ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗುಂಪು ಬೇಡ; ಟಿ20 ವಿಶ್ವಕಪ್‌ನಲ್ಲಾದ ತಪ್ಪು ಮತ್ತೆ ಆಗದಿರಲು ಮಾಸ್ಟರ್‌ಪ್ಲಾನ್ ಹಾಕಿದ ಕೋಚ್ ದ್ರಾವಿಡ್

Rahul Dravid to interact with team india players individually before New Zealand Series

ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಸೆಮಿಫೈನಲ್ ಹಂತ ಪ್ರವೇಶಿಸುವುದರಲ್ಲಿ ವಿಫಲವಾಗಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದೆ. ಟೂರ್ನಿಯ ಆರಂಭದಲ್ಲಿ ತನ್ನ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಹೀನಾಯವಾಗಿ ಸೋತ ಟೀಂ ಇಂಡಿಯಾ ನಂತರ ಉಳಿದ ತಂಡಗಳ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸಿದರೂ ಕೂಡ ಸೆಮಿಫೈನಲ್ ಹಂತ ಪ್ರವೇಶಿಸಲು ಬೇಕಾದ ಅಂಕಗಳಿಲ್ಲದೇ ಟೂರ್ನಿಯಿಂದ ಹೊರ ಬೀಳಬೇಕಾಯಿತು.

ಟೀಮ್ ಇಂಡಿಯಾ ಒಳಗೇ ಮುಂಬೈ ಗುಂಪಿದೆ, ಕೊಹ್ಲಿ ಆದಷ್ಟು ಬೇಗ ತಂಡವನ್ನೂ ತ್ಯಜಿಸಲಿದ್ದಾರೆ: ಮಾಜಿ ಕ್ರಿಕೆಟಿಗಟೀಮ್ ಇಂಡಿಯಾ ಒಳಗೇ ಮುಂಬೈ ಗುಂಪಿದೆ, ಕೊಹ್ಲಿ ಆದಷ್ಟು ಬೇಗ ತಂಡವನ್ನೂ ತ್ಯಜಿಸಲಿದ್ದಾರೆ: ಮಾಜಿ ಕ್ರಿಕೆಟಿಗ

ಟೂರ್ನಿ ಆರಂಭಕ್ಕೂ ಮುನ್ನ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಲಿರುವ ತಂಡಗಳ ಪಟ್ಟಿಯಲ್ಲಿದ್ದ ಟೀಮ್ ಇಂಡಿಯಾ ಈಗ ಸೆಮಿಫೈನಲ್ ಹಂತಕ್ಕೂ ಪ್ರವೇಶಿಸಲಾಗದೇ ಟೂರ್ನಿಯಿಂದ ಹೊರಬಿದ್ದಿರುವುದರ ಕುರಿತು ಸಾಕಷ್ಟು ಚರ್ಚೆಗಳು ಮತ್ತು ಟೀಕೆಗಳು ವ್ಯಕ್ತವಾಗಿವೆ. ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿದ ಅಂತಿಮ ಟಿ ಟ್ವೆಂಟಿ ಟೂರ್ನಿ ಇದಾಗಿದ್ದರೂ ಕೂಡ ಅಗತ್ಯವಿದ್ದ ದೊಡ್ಡ ಪ್ರದರ್ಶನವನ್ನು ನೀಡುವಲ್ಲಿ ಕೊಹ್ಲಿ ಹುಡುಗರು ವಿಫಲರಾದರು. ಹೀಗೆ ಟೂರ್ನಿಯಲ್ಲಿ ಟೀಮ್ ಇಂಡಿಯಾ ವಿಫಲವಾದ ನಂತರ ಟಿ ಟ್ವೆಂಟಿ ವಿಶ್ವಕಪ್‌ಗೆ ಆಯ್ಕೆಯಾಗಿದ್ದ ಭಾರತ ತಂಡದ ಆಟಗಾರರ ಕುರಿತು ಪ್ರಶ್ನೆಗಳೂ ಸಹ ಎದ್ದಿದ್ದವು.

ಮ್ಯಾಥ್ಯೂ ವೇಡ್ ಕ್ಯಾಚ್ ಬಿಟ್ಟು ಪಾಕಿಸ್ತಾನದ ಸೋಲಿಗೆ ಕಾರಣನಾದ ಹಸನ್ ಅಲಿಗೆ ಬಂದ ಗತಿ ಇದು!ಮ್ಯಾಥ್ಯೂ ವೇಡ್ ಕ್ಯಾಚ್ ಬಿಟ್ಟು ಪಾಕಿಸ್ತಾನದ ಸೋಲಿಗೆ ಕಾರಣನಾದ ಹಸನ್ ಅಲಿಗೆ ಬಂದ ಗತಿ ಇದು!

ಅದರಲ್ಲಿಯೂ ಟೂರ್ನಿಯುದ್ದಕ್ಕೂ ಗಾಯದ ಸಮಸ್ಯೆಯಿಂದ ಸರಿಯಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿಯೂ ತೊಡಗಿಸಿಕೊಳ್ಳದ ಆಲ್ ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಆಯ್ಕೆಯ ಕುರಿತು ಹಲವಾರು ಮಾಜಿ ಕ್ರಿಕೆಟಿಗರು ಮತ್ತು ನೆಟ್ಟಿಗರು ಸಾಲು ಸಾಲು ಪ್ರಶ್ನೆಗಳನ್ನು ಟೀಮ್ ಇಂಡಿಯಾ ಆಯ್ಕೆಗಾರರಿಗೆ ಎಸೆದರು. ಹೀಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆಟಗಾರರ ಆಯ್ಕೆಯಲ್ಲಿದ್ದ ಗೊಂದಲ ಮತ್ತು ಗಾಯದ ಸಮಸ್ಯೆಗಳು ಕೂಡ ಟೀಮ್ ಇಂಡಿಯಾದ ಹಿನ್ನಡೆಗೆ ಕಾರಣವಾಯಿತು ಎಂದರೆ ನಿಜಕ್ಕೂ ತಪ್ಪಾಗಲಾರದು. ಹೀಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕೆಲ ತಪ್ಪುಗಳಿಂದ ಹಿನ್ನಡೆ ಅನುಭವಿಸಿರುವ ಟೀಮ್ ಇಂಡಿಯಾ ಮುಂಬರಲಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಮತ್ತದೇ ತಪ್ಪನ್ನು ಮಾಡಬಾರದು ಎಂಬ ಕಾರಣದಿಂದಾಗಿ ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ಹೊಸ ತಂತ್ರವನ್ನು ಯೋಜಿಸಿದ್ದು, ಅದರ ವಿವರ ಮುಂದೆ ಇದೆ ಓದಿ..

ಆಟಗಾರರ ಜೊತೆ ವೈಯಕ್ತಿಕವಾಗಿ ಚರ್ಚಿಸಲಿದ್ದಾರೆ ರಾಹುಲ್ ದ್ರಾವಿಡ್

ಆಟಗಾರರ ಜೊತೆ ವೈಯಕ್ತಿಕವಾಗಿ ಚರ್ಚಿಸಲಿದ್ದಾರೆ ರಾಹುಲ್ ದ್ರಾವಿಡ್

ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ಇನ್ನೇನು ಕೆಲವೇ ದಿನಗಳಲ್ಲಿ ತಂಡದ ಪ್ರತಿಯೊಬ್ಬ ಆಟಗಾರನ ಜೊತೆ ಪ್ರತ್ಯೇಕವಾಗಿ ಚರ್ಚೆಯನ್ನು ನಡೆಸಲಿದ್ದಾರೆ. ನೂತನ ಕೋಚ್ ಆಗಿ ಆಯ್ಕೆಯಾದ ಕೂಡಲೇ ತಂಡದ ಎಲ್ಲ ಆಟಗಾರರನ್ನು ಗುಂಪು ಸೇರಿಸಿ ಮಾತನಾಡುವ ಬದಲಾಗಿ ಒಬ್ಬೊಬ್ಬರನ್ನೇ ಭೇಟಿಯಾಗುವುದರ ಮೂಲಕ ಚರ್ಚೆ ನಡೆಸಲು ರಾಹುಲ್ ದ್ರಾವಿಡ್ ಮುಂದಾಗಿದ್ದಾರೆ. ರಾಹುಲ್ ದ್ರಾವಿಡ್ ಅವರ ಈ ತಂತ್ರದಿಂದ ತಂಡದಲ್ಲಿನ ವಿವಿಧ ಆಟಗಾರರ ವೈಯಕ್ತಿಕ ಅಭಿಪ್ರಾಯಗಳನ್ನು ಪಡೆದುಕೊಳ್ಳುವಲ್ಲಿ ದೊಡ್ಡ ಮಟ್ಟಕ್ಕೆ ಸಹಾಯ ಮಾಡಲಿದೆ.

ಫಿಟ್‌ನೆಸ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ ರಾಹುಲ್‌ ದ್ರಾವಿಡ್

ಫಿಟ್‌ನೆಸ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ ರಾಹುಲ್‌ ದ್ರಾವಿಡ್

ನೂತನ ಕೋಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ತಂಡದ ಆಟಗಾರರ ಜೊತೆ ವೈಯಕ್ತಿಕವಾಗಿ ಚರ್ಚಿಸುವುದರ ಮೂಲಕ ಆಟಗಾರರು ಕಣಕ್ಕಿಳಿಯುವಷ್ಟು ಫಿಟ್ ಇದ್ದಾರೋ ಅಥವಾ ಇಲ್ಲವೋ ಎಂಬ ಮಾಹಿತಿಯನ್ನು ಆಟಗಾರರಿಂದಲೇ ಪಡೆದುಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ ಆಟಗಾರರ ಮಾನಸಿಕ ಸ್ಥಿತಿಯ ಕುರಿತಾಗಿಯೂ ಕೂಡ ರಾಹುಲ್ ದ್ರಾವಿಡ್ ಚರ್ಚೆ ನಡೆಸಲಿದ್ದಾರೆ. ಈ ಚರ್ಚೆಯಿಂದ ಆಟಗಾರರ ಮನಸ್ಥಿತಿ ಕುರಿತು ಕೋಚ್ ಆಗಿ ಕಾರ್ಯ ನಿರ್ವಹಿಸಲಿರುವ ರಾಹುಲ್ ದ್ರಾವಿಡ್ ಅವರಿಗೆ ಮಾಹಿತಿ ಲಭಿಸಲಿದ್ದು ಓರ್ವ ಕೋಚ್ ಆಗಿ ಇದಕ್ಕೆ ಯಾವ ರೀತಿಯ ಸಲಹೆಗಳನ್ನು ನೀಡಬಹುದು ಎಂಬ ನಿರ್ಧಾರ ಕೈಗೊಳ್ಳಲು ಸಹಕಾರಿಯಾಗಲಿದೆ.

ರಾಹುಲ್ ದ್ರಾವಿಡ್ ಆಟಗಾರರ ಜತೆ ನಡೆಸಲಿರುವ ಚರ್ಚೆಯ ವಿಧಾನ

ರಾಹುಲ್ ದ್ರಾವಿಡ್ ಆಟಗಾರರ ಜತೆ ನಡೆಸಲಿರುವ ಚರ್ಚೆಯ ವಿಧಾನ

* ಪ್ರತಿಯೊಬ್ಬ ಆಟಗಾರನನ್ನು ವೈಯಕ್ತಿಕವಾಗಿ ಸಂಪರ್ಕಿಸಲಿದ್ದಾರೆ ದ್ರಾವಿಡ್

* ಆಟಗಾರರ ಫಿಟ್‌ನೆಸ್ ಮತ್ತು ಮಾನಸಿಕ ಸ್ಥಿತಿಯ ಕುರಿತು ಚರ್ಚೆ

* ಈ ಚರ್ಚೆಯ ವೇಳೆ ಆಟಗಾರರಿಗೆ ವಿಶ್ರಾಂತಿಯ ಅಗತ್ಯವಿದ್ದರೆ ತೆಗೆದುಕೊಳ್ಳಬಹುದು ಎಂಬ ಚರ್ಚೆಯನ್ನು ಕೂಡ ರಾಹುಲ್ ದ್ರಾವಿಡ್ ನಡೆಸಲಿದ್ದಾರೆ.

* ತಂಡದಲ್ಲಿದ್ದುಕೊಂಡು ಉತ್ತಮ ಪ್ರದರ್ಶನ ನೀಡಲಿರುವ ಆಟಗಾರರಿಗೆ ಅವರ ಸ್ಥಾನದ ಕುರಿತು ಭರವಸೆಯನ್ನು ರಾಹುಲ್ ದ್ರಾವಿಡ್ ನೀಡಲಿದ್ದಾರೆ. ಅದು ಅನುಭವಿ ಆಟಗಾರ ಆಗಿರಲಿ ಅಥವಾ ಯುವ ಆಟಗಾರನಾಗಿರಲಿ ಯಾರು ಉತ್ತಮ ಪ್ರದರ್ಶನ ನೀಡಲಿದ್ದಾರೋ ಅವರಿಗೆ ತಂಡದಲ್ಲಿ ಸ್ಥಾನ ಖಚಿತ ಎಂಬ ಭರವಸೆಯನ್ನು ದ್ರಾವಿಡ್ ನೀಡಲಿದ್ದಾರೆ.

* ಹಾಗೂ ಆಟಗಾರನಿಂದ ತಂಡ ಏನನ್ನು ನಿರೀಕ್ಷಿಸುತ್ತಿದೆಯೋ ಅದರ ಕುರಿತಾಗಿಯೂ ದ್ರಾವಿಡ್ ಆಟಗಾರರೊಂದಿಗೆ ಚರ್ಚಿಸಲಿದ್ದಾರೆ.

ಇಷ್ಟೆಲ್ಲಾ ನೂತನ ತಂತ್ರಗಳೊಂದಿಗೆ ಕೋಚ್ ಆಗಿ ಕೆಲಸ ಶುರು ಮಾಡಲಿರುವ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದಲ್ಲಿ ಹೊಸದೊಂದು ದೊಡ್ಡ ಅಲೆಯನ್ನು ಎಬ್ಬಿಸುವುದಂತೂ ಖಚಿತ.

Story first published: Friday, November 12, 2021, 17:20 [IST]
Other articles published on Nov 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X