ರಣಜಿ ಸೆಮೀಸ್: ಕರ್ನಾಟಕಕ್ಕೆ ಮುಂಬೈ ಎದುರಾಳಿ

Posted By:

ಬೆಂಗಳೂರು, ಫೆ.21: ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸುಲಭವಾಗಿ ಪ್ರಸಕ್ತ ಋತುವಿನಲ್ಲಿ ಅಜೇಯವಾಗಿ ಉಳಿದುಕೊಂಡು ಸೆಮಿಫೈನಲ್ ಹಂತ ತಲುಪಿದೆ. ಉಪಾಂತ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಎದುರಿಸಲಿದೆ.

ರಣಜಿ ಕ್ವಾರ್ಟರ್ ಫೈನಲ್ ಪಂದ್ಯಗಳು ಶುಕ್ರವಾರ (ಫೆ.20)ಕ್ಕೆ ಮುಕ್ತಾಯಗೊಂಡವು. ತಮಿಳುನಾಡು ಹಾಗೂ ಮಹಾರಾಷ್ಟ್ರ ತಂಡಗಳು ಕೂಡಾ ಸೆಮಿಫೈನಲ್ ಹಂತ ತಲುಪಿದ ಉಳಿದ ತಂಡಗಳಾಗಿವೆ.

Ranji Trophy semi-finals teams, schedule, TV times

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಮೊದಲ ಇನ್ನಿಂಗ್ಸ್ ಲೀಡ್ ಪಡೆದುಕೊಂಡ ಆಧಾರದ ಮೇಲೆ ಕರ್ನಾಟಕ ಸೆಮೀಸ್ ತಲುಪಿತು. ಮುಂಬೈ ತಂಡ ದೆಹಲಿ ತಂಡವನ್ನು ಸುಲಭವಾಗಿ ಸೋಲಿಸಿದರೆ, ಆಂಧ್ರಪ್ರದೇಶ ತಂಡವನ್ನು ಮಹಾರಾಷ್ಟ್ರ ಸೋಲಿಸಿತು. ವಿಧರ್ಭ ವಿರುದ್ಧ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದ ತಮಿಳುನಾಡು ಉಪಾಂತ್ಯಕ್ಕೆ ಅರ್ಹತೆ ಪಡೆದುಕೊಂಡಿತು.

ರಣಜಿ ಸೆಮಿಫೈನಲ್ ವೇಳಾಪಟ್ಟಿ
ಫೆಬ್ರವರಿ 25 (ಬುಧವಾರ) -ಮಾರ್ಚ್ 1
ಸೆಮಿಫೈನಲ್ 1: ಕರ್ನಾಟಕ vs ಮುಂಬೈ, ಬೆಂಗಳೂರು(ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರ ಪ್ರಸಾರ ಬೆಳಗ್ಗೆ 9.30ರಿಂದ)

ಸೆಮಿಫೈನಲ್ 2: ತಮಿಳುನಾಡು vs ಮಹಾರಾಷ್ಟ್ರ, ಕೋಲ್ಕತ್ತಾದಲ್ಲಿ

ಫೈನಲ್: ಮಾರ್ಚ್ 8 ರಿಂದ 12, ಮುಂಬೈ

ಒನ್ ಇಂಡಿಯಾ ಸುದ್ದಿ

Story first published: Saturday, February 21, 2015, 10:47 [IST]
Other articles published on Feb 21, 2015
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ