ರಣಜಿ : ಕರ್ನಾಟಕದ ಬೃಹತ್ ಮೊತ್ತಕ್ಕೆ ಉತ್ತರಪ್ರದೇಶದಿಂದ ತಕ್ಕ ಉತ್ತರ

Posted By:

ಕಾನ್ಪುರ್, ನವೆಂಬರ್ 19: ಗ್ರೀನ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ 'ಎ' ಗುಂಪಿನ ಪಂದ್ಯದಲ್ಲಿ ಉತ್ತರಪ್ರದೇಶ ವಿರುದ್ಧ ಕರ್ನಾಟಕ ತಂಡವು ಉತ್ತಮ ಸ್ಥಿತಿಯನ್ನು ಕಾಯ್ದುಕೊಂಡಿದೆ. ಕರ್ನಾಟಕದ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಮೂರನೇ ದಿನದ ಅಂತ್ಯಕ್ಕೆ ಉತ್ತರಪ್ರದೇಶ 243/5 ಸ್ಕೋರ್ ಮಾಡಿದೆ.

ಉತ್ತರಪ್ರದೇಶದ ಪರ ಉಮಂಗ್ ಶರ್ಮ 89, ಶಿವಂ ಚೌಧರಿ 57 ಗಳಿಸಿ ಔಟಾದರೆ, ರಿಂಕು ಸಿಂಗ್ ಅಜೇಯ 57ರನ್ ಗಳಿಸಿದರು.

ಮನೀಶ್ ಪಾಂಡೆ 238 ರನ್, ಡಿ ನಿಶ್ಚಲ್ 195 ರನ್, ಕರುಣ್ ನಾಯರ್ 62 ರನ್ ಗಳ ನೆರವಿನಿಂದ ಕರ್ನಾಟಕ 655 ಸ್ಕೋರಿಗೆ ಆಲೌಟ್ ಆಗಿದೆ.

Ranji : Karnataka vs Uttar Pradesh day 4 Updates

ಇದಕ್ಕೆ ಉತ್ತರವಾಗಿ ಉತ್ತಮ ಆರಂಭ ಪಡೆದ ಉತ್ತರಪ್ರದೇಶವು ಈ ಸಮಯಕ್ಕೆ 35 ಓವರ್ ಗಳಲ್ಲಿ 121/2 ಸ್ಕೋರ್ ಮಾಡಿದೆ. ಆರಂಭಿಕ ಆಟಗಾರ ಶಿವಂ ಚೌಧರಿ 57ರನ್ ಗಳಿಸಿ ಕೆ ಗೌತಮ್ ಗೆ ವಿಕೆಟ್ ಒಪ್ಪಿಸಿದರೆ, ಸ್ಟಾರ್ ಆಟಗಾರ ಸುರೇಶ್ ರೈನಾ ಅವರು ಸೊನ್ನೆ ಸುತ್ತಿ ರೋನಿತ್ ಮೊರೆಗೆ ವಿಕೆಟ್ ನೀಡಿದರು.

ಇದಕ್ಕೂ ಮುನ್ನ ಮನೀಶ್ ಪಾಂಡೆ 238ರನ್ (301ಎಸೆತಗಳು, 345ನಿಮಿಷ, 31ಬೌಂಡರಿ, 2ಸಿಕ್ಸರ್) ಹಾಗೂ ಎರಡನೇ ಪಂದ್ಯವಾಡುತ್ತಿರುವ ಡಿ ನಿಶ್ಚಲ್ 195ರನ್ (435ಎಸೆತ, 558ನಿಮಿಷ, 23ಬೌಂಡರಿ) ಭರ್ಜರಿ ಆಟ ಪ್ರದರ್ಶಿಸಿ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 354 ರನ್‌ ಗಳನ್ನು ಗಳಿಸಿದರು.

180 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 642 ರನ್‌ ಗಳಿಸಿದ್ದ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 186.1 ಓವರ್ ಗಳಲ್ಲಿ 655 ಸ್ಕೋರಿಗೆ ಆಲೌಟ್ ಆಯಿತು. ಉತ್ತರಪ್ರದೇಶ ಪರ ಇಮ್ತಿಯಾಜ್ ಅಹ್ಮದ್ 110ರನ್ನಿತ್ತು 6 ವಿಕೆಟ್, ಧ್ರುವ್ ಪ್ರತಾಪ್ ಸಿಂಗ್ 3 ಹಾಗೂ ಅಕ್ಷ್ ದೀಪ್ ನಾಥ್ 1 ವಿಕೆಟ್ ಗಳಿಸಿದರು.

Story first published: Sunday, November 19, 2017, 13:47 [IST]
Other articles published on Nov 19, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ