ನ್ಯೂಜಿಲೆಂಡ್ vs ವೆಸ್ಟ್ ಇಂಡೀಸ್ 3ನೇ ಟಿ20ಐ ಪಂದ್ಯ ಮಳೆಗೆ ಆಹುತಿ

ಮೌಂಟ್‌ಮೌಂಗನ್ಯುಯಿ: ನ್ಯೂಜಿಲೆಂಡ್ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡ ಆತಿಥೇಯರ ವಿರುದ್ಧ ಆಡಿದ ಮೂರನೇ ಮತ್ತು ಕೊನೇಯ ಟಿ20ಐ ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಸುರಿದ ಮಳೆಯಿಂದಾಗಿ ಪಂದ್ಯ ಪೂರ್ಣಗೊಳ್ಳಲು ಸಾಧ್ಯವಾಗಿಲ್ಲ.
ನ್ಯೂಜಿಲೆಂಡ್ vs ವೆಸ್ಟ್ ಇಂಡೀಸ್ ಅಂತಿಮ ಟಿ20ಐ ಪಂದ್ಯ ಮೌಂಟ್‌ಮೌಂಗನ್ಯುಯಿಯ ಬೇ ಓವಲ್ ಸ್ಟೇಡಿಯಂನಲ್ಲಿ ನವೆಂಬರ್ 30ರ ಸೋಮವಾರ ನಡೆದಿತ್ತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ತಂಡ 2.2 ಓವರ್ ಆಡಲು ಸಾಧ್ಯವಾಯ್ತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್‌ನಿಂದ ಆ್ಯಂಡ್ರೆ ಫ್ಲೆಚರ್ ಅಜೇಯ 4, ಬ್ರೆಂಡನ್ ಕಿಂಗ್ 11, ಕೈಲ್ ಮೇಯರ್ಸ್ 5 ರನ್ ಬಾರಿಸಿದ್ದರು. ಕೆರಿಬಿಯನ್ನರು 2.2 ಓವರ್‌ಗೆ 1 ವಿಕೆಟ್ ಕಳೆದು 25 ರನ್ ಬಾರಿಸಿದ್ದರು. ಆ ನಂತರ ಮಳೆ ಸುರಿದಿದ್ದರಿಂದ ಪಂದ್ಯ ಮುಂದುವರೆಸಲಾಗಲಿಲ್ಲ.
ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಆರಂಭಿಕ ಎರಡು ಪಂದ್ಯಗಳನ್ನು ಗೆದ್ದಿರುವ ನ್ಯೂಜಿಲೆಂಡ್ ತಂಡ ಸರಣಿಯನ್ನು ತನ್ನ ವಶವಾಗಿಸಿಕೊಂಡಿದೆ. ಇನ್ನು ಇತ್ತಂಡಗಳ ಮಧ್ಯೆ 2 ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಡಿಸೆಂಬರ್ 3ರಿಂದ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications