ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಮಾಲೀಕ, ಗ್ರೌಂಡ್ಸ್‌ಮನ್‌ನೊಂದಿಗೆ ಒಂದೇ ರೀತಿ ಮಾತಾಡುವ ಲೆಜೆಂಡ್ ಯಾರು?; ಸ್ಯಾಮ್ಸನ್ ಹೇಳಿದ್ದೇನು?

Rahul Dravid Was Spoke With Owner And Groundsman In Same Way: Sanju Samson Talk On Legends Humility

ತಂಡದ ಮಾಲೀಕರು ಮತ್ತು ಗ್ರೌಂಡ್ಸ್‌ಮನ್‌ನೊಂದಿಗೆ ಒಂದೇ ರೀತಿಯಲ್ಲಿ ಮಾತನಾಡುವ ಭಾರತೀಯ ಕ್ರಿಕೆಟ್‌ ಲೆಜೆಂಡ್‌ನ ವಿನಮ್ರತೆಯ ಬಗ್ಗೆ ಪ್ರಸ್ತುತ ರಾಜಸ್ತಾನ ರಾಯಲ್ಸ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಮಾಹಿತಿ ನೀಡಿದ್ದಾರೆ.

ಟೀಂ ಮಾಲೀಕ, ಗ್ರೌಂಡ್ಸ್‌ಮನ್‌ನೊಂದಿಗೆ ಒಂದೇ ರೀತಿ ಮಾತನಾಡುವ ಲೆಜೆಂಡ್ ಬೇರೆ ಯಾರೂ ಅಲ್ಲ, ಅದು ಭಾರತದ ಮಾಜಿ ನಾಯಕ ಮತ್ತು ಪ್ರಸ್ತುತ ಮುಖ್ಯ ಕೋಚ್ ರಾಹುಲ್ ದ್ರಾವಿಡ್. ಇದನ್ನು ಹೇಳಿದ್ದು ಅವರ ಗರಡಿಯಲ್ಲಿ ಪಳಗಿರುವ ಸಂಜು ಸ್ಯಾಮ್ಸನ್.

ರಾಹುಲ್ ದ್ರಾವಿಡ್ ಅವರು ತಮ್ಮ ವಿನಮ್ರ ಸ್ವಭಾವದಿಂದ ಕ್ರಿಕೆಟ್ ವಲಯದಲ್ಲಿ ಹೆಸರುವಾಸಿಯಾಗಿದ್ದಾರೆ. ಆಟಗಾರನಾಗಿಯೂ ಸಹ ದ್ರಾವಿಡ್ ಯಾವಾಗಲೂ ಪಿಚ್‌ನಲ್ಲಿ ಶಾಂತ ವರ್ತನೆಯನ್ನು ಕಾಪಾಡಿಕೊಂಡಿದ್ದಾರೆ ಮತ್ತು ಪಿಚ್‌ನಿಂದ ಹೊರಗಿನ ವ್ಯಕ್ತಿಯಾಗಿದ್ದಾಗಲೂ ಎದುರಾಳಿಗಳಿಂದ ಗೌರವಿಸಲ್ಪಟ್ಟ ವ್ಯಕ್ತಿತ್ವ ಅವರದು.

Rahul Dravid Was Spoke With Owner And Groundsman In Same Way: Sanju Samson Talk On Legends Humility

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ರಾಹುಲ್ ದ್ರಾವುಡ್ ರಾಯಲ್ಸ್ ತಂಡದ ಭಾಗವಾಗಿದ್ದಾಗ ಅವರಿಂದ ಕಲಿತ ಪಾಠಗಳಲ್ಲಿ ಒಂದನ್ನು ಹೈಲೈಟ್ ಮಾಡಿ ಹೇಳಿದ್ದಾರೆ.

"ರಾಹುಲ್ ದ್ರಾವಿಡ್ ರಾಜಸ್ತಾನ ರಾಯಲ್ಸ್ ತಂಡದಲ್ಲಿದ್ದಾಗ, ನಾವು ಅವರನ್ನು ಯಾವಾಗಲೂ ಗಮನಿಸುತ್ತಿದ್ದೆವು. ನಮ್ಮ ಮಾಲೀಕರು ಮನೋಜ್ ಬದಾಲೆ. ಅವರು ತಂಡದ ಪ್ರಮುಖ ವ್ಯಕ್ತಿ. ಅವರು (ದ್ರಾವಿಡ್) ಮನೋಜ್ ಬದಾಲೆ ಮತ್ತು ಗ್ರೌಂಡ್ಸ್‌ಮನ್‌ರೊಂದಿಗೆ ಒಂದೇ ರೀತಿಯಲ್ಲಿ ಮಾತನಾಡುತ್ತಾರೆ. ಅದು ನಾನು ಅವರಿಂದ ಕಲಿತ ದೊಡ್ಡ ವಿಷಯ,'' ಎಂದು ಸಂಜು ಸ್ಯಾಮ್ಸನ್ ಅವರು ಗೌರವ್ ಕಪೂರ್ ಅವರ 'ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್' ಕಾರ್ಯಕ್ರಮದಲ್ಲಿ ಹೇಳಿದರು.

Rahul Dravid Was Spoke With Owner And Groundsman In Same Way: Sanju Samson Talk On Legends Humility

ಇದೇ ವೇಳೆ "ರಾಹುಲ್ ದ್ರಾವಿಡ್ ಅವರು ಅದನ್ನು ಪ್ರಾಮಾಣಿಕವಾಗಿ ಮಾಡುತ್ತಾರೆ ಮತ್ತು ಅದನ್ನು ಪ್ರದರ್ಶನಕ್ಕಾಗಿ ಮಾಡುವುದಿಲ್ಲ,'' ಎಂದು ಸ್ಯಾಮ್ಸನ್ ತಿಳಿಸಿದರು.

ಸಂಜು ಸ್ಯಾಮ್ಸನ್ ಡೆಲ್ಲಿ ಡೇರ್‌ಡೆವಿಲ್ಸ್‌ನಲ್ಲಿ (ಈಗ ಡೆಲ್ಲಿ ಕ್ಯಾಪಿಟಲ್ಸ್) ಇದ್ದಾಗಲೂ ರಾಹುಲ್ ದ್ರಾವಿಡ್‌ನೊಂದಿಗೆ ಆದ ತಮ್ಮ ಅನುಭವದ ಬಗ್ಗೆ ಮಾತನಾಡಿದರು.

"2 ವರ್ಷಗಳ ನಂತರ ನಾವು ದೆಹಲಿಗೆ ಹೋದೆವು ಮತ್ತು ಅವರು ಅಲ್ಲಿ ಕೋಚ್ ಆಗಿದ್ದರು. ಆ ಸಮಯದಲ್ಲಿ ನಾನು ಕರುಣ್ ನಾಯರ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ಮಯಾಂಕ್ ಅಗರ್ವಾಲ್ ಅವರೊಂದಿಗೆ ಇದ್ದೆವು ಮತ್ತು ನಾವೆಲ್ಲರೂ ಯಾವಾಗಲೂ ಅವರಿಂದ ಏನನ್ನಾದರೂ ಕಲಿಯಲು ಬಯಸುತ್ತಿದ್ದೆವು,'' ಎಂದು ರಾಜಸ್ತಾನ ರಾಯಲ್ಸ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ನೆನಪುಗಳನ್ನು ಮೆಲುಕು ಹಾಕಿದರು.

Pant ಒಂದೇ ಓವರ್‌ನಲ್ಲಿ 22 run ಗಳಿಸಿ ಔಟ್ ಆದರು | Oneindia Kannada

ಸಂಜು ಸ್ಯಾಮ್ಸನ್ ಅವರ ನಾಯಕತ್ವದ ರಾಜಸ್ಥಾನ ರಾಯಲ್ಸ್ 10 ಪಂದ್ಯಗಳಲ್ಲಿ 6 ಗೆಲುವು ಮತ್ತು 4 ಸೋಲುಗಳೊಂದಿಗೆ 12 ಅಂಕಗಳನ್ನು ಗಳಿಸಿ ಐಪಿಎಲ್ 2022 ಪಾಯಿಂಟ್ ಪಟ್ಟಿಯಲ್ಲಿ ಪ್ರಸ್ತುತ ಮೂರನೇ ಸ್ಥಾನದಲ್ಲಿದೆ. ಪಂದ್ಯಾವಳಿಯ ಲೀಗ್ ಹಂತದ ಮುಕ್ತಾಯದ ಹಂತದಲ್ಲಿ ಕನಿಷ್ಠ 3 ರಿಂದ 4 ತಂಡಗಳೊಂದಿಗೆ ರಾಜಸ್ಥಾನ ರಾಯಲ್ಸ್ ತಂಡವು ಬಿಗಿಯಾದ ಪ್ಲೇ-ಆಫ್ಸ್ ಪೈಪೋಟಿ ನಡೆಸುತ್ತಿದೆ.

Story first published: Thursday, May 5, 2022, 18:14 [IST]
Other articles published on May 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X