ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2021ರ ಟಿ20 ವಿಶ್ವಕಪ್‌ವರೆಗೆ ಭಾರತ ತಂಡಕ್ಕೆ ರವಿ ಶಾಸ್ತ್ರಿ ಕೋಚ್‌

ತನ್ನ ಆಸೆಯನ್ನು ಉಳಿಸಿಕೊಂಡ ಟೀಂ ಇಂಡಿಯಾ ಕೋಚ್..? | Oneindia Kannada
ravi shasthri 2019

ಮುಂಬೈ, ಆಗಸ್ಟ್‌ 16: ಭಾರತ ತಂಡದ ಮಾಜಿ ನಾಯಕ ಕಪಿಲ್‌ ದೇವ್‌ ಸಾರಥ್ಯದ ಬಿಸಿಸಿಐ ನೇಮಿತ ಕ್ರಿಕೆಟ್‌ ಸಲಹಾ ಸಮಿತಿ (ಸಿಒಎ)ಯು ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ಸ್ಥಾನದಲ್ಲಿ ರವಿ ಶಾಸ್ತ್ರಿ ಮುಂದುವರಿಯಲು ಶುಕ್ರವಾರ ಗ್ರೀನ್‌ ಸಿಗ್ನಲ್‌ ನೀಡಿದೆ.

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಯಾರಾಗುತ್ತಾರೆಂಬ ಊಹಾಪೋಹಗಳಿಗೆ ಕೊಬೆಗೂ ಬಿಸಿಸಿಐ ತೆರೆ ಎಳೆದಿದೆ. ಹಾಲಿ ಕೋಚ್‌ ರವಿ ಶಾಸ್ತ್ರಿ ಮುಖ್ಯ ಕೋಚ್‌ ಸ್ಥಾನದಲ್ಲಿ 2021ರ ಟಿ20 ವಿಶ್ವಕಪ್‌ವರೆಗೆ ತಂಡಕ್ಕೆ ತಮ್ಮ ಮಾರ್ಗದರ್ಶನ ಮುಂದುವರಿಸಲಿದ್ದಾರೆ. ಕೋಚ್‌ ಹುದ್ದೆ ಸಲುವಾಗಿ ಈ ಬಾರಿ ಘಟಾನುಘಟಿಗಳಿಂದ ಅರ್ಜಿ ಬರದೇ ಇದ್ದರೂ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್‌ ಮೂಡಿ ಮತ್ತು ಇಂಗ್ಲೆಂಡ್‌ನ ಮಾಜಿ ಕೋಜ್‌ ಮೈಕ್‌ ಹೇಸನ್‌ ರವಿ ಶಾಸ್ತ್ರಿಗೆ ಕೊಂಚ ಪೈಪೋಟಿ ನೀಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ನಗ್ನ ಫೋಟೊ ಪ್ರಕಟಿಸಿದ ಇಂಗ್ಲೆಂಡ್‌ ಆಟಗಾರ್ತಿ!ಸೋಷಿಯಲ್‌ ಮೀಡಿಯಾದಲ್ಲಿ ನಗ್ನ ಫೋಟೊ ಪ್ರಕಟಿಸಿದ ಇಂಗ್ಲೆಂಡ್‌ ಆಟಗಾರ್ತಿ!

ಆದರೂ ಕ್ರಿಕೆಟ್‌ ಸಲಹಾ ಸಮಿತಿಯ ಸದಸ್ಯರಾದ ಕಪಿಲ್‌ ದೇವ್‌, ಮಾಜಿ ಕ್ರಿಕೆಟಿಗ ಅನ್ಷುಮಾನ್‌ ಗಾಯಕ್ವಾಡ್‌ ಮತ್ತು ಭಾರತ ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಶುಕ್ರವಾರ ವಿವಿಧ ಅರ್ಜಿದಾರರ ಜೊತೆಗಿನ ಮುಖಾಮುಖಿ ಸಂದರ್ಶನದ ಬಳಿಕ ಒಮ್ಮತದಿಂದ ರವಿ ಶಾಸ್ತ್ರಿಗೆ ಮತ್ತೊಂದು ಅವಧಿ ಕೋಚ್‌ ಸ್ಥಾನದಲ್ಲಿ ಮುಂದುವರಿಯಲು ಸಮ್ಮತಿ ನೀಡಿದೆ.

ಕೋಚ್‌ ಸ್ಥಾನಕ್ಕೆ ರವಿ ಶಾಸ್ತ್ರಿ ಅವರನ್ನು ಮೊದಲ ಆಯ್ಕೆಯಾಗಿ ಮತ್ತು ದ್ವಿತೀಯ ಆಯ್ಕೆಯಾಗಿ ಮೈಕ್‌ ಹೇಸನ್‌, ತೃತೀಯ ಆಯ್ಕೆಯಾಗಿ ಟಾಮ್‌ ಮೂಡಿ ಅವರ ಹೆಸರನ್ನು ಕ್ರಿಕೆಟ್‌ ಸಲಹಾ ಸಮಿತಿ ಸೂಚಿಸಿದೆ.

ಮಿಸ್ಬಾಗೆ ಪಾಕ್‌ ತಂಡದ ಪ್ರಧಾನ ಕೋಚ್‌ & ಮುಖ್ಯ ಆಯ್ಕೆದಾರನ ಹುದ್ದೆಮಿಸ್ಬಾಗೆ ಪಾಕ್‌ ತಂಡದ ಪ್ರಧಾನ ಕೋಚ್‌ & ಮುಖ್ಯ ಆಯ್ಕೆದಾರನ ಹುದ್ದೆ

"ನೂತನ ಕೋಚ್ 2021ರ ಟಿ20 ವಿಶ್ವಕಪ್‌ವರಗೆ ಮುಂದುವರೆಯಲಿದ್ದಾರೆ. ಅನಂತರ, ಮರು ಆಯ್ಕೆ ಅಥವಾ ಹೊಸ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸಹಾಯಕ ಸಿಬ್ಬಂದಿಯೂ 2021ರ ವಿಶ್ವ ಟಿ20 ವರೆಗೆ ಜವಾಬ್ದಾರಿ ಹೊರಲಿದ್ದಾರೆ,' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದರು.

Story first published: Friday, August 16, 2019, 19:20 [IST]
Other articles published on Aug 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X