ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ranji Trophy: ಮನೀಶ್ ಪಾಂಡೆ, ಶ್ರೇಯಸ್ ಗೋಪಾಲ್ ಉತ್ತಮ ಬ್ಯಾಟಿಂಗ್, ಬೃಹತ್ ಮುನ್ನಡೆ ಸಾಧಿಸಿದ ಕರ್ನಾಟಕ

Ranji Trophy: Karnataka Takes 251 Runs Lead On 2nd Day Against Rajasthan

ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಎರಡನೇ ದಿನ ಕರ್ನಾಟಕ ಮೊದಲನೇ ಇನ್ನಿಂಗ್ಸ್‌ನಲ್ಲಿ 251 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ. ಪಂದ್ಯದ ಮೊದಲನೇ ದಿನ ರಾಜಸ್ಥಾನ ಕೇವಲ 129 ರನ್‌ಗಳಿಗೆ ಸರ್ವಪತನ ಕಂಡಿತು.

ಕರ್ನಾಟಕದ ಪರವಾಗಿ ವಿಜಯ್ ಕುಮಾರ್ ವೈಶಾಕ್, ವಾಸುಕಿ ಕೌಶಿಕ್ ತಲಾ 4 ವಿಕೆಟ್ ಪಡೆದು ಮಿಂಚಿದರೆ, ವಿಧ್ವತ್ ಕಾವೇರಪ್ಪ 2 ವಿಕೆಟ್ ಪಡೆದರು. ಕರ್ನಾಟಕದ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ ಅಂತಿಮವಾಗಿ 129 ರನ್‌ಗಳಿಗೆ ಆಲೌಟ್ ಆಯಿತು.

SA20: ಮೊದಲ ಪಂದ್ಯದಲ್ಲೇ ಎದುರಾಳಿ ತಂಡಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಜೋಫ್ರಾ ಆರ್ಚರ್SA20: ಮೊದಲ ಪಂದ್ಯದಲ್ಲೇ ಎದುರಾಳಿ ತಂಡಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಜೋಫ್ರಾ ಆರ್ಚರ್

ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ರವಿಕುಮಾರ್ ಸಮರ್ಥ್‌ ಕೇವಲ 8 ರನ್ ಗಳಿಸಿ ಔಟಾದರೆ, ನಾಯಕ ಮಯಾಂಕ್ ಅಗರ್ವಾಲ್ ಅರ್ಧತಕ (52) ಗಳಿಸಿ ಮಿಂಚಿದರು. ದೇವದತ್ ಪಡಿಕ್ಕಲ್ 32 ರನ್ ಗಳಿಸಿದರು.

ನಿಕಿನ್ ಜೋಸ್ 39 ರನ್ ಗಳಿಸಿ ಔಟಾದರು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಗೋಪಾಲ್ 95 ರನ್ ಗಳಿಸಿ ಶತಕದಿಂದ ವಂಚಿತರಾದರು. ಶರತ್ 42 ರನ್ ಗಳಿಸಿದರೆ, ಕೃಷ್ಣಪ್ಪ ಗೌತಮ್ 7 ರನ್ ಗಳಿಸಿ ಔಟಾದರು. ಮನೀಶ್ ಪಾಂಡೆ ಅಜೇಯ 75 ರನ್ ಗಳಿಸಿದ್ದು, ಮೂರನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ. ವಿಧ್ವತ್ ಕಾವೇರಪ್ಪ 3 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ಎರಡನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 380 ರನ್ ಕಲೆಹಾಕಿರುವ ಕರ್ನಾಟಕ 251 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.

Ranji Trophy: Karnataka Takes 251 Runs Lead On 2nd Day Against Rajasthan

ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಕರ್ನಾಟಕ

251 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿರುವ ಕರ್ನಾಟಕ 3ನೇ ದಿನ ಇನ್ನಷ್ಟು ರನ್ ಕಲೆ ಹಾಕುವ ಯೋಜನೆಯಲ್ಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮುನ್ನಡೆ ಸಾಧಿಸಿದರೆ, ರಾಜಸ್ಥಾನವನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಮೂಲಕ ಇನ್ನಿಂಗ್ಸ್ ಜಯ ಸಾಧಿಸುವ ಅವಕಾಶ ಕೂಡ ಕರ್ನಾಟಕ ತಂಡಕ್ಕಿದೆ.

ಈಗಾಗಲೇ ಅಂಕಪಟ್ಟಿಯಲ್ಲಿ 19 ಅಂಕಗಳೊಂದಿಗೆ ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಕರ್ನಾಟಕ, ರಾಜಸ್ಥಾನದ ವಿರುದ್ಧ ಕೂಡ ಜಯ ಸಾಧಿಸಿದರೆ, ಮುಂದಿನ ಹಂತಕ್ಕೆ ಹಾದಿ ಸುಲಭವಾಗಲಿದೆ.

Ranji Trophy: Karnataka Takes 251 Runs Lead On 2nd Day Against Rajasthan

ಉಭಯ ತಂಡಗಳ ಆಡುವ ಬಳಗ

ಕರ್ನಾಟಕ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್ (ನಾಯಕ), ನಿಕಿನ್ ಜೋಸ್, ದೇವದತ್ತ್ ಪಡಿಕ್ಕಲ್, ಮನೀಶ್ ಪಾಂಡೆ, ಶ್ರೀನಿವಾಸ್ ಶರತ್, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ವಿಜಯ್ ಕುಮಾರ್ ವೈಶಾಕ್, ವಾಸುಕಿ ಕೌಶಿಕ್, ವಿಧ್ವತ್ ಕಾವೇರಪ್ಪ

ರಾಜಸ್ಥಾನ: ಯಶ್ ಕೊಠಾರಿ, ಕುನಾಲ್ ಸಿಂಗ್ ರಾಥೋಡ್, ಮಹಿಪಾಲ್ ಲೊಮ್ರೋರ್, ಮಾನವ್ ಸುತಾರ್, ಸಮರ್ಪಿತ್ ಜೋಶಿ, ಕರಣ್ ಲಂಬಾ, ಅರಾಫತ್ ಖಾನ್, ಅಶೋಕ್ ಮೆನಾರಿಯಾ (ನಾಯಕ), ರಿತುರಾಜ್ ಸಿಂಗ್, ಅನಿಕೇತ್ ಚೌಧರಿ, ಆದಿತ್ಯ ಗರ್ವಾಲ್

Story first published: Wednesday, January 11, 2023, 19:23 [IST]
Other articles published on Jan 11, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X