KSCA ಚುನಾವಣೆ: ಭಾರತದ ಮಾಜಿ ಆಟಗಾರ ಬಿನ್ನಿ ಬಣಕ್ಕೆ ಭರ್ಜರಿ ಗೆಲುವು

ಬೆಂಗಳೂರು, ಅಕ್ಟೋಬರ್ 3: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಚುನಾವಣೆಯಲ್ಲಿ ಟೀಮ್ ಇಂಡಿಯಾ ಮಾಜಿ ಆಲ್ ರೌಂಡರ್ ರೋಜರ್ ಬಿನ್ನಿ ಮತ್ತವರ ತಂಡ ಭರ್ಜರಿ ಜಯ ಗಳಿಸಿದೆ. ಗುರುವಾರ (ಅಕ್ಟೋಬರ್ 3) ಚುನಾವಣ ಫಲಿತಾಂಶ ಹೊರಬಿದ್ದಿದ್ದು, ಬಿನ್ನಿ ಬಣ ಆಡಳಿತ ಚುಕ್ಕಾಣಿ ಹಿಡಿಯಲಿದೆ.
ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಬೆಂಬಲಿತ ತಂಡವಾಗಿರುವ ಬಿನ್ನಿ ಬಣ, ಎದುರಾಳಿ ಎಂಎಸ್ ಹರೀಶ್ ಬಣವನ್ನು ಸೋಲಿಸಿತು. ರೋಜರ್ ಬಿನ್ನಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಜೆ ಅಭಿರಾಮ್ ಉಪಾಧ್ಯಕ್ಷರಾಗಿ, ಸಂತೋಷ್ ಮೆನನ್ ಮತ್ತು ಶಾವಿರ್ ತಾರಾಪೂರ್ ಕ್ರಮವಾಗಿ ಕಾರ್ಯದರ್ಶಿ, ಸಹ ಕಾರ್ಯದರ್ಶಿಯಾಗಿ, ವಿಜಯ್ ಮೃತ್ಯುಂಜಯ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಬಿನ್ನಿ ಅವರು ಎಂಎಸ್ ಹರೀಶ್ ಅವರನ್ನು ಸೋಲಿಸಿದರೆ, ಅಭಿರಾಮ್ ಅವರು ಮಾಜಿ ಪತ್ರಕರ್ತ ಜೋಸೆಫ್ ಹೂವರ್ ಎದುರು ಮೇಲುಗೈ ಸಾಧಿಸಿದರು. ಇನ್ನು ಸಂತೋಷ್ ಮೆನನ್ ಮತ್ತು ಮೃತ್ಯುಂಜಯ ಅವರು ಕ್ರಮವಾಗಿ ರಘುರಾಮ್ ಮತ್ತು ಬಿಎನ್ ಮಧುಕರ್ ಅವರನ್ನು ಪರಾಭವಗೊಳಿಸಿದರು.
2013ರಲ್ಲಿ ಕೊನೆಯ ಬಾರಿಗೆ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಚುನಾವಣೆ ನಡೆದಿತ್ತು. ಅದಾಗಿ ಲೋಧ ಶಿಫಾರಸು ಬಳಿಕ ನಡೆದ ಮೊದಲ ಚುನಾವಣೆ ಇದು. 1983ರ ವಿಶ್ವಕಪ್ ವಿಜೇಯ ತಂಡದ ಸದಸ್ಯ ರೋಜರ್ ಬಿನ್ನಿ ಇನ್ನು ಅಧ್ಯಕ್ಷರಾಗಿ ಅಸೋಸಿಯೇಷನ್ ಮುನ್ನಡೆಸಲಿದ್ದಾರೆ. ಅಂದ್ಹಾಗೆ ಚುನಾವಣೆಯಲ್ಲಿ ಬಿನ್ನಿ 943 ಮತ ಪಡೆದಿದ್ದರೆ, ಹರೀಶ್ 111 ಮತದೊಂದಿಗೆ ಸೋಲೊಪ್ಪಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications