ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಶ್ರೀಶಾಂತ್ 7 ವರ್ಷಗಳ ನಿಷೇಧ ಶಿಕ್ಷೆ ಅಂತ್ಯ

ಭಾರತದ ವೇಗದ ಬೌಲರ್ ಎಸ್ ಶ್ರೀಶಾಂತ್ ಅವರ ಮೇಲಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ 7 ವರ್ಷಗಳ ಶಿಕ್ಷೆ ಭಾನುವಾರ(ಸೆಪ್ಟೆಂಬರ್ 13)ರಂದು ಅಂತ್ಯವಾಗಿದೆ. ಈ ಮೂಲಕ ಸುದೀರ್ಘ ಕಾಲದ ಬಳಿಕ ಶ್ರೀಕಾಂತ್ ಕ್ರಿಕೆಟ್‌ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಯಲ್ಲಿ ಪಾಳ್ಗೊಳ್ಳಲು ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ಎಸ್ ಶ್ರೀಶಾಂತ್ 2013ರ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊದಲಿಗೆ ಆಜೀವ ಶಿಕ್ಷೆಗೆ ಒಳಗಾಗಿದ್ದರು. ಬಳಿಕ ಕಳೆದ ವರ್ಷ ಬಿಸಿಸಿಐನ ಒಂಬುಡ್ಸಮನ್ ಡಿಕೆ ಜೈನ್ ಅವರು ಇದನ್ನು 7 ವರ್ಷಗಳಿಗೆ ಇಳಿಸಿದ್ದರು. ಈಗ ಈ ಶಿಕ್ಷೆ ಸಂಪೂರ್ಣವಾಗಿದ್ದು ಮುಂದಿನ ದಿನಗಳಲ್ಲಿ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳಲು ಉತ್ಸುಕರಾಗಿದ್ದಾರೆ.

2020ರ ಐಪಿಎಲ್‌ನಲ್ಲಿ ಗೆಲ್ಲುವ ತಂಡ ಹೆಸರಿಸಿದ ಕೆವಿನ್ ಪೀಟರ್ಸನ್

37 ವರ್ಷದ ಶ್ರೀಶಾಂತ್ ನಿಷೇಧ ಅಂತ್ಯದ ಬಳಿಕ ದೇಶೀಯ ಕ್ರಿಕೆಟ್‌ನಲ್ಲಿ ವೃತ್ತಿ ಜೀವನವನ್ನು ಪುರಾರಂಭಿಸುವ ಆಶಯವನ್ನು ವ್ಯಕ್ತಪಡಿಸಿದ್ದರು. ಈ ಬಗ್ಗೆ ಕೇರಳ ಕ್ರಿಕೆಟ್ ಸಂಸ್ಥೆ ಕೂಡ ಈ ಹಿಂದೆ ಪ್ರತಿಕ್ರಿಯಿಸಿದ್ದು ಫಿಟ್‌ನೆಸ್ ಸಾಬೀತುಪಡಿಸಿದರೆ ಶ್ರೀಶಾಂತ್ ಅವರನ್ನು ಪರಿಗಣಿಸುವುದಾಗಿ ಹೇಳಿಕೊಂಡಿತ್ತು.

ಇನ್ನು ನಿಷೇಧ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶ್ರೀಶಾಂತ್ ಕಳೆದ ಶುಕ್ರವಾರ ಟ್ವಿಟ್ಟರ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ. ನಾನೀಗ ಎಲ್ಲಾ ಶಿಕ್ಷೆಗಳಿಂದಲೂ ಮುಕ್ತನಾಗಿದ್ದು ನಾನು ಅತಿ ಹೆಚ್ಚಾಗಿ ಪ್ರೀತಿಸುವ ಕ್ರೀಡೆಯನ್ನು ಪ್ರತಿನಿಧಿಸಲು ಸಿದ್ಧನಾಗಿದ್ದೇನೆ. ನೆಟ್ ಅಭ್ಯಾಸದಲ್ಲೂ ಪ್ರತಿ ಎಸೆತಕ್ಕೂ ನನ್ನ ಶ್ರೇಷ್ಠ ಪ್ರಯತ್ನವನ್ನು ನೀಡುತ್ತೇನೆ ಎಂದಿರುವ ಶ್ರೀಶಾಂತ್ ಮುಂದಿನ 5-7 ವರ್ಷಗಳ ಕಾಲ ಕ್ರಿಕೆಟ್ ಆಡುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಐಪಿಎಲ್: ಎಲ್ಲಾ 8 ತಂಡಗಳಿಗೂ ಟ್ವಿಟರ್‌ನಿಂದ ಹ್ಯಾಷ್‌ಟ್ಯಾಗ್ ಬಿಡುಗಡೆ

ಈ ವರ್ಷದ ಭಾರತೀಯ ದೇಶೀಯ ಕ್ರಿಕೆಟ್ ಆವೃತ್ತಿ ಆಗಸ್ಟ್‌ನಲ್ಲಿ ಆರಂಭಗೊಳ್ಳಬೇಕಿತ್ತು. ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಅದನ್ನು ಮುಂದೂಡಲಾಗಿದೆ. ಕೇರಳ ಕ್ರಿಕೆಟ್ ಮಂಡಳಿ ಈ ಕ್ರಿಕೆಟ್ ಋತುವಿನಲ್ಲಿ ಶ್ರೀಶಾಂತ್‌ಗೆ ಆಡುವ ಅವಕಾಶವನ್ನು ನೀಡಿದರೆ ಮತ್ತೆ ದೇಶಿಯ ಕ್ರಿಕೆಟ್ ಮೂಲಕ ಕ್ರಿಕೆಟ್ ವೃತ್ತಿ ಜೀವನಕ್ಕೆ ಶ್ರೀಶಾಂತ್ ಮರಳಲಿದ್ದಾರೆ. ಆದರೆ ಅದು ಯಾವಾಗ ಎಂಬುದು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, September 13, 2020, 13:17 [IST]
Other articles published on Sep 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X