ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB Twitter Account Hacked : ಆರ್​ಸಿಬಿ ತಂಡದ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್!

Royal Challengers Bangalore : RCB Official Twitter Account Got Hacked

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಧಿಕೃತ ಟ್ವಿಟರ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ.

ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿರುವ ಹ್ಯಾಕರ್ ಡಿಸ್ಪ್ಲೇ ಚಿತ್ರವನ್ನು ಬದಲಾಯಿಸುವುದ ಜೊತೆಗೆ ಪ್ರೊಫೈಲ್ ಹೆಸರನ್ನು "ಬೋರ್ ಏಪ್ ಯಾಚ್ ಕ್ಲಬ್" ಎಂದು ಬದಲಾಯಿಸಿದ್ದಾರೆ. ಅಲ್ಲದೆ ಖಾತೆಯಲ್ಲಿ ಎನ್‌ಎಫ್‌ಟಿ ಸಂಬಂಧಿತ ಟ್ವೀಟ್‌ಗಳನ್ನು ಪೋಸ್ಟ್ ಮಾಡಲಾಗಿದೆ.

IND Vs NZ 2nd ODI: ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಹಸಿರು ಪಿಚ್ ಸಿದ್ಧಪಡಿಸಿದ ರಾಯ್ಪುರ ಕ್ರೀಡಾಂಗಣIND Vs NZ 2nd ODI: ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಹಸಿರು ಪಿಚ್ ಸಿದ್ಧಪಡಿಸಿದ ರಾಯ್ಪುರ ಕ್ರೀಡಾಂಗಣ

ಆರ್​ಸಿಬಿ ತಂಡದ ಖಾತೆ ಹ್ಯಾಕ್ ಆಗಿರುವುದನ್ನು ಅಭಿಮಾನಿಗಳು ಮತ್ತು ಟ್ವಿಟರ್ ಬಳಕೆದಾರರು ಗಮನಿಸಿದ್ದಾರೆ. ಅಲ್ಲದೆ ಸ್ಕ್ರೀನ್‌ ಶಾಟ್‌ ಅನ್ನು ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡು ಈ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಖಾತೆ ಹ್ಯಾಕ್ ಆಗಿ ಸಾಕಷ್ಟು ಸಮಯವಾದರೂ, ಆರ್‍‌ ಸಿಬಿ ತನ್ನ ಖಾತೆಯನ್ನು ಇನ್ನೂ ಮರಳಿ ಪಡೆದಿಲ್ಲ.

ಕುತೂಹಲಕಾರಿ ಸಂಗತಿಯೆಂದರೆ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದವರು, ಎಲ್ಲಾ ಮಾದರಿಯ ಆಟಗಾರ ಎಂದು ಮೊಹಮ್ಮದ್ ಸಿರಾಜ್‌ ಅವರ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ. ಆರ್​ಸಿಬಿ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ ಆಗಿರುವುದು ಇದೇ ಮೊದಲೇನಲ್ಲ. ಇದು ಮೂರನೇ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.

ಎನ್‌ಎಫ್‌ಟಿಗೆ ಸಂಬಂಧಿಸಿದ ವಿಷಯ ಟ್ವೀಟ್

ಆರ್​ಸಿಬಿ ತಂಡದ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ ಮಾಡಿರುವಾತ ಎನ್‌ಎಫ್‌ಟಿಗೆ ಸಂಬಂಧಪಟ್ಟ ಟ್ವೀಟ್‌ಗಳನ್ನು ರಿಟ್ವೀಟ್ ಮಾಡಿದ್ದಾರೆ. ಖಾತೆಯ ಪ್ರೊಫೈಲ್, ಡಿಸ್ಪ್ಲೇ ಕೂಡ ಬದಲಾವಣೆ ಮಾಡಿದ್ದಾರೆ. ಖಾತೆ ಹ್ಯಾಕ್‌ ಆಗಿ ಹಲವು ಗಂಟೆಗಳು ಕಳದಿವೆ. ಸಾಕಷ್ಟು ಫೋಟೊ ಮತ್ತು ವಿಡಿಯೋಗಳನ್ನು ರಿಟ್ವೀಟ್ ಮಾಡಲಾಗಿದೆ.

ಇದರ ಜೊತೆಗೆ ಆರ್ ಸಿಬಿ ತಂಡಕ್ಕೆ ಸಂಬಂಧ ಪಟ್ಟ ವಿಡಿಯೋಗಳನ್ನು ಟ್ವೀಟ್ ಮಾಡಲಾಗಿದೆ. ಟ್ವಿಟರ್ ಅಕೌಂಟ್ ಹ್ಯಾಕ್ ಆಗಿ ಹಲವು ಗಂಟೆಗಳು ಕಳೆದರೂ ಕೂಡ ಅದನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲ.

ಇನ್ನು ಟ್ವಿಟರ್ ನಲ್ಲಿ ಆರ್​ಸಿಬಿ ತಂಡದ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ತರೇವಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವು ಖಾತೆ ಹ್ಯಾಕ್ ಆಗಿ ಇಷ್ಟು ಸಮಯವಾದರೂ, ಅದನ್ನು ಮರಳಿ ಪಡೆಯದಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಒಂದೂ ಬಾರಿ ಕಪ್ ಗೆಲ್ಲದಿದ್ದರೂ 3 ಬಾರಿ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

Story first published: Saturday, January 21, 2023, 11:22 [IST]
Other articles published on Jan 21, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X