಕ್ಷ ಇಕ್ಬಾಲ್ ಕಾಸೀಂ ಕೂಡ ಇದೇ ರೀತಿ ಹೇಳಿರುವುದು ಅಲ್ಲಿ ಹೊಸ ವಿವಾದ ಸೃಷ್ಟಿಯಾಗಿರುವುದನ್ನು ತೋರಿಸಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X