ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ಜೊತೆಗೆ ನನ್ನನ್ನು ಹೋಲಿಸುವುದು ನ್ಯಾಯ ಅಲ್ಲ ಎಂದ ರಿಷಭ್ ಪಂತ್

Rishabh Pant reaction on comparision with MS Dhoni

ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಕಾರಣರಾದ ರಿಷಭ್ ಪಂತ್ ಬಗ್ಗೆ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ರಿಷಭ್ ಪಂತ್ ಅವರನ್ನು ಮಾಜಿ ನಾಯಕ ಎಂಎಸ್ ಧೋನಿಯೊಂದಿಗೂ ಹೋಲಿಕೆ ಮಾಡಲಾಗುತ್ತಿದೆ. ಆದರೆ ಇದಕ್ಕೆ ರಿಷಭ್ ಪಂತ್ ಪ್ರತಿಕ್ರಿಯಿಸಿದ್ದು ದಿಗ್ಗಜ ಆಟಗಾರ ಎಂಎಸ್ ಧೋನಿ ಜೊತೆಗೆ ನನ್ನನ್ನು ಹೋಲಿಸುವುದು ನ್ಯಾಯ ಅಲ್ಲ ಎಂದಿದ್ದಾರೆ.

"ಧೋನಿಯಂತಾ ದಿಗ್ಗಜ ಆಟಗಾರನ ಜೊತೆಗೆ ಹೋಲಿಕೆ ಮಾಡುವುದು ತುಂಬಾ ಒಳ್ಳೆಯ ಅನುಭವವನ್ನು ನೀಡುತ್ತದೆ. ಆತನೊಂದಿಗೆ ನನ್ನನ್ನು ಹೋಲಿಕೆ ಮಾಡುವುದು ನನಗೆ ಉತ್ತಮ ಅನುಭವವನ್ನು ನೀಡುತ್ತದೆ. ಆದರೆ ನನ್ನನ್ನು ಯಾರೊಂದಿಗೂ ಹೋಲಿಸಿಕೊಳ್ಳಲು ಇಷ್ಟ ಪಡಲಾರೆ " ಎಂದಿದ್ದಾರೆ ರಿಷಭ್ ಪಂತ್.

ಅಡಿಲೇಡ್ ಸೋಲಿನ ನಂತರ ಗೆಲುವಿನ ಹಾದಿ ಹಿಡಿದ ರೋಚಕ ಸಂಗತಿ ವಿವರಿಸಿದ ಹನುಮ ವಿಹಾರಿಅಡಿಲೇಡ್ ಸೋಲಿನ ನಂತರ ಗೆಲುವಿನ ಹಾದಿ ಹಿಡಿದ ರೋಚಕ ಸಂಗತಿ ವಿವರಿಸಿದ ಹನುಮ ವಿಹಾರಿ

" ಭಾರತೀಯ ಕ್ರಿಕೆಟ್‌ನಲ್ಲಿ ನನ್ನದೇ ಆದ ಹೆಸರು ಗಳಿಸುವ ಉದ್ಧೇಶ ಹೊಂದಿದ್ದೇನೆ. ನಾನು ಅದರತ್ತ ದೃಷ್ಟಿಹೊಂದಿದ್ದೇನೆ. ಯಾಕೆಂದರೆ ಓರ್ವ ದಿಗ್ಗಜ ಆಟಗಾರನೊಂದಿಗೆ ಹೋಲಿಸಿಕೊಳ್ಳುವುದು ನನ್ನಂತಾ ಯುವ ಆಟಗಾರನಿಗೆ ಉತ್ತಮವಾದ ಸಂಗತಿಯಲ್ಲ" ಎಂದು ರಿಷಭ್ ಪಂತ್ ಡೆಲ್ಲಿಯಲ್ಲಿ ಪತ್ರಕರ್ತರೊಂದಿಗೆ ಮಾತಮಾಡುತ್ತಾ ಹೇಳಿದ್ದಾರೆ.

ಇನ್ನು ರಿಷಭ್ ಪಂತ್ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲೂ ಗಮನಾರ್ಯ ಸಾಧನೆ ಮಾಡಿದ್ದಾರೆ. ತಮ್ಮ ವೃತ್ತಿ ಜೀವನದ ಶ್ರೇಷ್ಠ 13ನೇ ಸ್ಥಾನಕ್ಕೇರಿದ್ದು ವಿಕೆಟ್ ಕೀಪರ್‌ಗಳ ಪೈಕಿ ಅತಿ ಹೆಚ್ಚು ಶ್ರೇಯಾಂಕ ಪಡೆದ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಈ ಬಗ್ಗಯೂ ರಿಷಭ್ ಪಂತ್ ಪ್ರತಿಕ್ರಿಯಿಸಿದರು. "ಇದು ಖುಷಿಯನ್ನು ನೀಡುತ್ತದೆ. ಆದರೆ ನನಗೆ ಶ್ರೇಯಾಂಕದ ಬಗ್ಗೆ ತಿಳಿದಿಲ್ಲ. ನನ್ನ ಕೆಲಸವೇನೆಂದರೆ ಭಾರತಕ್ಕೆ ಗೆಲುವನ್ನು ತಂದುಕೊಡುವುದು" ಎಂದಿದ್ದಾರೆ.

ಐಪಿಎಲ್ 2021: ಎಲ್ಲಾ 8 ತಂಡಗಳು ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಸಂಪೂರ್ಣ ಪಟ್ಟಿಐಪಿಎಲ್ 2021: ಎಲ್ಲಾ 8 ತಂಡಗಳು ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಸಂಪೂರ್ಣ ಪಟ್ಟಿ

ಮುಂಬರುವ ಇಂಗ್ಲೆಂಡ್ ವಿರುದ್ಧ ಭಾರತದಲ್ಲೇ ನಡೆಯಲಿರುವ ಟೆಸ್ಟ್ ಸರಣಿಗೆ ರಿಷಭ್ ಪಂತ್ ಮೊದಲ ಎರಡು ಪಂದ್ಯಗಳಲ್ಲಿ ವೃದ್ಧಿಮಾನ್ ಸಾಹಾ ಜೊತೆಗೆ ಆಯ್ಕೆಯಾಗಿದ್ದಾರೆ. 2018ರ ಬಳಿಕ ರಿಷಭ್ ಪಂತ್ ಮೊದಲ ಬಾರಿಗೆ ಟೆಸ್ಟ್‌ನಲ್ಲಿ ಗ್ಲೌಸ್ ತೊಡುವ ಸಾಧ್ಯತೆ ದಟ್ಟವಾಗಿದೆ.

Story first published: Thursday, January 21, 2021, 13:06 [IST]
Other articles published on Jan 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X