ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ: ವಿಚಿತ್ರ ಕ್ಷಣಕ್ಕೆ ಸಾಕ್ಷಿಯಾದ ಸೌರಾಷ್ಟ್ರ-ಬೆಂಗಾಲ್ ಫೈನಲ್ ಪಂದ್ಯ!

Ranji Trophy final: Ananthapadmanabhan umpires from both ends

ರಾಜ್‌ಕೋಟ್‌, ಮಾರ್ಚ್ 10: ವಿಚಿತ್ರ ಸನ್ನಿವೇಶವೊಂದಕ್ಕೆ ರಣಜಿ ಟ್ರೋಫಿ ಫೈನಲ್ ಪಂದ್ಯ ಸಾಕ್ಷಿಯಾಗಿದೆ. ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬೆಂಗಾಲ್-ಸೌರಾಷ್ಟ್ರ ನಡುವಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಒಬ್ಬನೇ ಅಂಪೈರ್ ಎರಡೂ ಬದಿಯಲ್ಲಿ ಅಂಪೈರಿಂಗ್ ಮಾಡಿದ ಘಟನೆ ನಡೆದಿದೆ (ಚಿತ್ರ ಕೃಪೆ: ಬಿಸಿಸಿಐ ಡೊಮೆಸ್ಟಿಕ್).

ಐಪಿಎಲ್ ಪಂದ್ಯಗಳ ವಿರುದ್ಧ ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ!ಐಪಿಎಲ್ ಪಂದ್ಯಗಳ ವಿರುದ್ಧ ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ!

ಮಂಗಳವಾರ (ಮಾರ್ಚ್ 10)ರಂದು ನಡೆದ ಬೆಂಗಾಲ್-ಸೌರಾಷ್ಟ್ರ ಪಂದ್ಯದ ಎರಡನೇ ದಿನದಾಟದ ವೇಳೆ ಈ ದೃಶ್ಯ ಕಾಣಸಿಕ್ಕಿದೆ. ಈ ವೇಳೆ ಅಂಫೈರ್ ಕೆಎನ್ ಅನಂತಪದ್ಮನಾಭನ್ ಅವರು ಏಕಕಾಲಕ್ಕೆ ಸೈಡ್ ಅಂಪೈರ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದು ಕಾಣಸಿಕ್ಕಿದೆ.

ಕೊರೊನಾ ಭೀತಿಯಲ್ಲಿ ಐಪಿಎಲ್: ಧೋನಿ ಭವಿಷ್ಯ ಡೋಲಾಯಮಾನಕೊರೊನಾ ಭೀತಿಯಲ್ಲಿ ಐಪಿಎಲ್: ಧೋನಿ ಭವಿಷ್ಯ ಡೋಲಾಯಮಾನ

ರಣಜಿ ಟ್ರೋಫಿ ಫೈನಲ್‌ ಪಂದ್ಯದಲ್ಲೇ ಇಂಥದ್ದೊಂದು ಘಟನೆ ನಡೆದಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೂ ಗ್ರಾಸವಾಗಿದೆ.

ಘಟನೆಯ ಚಿತ್ರಣ

ಘಟನೆಯ ಚಿತ್ರಣ

ಅಸಲಿಗೆ ಈ ಘಟನೆಯ ಹಿನ್ನೆಲೆ ಹಿಂದಿ ದಿನ ನಡೆದಿತ್ತು. ಮೊದಲ ದಿನದಾಟದ ವೇಳೆ ಆಲ್ ಫೀಲ್ಡ್ ಅಂಪೈರ್ ಸಿ ಸಂಶುದ್ದೀನ್‌ಗೆ ಚೆಂಡು ಬಡಿದು ಗಾಯಗೊಂಡಿದ್ದರು. ಹಾಗೆ ಗಾಯಗೊಂಡು ಮೈದಾನದಿಂದ ಹೊರ ನಡೆದಿದ್ದ ಸಂಶುದ್ದೀನ್, ಎರಡನೇ ದಿನದಾಟದ ವೇಳೆ ತನ್ನ ಕರ್ತವ್ಯ ನಿರ್ವಹಿಸಲು ಬರಲಿಲ್ಲ.

ಎರಡೂ ಬದಿಗೂ ಒಬ್ಬನೇ ಅಂಪೈರ್

ಎರಡೂ ಬದಿಗೂ ಒಬ್ಬನೇ ಅಂಪೈರ್

ಸಿ ಸಂಶುದ್ದೀನ್ ಮೈದಾನಕ್ಕಿಳಿಯದಾಗ ಅನಂತಪದ್ಮನಾಭನ್ ಒಬ್ಬರೇ ಕೆಲಕಾಲ ಎರಡೂ ಬದಿಯಲ್ಲಿ ಅಂಪೈರಿಂದ ಕೆಲಸ ನಿರ್ವಹಿಸಿದ್ದಾರೆ. ಅನಂತರ ಸಂಶುದ್ದೀನ್ ಜಾಗಕ್ಕೆ ಯಶ್ವಂತ್ ಬರ್ದೆ ಅವರು ಬಂದು ಅಂಪೈರಿಂಗ್ ಜವಾಬ್ದಾರಿ ನಿರ್ವಹಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.

ಹೀಗಾದಾಗ ಏನು ಮಾಡಬೇಕು?

ಹೀಗಾದಾಗ ಏನು ಮಾಡಬೇಕು?

ಪಂದ್ಯ ನಡೆಯುತ್ತಿದ್ದಾಗ ಆನ್-ಫೀಲ್ಡ್ ಅಂಪೈರ್ ಗಾಯಗೊಂಡರೆ ಅಥವಾ ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ, ಅಧಿಕಾರಿ ಅಂದರೆ - ಪಂದ್ಯದ ಸಮಯದಲ್ಲಿ ಅಂಪೈರ್‌ಗಳು/ಮ್ಯಾಚ್ ರೆಫರಿಯ ಸಂಪರ್ಕ ಅಧಿಕಾರಿಯಾಗಿರುವಾತ ಸ್ಕ್ವೇರ್-ಲೆಗ್ ಅಂಪೈರ್‌ನ ಕರ್ತವ್ಯ ಮಾಡಬೇಕಾಗುತ್ತದೆ. ಆದರೆ ಆತ ಸ್ಥಳೀಯ ಅಂಪೈರ್ ಆಗಿ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಪಂದ್ಯಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರಬೇಕಾಗುತ್ತದೆ.

ಪಂದ್ಯದ ಸಂಕ್ಷಿಪ್ತ ಸ್ಕೋರ್

ಪಂದ್ಯದ ಸಂಕ್ಷಿಪ್ತ ಸ್ಕೋರ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸೌರಾಷ್ಟ್ರ ಮೂರನೇ ದಿನದಾಟದ ವೇಳೆ 171.5ನೇ ಓವರ್‌ಗೆ ಎಲ್ಲಾ ವಿಕೆಟ್ ಕಳೆದು 425 ರನ್ ಪೇರಿಸಿ ಮೊದಲ ಇನ್ನಿಂಗ್ಸ್‌ ಮುಗಿಸಿತ್ತು. ಸೌರಾಷ್ಟ್ರ ಪರ ಅರ್ಪಿತ್ ವಾಸವಾಡ 106, ಅವಿ ಬರೊತ್ 54, ವಿಶ್ವರಾಜ್ ಜಡೇಜಾ 54, ಚೇತೇಶ್ವರ್ ಪೂಜಾರ 66 ರನ್ ಬಾರಿಸಿದ್ದರು.ಬೆಂಗಾಲ್ ಈಗ ಇನ್ನಿಂಗ್ಸ್‌ ಆಡುತ್ತಿದೆ.

Story first published: Wednesday, March 11, 2020, 12:50 [IST]
Other articles published on Mar 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X