ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಪಿನ್ ಬೌಲಿಂಗನ್ನು ಆಕ್ರಮಣಕಾರಿ ಅಸ್ತ್ರವನ್ನಾಗಿಸಿದ್ದು ಶೇನ್ ವಾರ್ನ್: ಆರ್ ಅಶ್ವಿನ್

R Ashwin said Shane Warne brought spin as an attacking weapon to cricketing world

ಕಳೆದ ಶುಕ್ರವಾರ ಹೃದಯಾಘಾತಕ್ಕೆ ಒಳಗಾಗಿ ಅಕಾಲಿಕ ನಿಧನ ಹೊಂದಿದ ದಿಗ್ಗಜ ಕ್ರಿಕೆಟಿಗ ಶೇನ್ ವಾರ್ನ್ ಅವರನ್ನು ಭಾರತೀಯ ಕ್ರಿಕೆಟ್ ತಂಡದ ಅನುಭವಿ ಆಟಗಾರ ಆರ್ ಅಶ್ವಿನ್ ಭಾವನಾತ್ಮಕವಾಗಿ ಸ್ಮರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆರ್ ಅಶ್ವಿನ್ ವಿಶ್ವ ಕ್ರಿಕೆಟ್‌ಗೆ ಶೇನ್ ವಾರ್ನ್ ನೀಡಿದ ಕೊಡುಗೆಯನ್ನು ವಿವರಿಸಿದ್ದಾರೆ. ಕ್ರಿಕೆಟ್ ಲೋಕದಲ್ಲಿ ಸ್ಪಿನ್ ಬೌಲಿಂಗ್‌ಅನ್ನು ಆಕ್ರಮಣಕಾರಿ ಅಸ್ತ್ರವನ್ನಾಗಿಸಿದ ಶ್ರೇಯಸ್ಸು ಶೇನ್ ವಾರ್ನ್‌ಗೆ ಸಲ್ಲಬೇಕು ಎಂದು ಆರ್ ಅಶ್ವಿನ್ ಹೇಳಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆರ್ ಅಶ್ವಿನ್ "ವಿಶ್ವ ಕ್ರಿಕೆಟ್ ನಕ್ಷೆಯಲ್ಲಿ ಬೌಲಿಂಗ್‌ನಲ್ಲಿ ಸ್ಪಿನ್ ವಿಭಾಗವನ್ನು ಮುನ್ನಡೆಸುವಾಗ ಶೇನ್ ವಾರ್ನ್ ಅವರನ್ನು ನಾನು ಧ್ವಜಧಾರಿಯಾಗಿ ನೋಡುತ್ತೇನೆ. ವಿಶ್ವ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಮೂವರು ಬೌಲರ್‌ಗಳು ಕೂಡ ಸ್ಪಿನ್ನರ್‌ಗಳಾಗಿದ್ದು ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್ ಮತ್ತು ಅನಿಲ್ ಕುಂಬ್ಳೆ ಆ ಸ್ಥಾನವನ್ನು ಪಡೆದುಕೊಂಡಿದ್ದಾ" ಎಂದಿದ್ದಾರೆ ಆರ್ ಅಶ್ವಿನ್.

100ನೇ ಟೆಸ್ಟ್ ಬಳಿಕ ಕೋಚ್ ಹಾಗೂ ಬಿಸಿಸಿಐಗೆ ಕೃತಜ್ಞತೆ ತಿಳಿಸಿದ ವಿರಾಟ್ ಕೊಹ್ಲಿ100ನೇ ಟೆಸ್ಟ್ ಬಳಿಕ ಕೋಚ್ ಹಾಗೂ ಬಿಸಿಸಿಐಗೆ ಕೃತಜ್ಞತೆ ತಿಳಿಸಿದ ವಿರಾಟ್ ಕೊಹ್ಲಿ

ಶೇನ್ ವಾರ್ನ್ ಅತ್ಯಂತ ಆಸಕ್ತಿಕರ ವ್ಯಕ್ತಿತ್ವವನ್ನು ಹೊಂದಿದ್ದರು. ಆತನೊಂದಿಗೆ ಅನೇಕ ಆಸ್ಟ್ರೇಲಿಯಾದ ದಿಗ್ಗಜರು ಹಂಚಿಕೊಳ್ಳಲು ಬಹಳಷ್ಡು ಉತ್ತಮ ಅಂಶಗಳನ್ನು ಹೊಂದಿದ್ದಾರೆ. ಈ ಜೀವನ ಅತ್ಯಂತ ಚಂಚಲ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ನನಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಏನಾಗಲಿದೆ ಎಂಬುದನ್ನು ಊಹಿಸಲು ನಮ್ಮಿಂದ ಸಾಧ್ಯವಿಲ್ಲ ಎಂದು ಆರ್ ಅಶ್ವಿನ್ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

145 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿರುವ ಶೇನ್ ವಾರ್ನ್ 708 ವಿಕೆಟ್‌ಗಳನ್ನು ಪಡೆದುಕೊಂಡಿದ್ದು 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಸಂಪಾದಿಸಿದ್ದಾರೆ. ಈ ಮೂಲಕ ಅವರು ವಿಶ್ವ ಕ್ರಿಕೆಟ್‌ನಲ್ಲಿ ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರು ಎನಿಸಿದ್ದಾರೆ.

ಶೇನ್ ವಾರ್ನ್ ಕೋಹ್ ಸಮುಯ್ ದ್ವೀಪದ ಸಮುಜಾನ್ ರೆಸಾರ್ಟ್‌ನಲ್ಲಿ ವಾಸವಿದ್ದ ಗೆಳೆಯರ ಗುಂಪಿನಲ್ಲಿದ್ದ ಥಾಮಸ್ ಹಾಲ್ ಎಂಬವರು 'ದಿ ಸ್ಪೋರ್ಟಿಂಗ್ ನ್ಯೂಸ್‌'ಗೆ ಬರೆದಿದ್ದ ಆರ್ಟಿಕಲ್‌ನಲ್ಲಿ ಶೇನ್ ವಾರ್ನ್ ಅವರ ಸಾವಿಗೂ ಹಿಂದಿನ ಒಂದು ಗಂಟೆಯ ಅವಧಿಯಲ್ಲಿ ಏನಾಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಈ ಬರಹದಲ್ಲಿ ಹಾಲ್ ಶೇನ್ ವಾರ್ನ್ ಐಪಿಎಲ್‌ನಲ್ಲಿ ವಿಶೇಷವಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಸಾಧನೆಗೆ ಹೆಮ್ಮೆಯನ್ನು ಹೊಂದಿದ್ದರು ಎಂದು ತಿಳಿಸಿದ್ದರು. "ಕ್ರಿಕೆಟ್ ವಿಚಾರಗಳ ಬಗ್ಗೆ ಹರಟಿ ತಮಾಷೆ ಮಾಡಿಕೊಂಡ ನಂತರ ಶೇನ್ ವಾರ್ನ್ ಜೊತೆಗೆ ಕೆಲವರು ಫೋಟೋ ತೆಗೆಸಿಕೊಂಡರು. ಅದಾದ ಬಳಿಕ ನಾವೆಲ್ಲಾ ತಕ್ಷಣವೇ ಏನನ್ನಾದರೂ ತಿನ್ನಲು ನಿರ್ಧರಿಸದೆವು" ಎಂದು ಈ ಆರ್ಟಿಕಲ್‌ನಲ್ಲಿ ಬರೆದುಕೊಂಡಿದ್ದಾರೆ.

ಐಪಿಎಲ್: ಕೊನೆಗೂ ನೂತನ ನಾಯಕನ ಘೋಷಣೆಯ ದಿನಾಂಕ ಪ್ರಕಟಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರುಐಪಿಎಲ್: ಕೊನೆಗೂ ನೂತನ ನಾಯಕನ ಘೋಷಣೆಯ ದಿನಾಂಕ ಪ್ರಕಟಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಇನ್ನು ಶೇನ್ ವಾರ್ನ್ ಅವರ ಅಕಾಲಿಕ ನಿಧನದ ನಂತರ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ವಾರ್ನ್ ಬಗ್ಗೆ ಭಾವನಾತ್ಮಕ ಪತ್ರವೊಂದನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. "ಶೇನ್ ವಾರ್ನ್.. ಮಾಯಾಜಾಲಕ್ಕೆ ಅನ್ವರ್ಥ ನಾಮ. ನಮ್ಮ ಮೊದಲ ರಾಯಲ್. ಅಸಾಧ್ಯ ಎಂಬುದು ಒಂದು ಸುಳ್ಳು ಎಂಬುದನ್ನು ನಂಬುವಂತೆ ಮಾಡಿದ ವ್ಯಕ್ತಿ. ತನ್ನ ಹಾದಿಯಲ್ಲೇ ನಡೆದ, ತಾನು ನುಡಿದ ಮಾತಿನಂತೆಯೇ ಆಡಿದ, ಅಂಡರ್‌ಡಾಗ್‌ಗಳಾಗಿದ್ದವರನ್ನು ಚಾಂಪಿಯನ್ನರನ್ನಾಗಿಸಿದ ವ್ಯಕ್ತಿ. ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿಸುವ ಸಾಮರ್ಥ್ಯ ಹೊಂದಿದ್ದ ಮಾರ್ಗದರ್ಶಕ"

ಎಂಎಸ್ ಧೋನಿ ಅಭ್ಯಾಸದಲ್ಲಿ ತೊಡಗಿರುವ ವಿಡಿಯೋ ವೈರಲ್ | Oneindia Kannada

"ಈ ಕ್ಷಣದಲ್ಲಿ ನಮ್ಮ ಭಾವನೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಆದರೆ ಅವರ ಅವರ ಮುಗುಳಿನಗೆಯಿಲ್ಲದೆ, ಅವರ ಬಿದ್ದಿವಂತಿಕೆಯಿಲ್ಲದೆ, ಜೀವನವನ್ನು ಸಂಪೂರ್ಣವಾಗಿ ಆನಂದಿಸುವ ಅವರ ಲವಲವಿಕೆಯನ್ನು ಕಳೆದುಕೊಂಡು ಜಗತ್ತು ಎಷ್ಟು ಬಡವಾಗಿದೆ ಎಂಬುದು ನಮಗೆ ತಿಳಿದಿದೆ. ಜಗತ್ತಿನ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಂತೆಯೇ ನಮ್ಮ ಹೃದಯ ಕೂಡ ಸಂಪೂರ್ಣ ಛಿದ್ರವಾಗಿದೆ" ಎಂದು ರಾಜಸ್ಥಾನ್ ರಾಯಲ್ಸ್ ಭಾವನಾತ್ಮಕ ನುಡಿ ನಮನ ಸಲ್ಲಿದೆ.

Story first published: Tuesday, March 8, 2022, 23:38 [IST]
Other articles published on Mar 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X