ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ: ಬಲಿಷ್ಠ ದೆಹಲಿ ತಂಡವನ್ನು ಬಗ್ಗುಬಡಿದ ಅಸ್ಸಾಂ

By Mahesh

ಗುವಾಹಟಿ, ನ.19: ಗೌತಮ್ ಗಂಭೀರ್ ನೇತೃತ್ವದ ಬಲಿಷ್ಠ ದೆಹಲಿ ತಂಡದ ವಿರುದ್ಧ ಅಸ್ಸಾಂ ಭರ್ಜರಿ ಜಯ ದಾಖಲಿಸಿದೆ. ಎ ಗುಂಪಿನ ಪಂದ್ಯದಲ್ಲಿ ದೆಹಲಿಯನ್ನು 5 ವಿಕೆಟ್ ಗಳಿಂದ ಸೋಲಿಸಿದ ಅಸ್ಸಾಂ ಸತತ ಮೂರನೇ ಗೆಲುವು ದಾಖಲಿಸಿ ಅಮೋಘ ಪ್ರದರ್ಶನ ನೀಡಿದೆ.

<strong>ರಣಜಿ ವೇಳಾಪಟ್ಟಿ</strong>ರಣಜಿ ವೇಳಾಪಟ್ಟಿ

ದೆಹಲಿ ವಿರುದ್ಧ ಗೆಲ್ಲಲು ಬೇಕಿದ್ದ 165ರನ್ ಗುರಿ ಬೆನ್ನು ಹತ್ತಿದ ಅಸ್ಸಾಂ ತಂಡ ನಾಲ್ಕನೇ ಹಾಗೂ ಅಂತಿಮ ದಿನದಂದು 70/3 ಸ್ಕೋರಿನಿಂದ ಗೆಲ್ಲಲು ಬೇಕಾದ ಗುರಿಯನ್ನು ಸುಲಭವಾಗಿ ತಲುಪಿತು. ಅರುಣ್ ಕಾರ್ತಿಕ್ ಅವರ 55ರನ್ ಗೆಲುವಿಗೆ ನೆರವಾಯಿತು.

ಕಡಿಮೆ ಮೊತ್ತದ ಈ ಪಂದ್ಯದಲ್ಲಿ ದೆಹಲಿಯನ್ನು ಮೊದಲ ಇನ್ನಿಂಗ್ಸ್ ನಲ್ಲಿ 149ರನ್ನಿಗೆ ಅಸ್ಸಾಂ ಬೌಲರ್ಸ್ ಕಟ್ಟಿ ಹಾಕಿದ್ದರು. ಕೃಷ್ಣ ದಾಸ್ 4/38 ಹಾಗೂ ಅರುಪ್ ದಾಅಸ್ 3/49 ಗಳಿಸಿ ಗೌತಮ್ ಪಡೆಗೆ ಆಘಾತ ತಂದಿದ್ದರು.

Assam stun Gautam Gambhir-led Delhi for 3rd victory


ನಂತರ ಗೋಕುಲ್ ಶರ್ಮ ನೇತೃತ್ವದ ಅಸ್ಸಾಂ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 157ರನ್ ಗಳಿಸಿ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿತು. ಕಾರ್ತಿಕ್ 81ರನ್ ಗಳಿಸಿ ಅತ್ಯಧಿಕ ಸ್ಕೋರರ್ ಎನಿಸಿದರು. ದೆಹಲಿ ಪರ ಮನನ್ ಶರ್ಮ 4/41 ಹಾಗೂ ಪ್ರದೀಪ್ ಸಾಂಗ್ವಾನ್ 3/33 ಗಳಿಸಿದರೂ ಅಸ್ಸಾಂ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ಎರಡನೇ ಇನ್ನಿಂಗ್ಸ್ ನಲ್ಲಿ ದೆಹಲಿ ಪರ ಉನ್ಮುಕ್ತ್ ಚಂದ್ 44ರನ್ ಗಳಿಸಿದ ನಾಯಕ ಗೌತಮ್ ಗಂಭೀರ್ ಅವರು 4 ಹಾಗೂ 0 ಗಳಿಸಿ ನಿರಾಶೆ ಮೂಡಿಸಿದರು.

ಇನ್ನೂ ಎರಡು ಸುತ್ತಿನ ಪಂದ್ಯಾವಳಿಗಳು ಬಾಕಿ ಇದ್ದು ಎ ಗುಂಪಿನಲ್ಲಿ ಕ್ವಾರ್ಟರ್ ಫೈನಲ್ ಹಂತ ತಲುಪುವ ಸಾಧ್ಯತೆಯನ್ನು ಎರಡು ತಂಡಗಳು ಹೆಚ್ಚಿಸಿಕೊಂಡಿವೆ.

ಸಂಕ್ಷಿಪ್ತ ಸ್ಕೋರ್:
ದೆಹಲಿ : 149 ಹಾಗೂ 172
ಅಸ್ಸಾಂ : 157 ಹಾಗೂ 168/5
(ರಾಹುಲ್ ಹಜಾರಿಕಾ 59, ಅರುಣ್ ಕಾರ್ತಿಕ್ 55 ಅಜೇಯ, ಮನನ್ ಶರ್ಮ 2/51)
ಫಲಿತಾಂಶ : ಅಸ್ಸಾಂಗೆ 5 ವಿಕೆಟ್ ಗಳ ಜಯ 6 ಅಂಕ.
(ಪಿಟಿಐ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X