ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಆಟಗಾರರಿಗೆ ಭಾರತೀಯ ಅಭಿಮಾನಿಯಿಂದ ಕಂಟಕ!

Rohit Sharma, Rishabh Pant among 5 Indian cricketers in possible bio-bubble breach

ಮೆಲ್ಬರ್ನ್: ಭಾರತೀಯ ಅಭಿಮಾನಿಯಿಂದಾಗಿ ಟೀಮ್ ಇಂಡಿಯಾ ಆಟಗಾರರಿಗೆ ಕಂಟಕ ಎದುರಾಗಿದೆ. ಆಸ್ಟ್ರೇಲಿಯಾದ ರೆಸ್ಟೋರೆಂಟ್ ಒಂದರಲ್ಲಿ ತಾನಿದ್ದಾಗ ಅಲ್ಲಿ ಭಾರತ ತಂಡದ ಆಟಗಾರರೂ ಇದ್ದಿದ್ದು ನೋಡಿ ಖುಷಿಯಾಗಿ ಆಟಗಾರರ ಹೊಟೇಲ್ ಬಿಲ್ ಅನ್ನು ತಾನೇ ಪಾವತಿಸಿದ್ದೆ ಎಂದು ಇತ್ತೀಚೆಗೆ ಕ್ರಿಕೆಟ್ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಅಭಿಮಾನಿಯ ಪೋಸ್ಟ್‌ನಿಂದಾಗಿ ತಂಡದ ಪ್ರಮುಖ ಆಟಗಾರರಿಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಕೈ ತಪ್ಪುವ ಭೀತಿ ಎದುರಾಗಿದೆ.

ಪಾಕ್ ಕ್ರಿಕೆಟ್ ತಂಡದ ಮೋಸದ ಬಗ್ಗೆ ಬಾಂಬ್ ಸಿಡಿಸಿದ ಮೊಹಮ್ಮದ್ ಆಸಿಫ್!ಪಾಕ್ ಕ್ರಿಕೆಟ್ ತಂಡದ ಮೋಸದ ಬಗ್ಗೆ ಬಾಂಬ್ ಸಿಡಿಸಿದ ಮೊಹಮ್ಮದ್ ಆಸಿಫ್!

ಭಾರತ ತಂಡದ ಆಟಗಾರರಾದ ಉಪನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್, ನವದೀಪ್ ಸೈನಿ, ಶುಬ್ಮನ್ ಗಿಲ್, ಪೃಥ್ವಿ ಶಾ ಅವರ ವಿರುದ್ಧ ಬಯೋ ಬಬಲ್ ನಿಯಮ ಮೀರಿ ನಡೆದುಕೊಂಡ ಆರೋಪ ಕೇಳಿ ಬಂದಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಕ್ರಮ ಕೈಗೊಂಡಿದೆ.

ಪತ್ನಿ ರಿತಿಕಾಗೆ ಕಿರಿಕಿರಿ ನೀಡುವ ರೋಹಿತ್‌ ಶರ್ಮಾರ 2 ಕೆಟ್ಟ ಅಭ್ಯಾಸಗಳಿವು!ಪತ್ನಿ ರಿತಿಕಾಗೆ ಕಿರಿಕಿರಿ ನೀಡುವ ರೋಹಿತ್‌ ಶರ್ಮಾರ 2 ಕೆಟ್ಟ ಅಭ್ಯಾಸಗಳಿವು!

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ಗಾಗಿ ಸಜ್ಜಾಗುತ್ತಿದ್ದ ಟೀಮ್ ಇಂಡಿಯಾಕ್ಕೆ ಈ ಘಟನೆ ಆಘಾತ ನೀಡಿದೆ. ಆಟಗಾರರಲ್ಲಿ ಕೊರೊನಾವೈರಸ್ ಸೋಂಕು ಪತ್ತೆಯಾದರೆ ಪ್ರವಾಸ ಸರಣಿ ಬಹುತೇಕ ಕೈ ತಪ್ಪಿದಂತೆಯೇ.

ಕಂಟಕ ತಂದ ಅಭಿಮಾನಿ

ಆಸ್ಟ್ರೇಲಿಯಾದ ಚಾಡ್‌ಸ್ಟೋನ್ ಶಾಪಿಂಗ್‌ ಸೆಂಟರ್‌ನ ಸೀಕ್ರೆಟ್ ಕಿಚನ್ ಚೈನೀಸ್ ರೆಸ್ಟೋರೆಂಟ್‌ನಲ್ಲಿ ತನ್ನ ಪಕ್ಕದಲ್ಲೇ ಕೂತಿದ್ದ ಭಾರತೀಯ ಆಟಗಾರರ ಬಿಲ್ ಅನ್ನು (118 ಆಸ್ಟ್ರೇಲಿಯಾನ್ ಡಾಲರ್ ಅಥವಾ 6,628.22 ರೂ.) ತಾನು ಪಾವತಿಸಿದ್ದೆ ಎಂದು ಭಾರತೀಯ ಅಭಿಮಾನಿ ನವದೀಪ್ ಸಿಂಗ್‌ ಎಂಬವರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದರು. ವಿಡಿಯೋಗಳನ್ನು ಹಾಕಿದ್ದರು. ತಾನು ಆಟಗಾರರನ್ನು ಮಾತನಾಡಿಸಿದ್ದೆ ಎಂದೂ ಹೇಳಿದ್ದರು. ಅಭಿಮಾನಿಯ ಪೋಸ್ಟ್‌ ಗಮನಕ್ಕೆ ಬರುತ್ತಲೇ ಬಿಸಿಸಿಐ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಅಲರ್ಟ್ ಆಗಿದೆ.

ಹೋಟೆಲ್‌ಗೆ ಹೋಗುವಂತಿಲ್ಲವೆ?

ಹೋಟೆಲ್‌ಗೆ ಹೋಗುವಂತಿಲ್ಲವೆ?

ಬಯೋ ಬಬಲ್‌ ಒಳಗಿರುವ ಆಟಗಾರರು ರೆಸ್ಟೋರೆಂಟ್‌ಗಳಿಗೆ ಹೋಗುವಂತಿಲ್ಲವೆ? ಇದೆ. ಕ್ರಿಕೆಟ್ ಆಸ್ಟ್ರೇಲಿಯಾದ ಬಯೋಬಬಲ್ ನಿಯಮದ ಪ್ರಕಾರ, ಆಟಗಾರರು ಊಟಕ್ಕೆ ರೆಸ್ಟೋರೆಂಟ್‌ಗಳಿಗೆ ಹೊರಗೆ ಹೋಗಬಹುದು. ಆದರೆ ಇಂಡೋರ್ ಒಳಗೆ ಕೂರುವಂತಿಲ್ಲ. ಔಟ್ ಡೋರ್‌ನಲ್ಲಿ ಕೂತು ತಿನ್ನಬಹುದು. ಆದರೆ ಅಭಿಮಾನಿ ಪೋಸ್ಟ್‌ ಮಾಡಿರುವ ಚಿತ್ರಗಳಲ್ಲಿ ಭಾರತದ ಆಟಗಾರರು ಇಂಡೋರ್‌ನಲ್ಲಿ ಕೂತಿರುವುದು ದಾಖಲಾಗಿದೆ. ಜೊತೆಗೆ ಯಾರ ಮುಖದಲ್ಲೂ ಮಾಸ್ಕ್ ಕೂಡ ಇರಲಿಲ್ಲ.

ಆಟಗಾರರ ಮುಂದಿನ ಕತೆಯೇನು?

ಆಟಗಾರರ ಮುಂದಿನ ಕತೆಯೇನು?

ಅಭಿಮಾನಿ ಮಾಡಿರುವ ಪೋಸ್ಟ್‌ನಿಂದ ಭಾರತದ ಆಟಗಾರರಿಗೆ ಸಮಸ್ಯೆ ಎದುರಾಗಿದೆ. ಹೋಟೆಲ್‌ನಲ್ಲಿ ಆಟಗಾರರು ಮತ್ತು ಅಭಿಮಾನಿ ಭೇಟಿಯಾಗಿದ್ದಾಗ ಅಭಿಮಾನಿ ನವದೀಪ್ ಅವರು ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಅಪ್ಪಿಕೊಂಡಿರುವ ಅನುಮಾನವೂ ಇದೆ. ಹೀಗಾಗಿ ಘಟನೆಯಲ್ಲಿ ತಗುಲುಹಾಕಿಕೊಂಡಿರುವ ರೋಹಿತ್ ಶರ್ಮಾ, ರಿಷಭ್ ಪಂತ್, ಶುಬ್ಮನ್ ಗಿಲ್, ಪೃಥ್ವಿ ಶಾ, ನವದೀಪ್ ಸೈನಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಮತ್ತೆ ಕ್ವಾರಂಟೈನ್ ವಿಧಿಸಲಾಗುತ್ತದೆ. ಈ 5 ಆಟಗಾರರು ಪ್ರತ್ಯೇಕವಾಗಿ ಪ್ರಯಾಣ, ಅಭ್ಯಾಸ ನಡೆಸಲಿದ್ದಾರೆ.

Story first published: Saturday, January 2, 2021, 17:31 [IST]
Other articles published on Jan 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X