ಸಚಿನ್ ತೆಂಡೂಲ್ಕರ್ ವಿರುದ್ಧ ತೆರಿಗೆ ವಂಚನೆ ಆರೋಪ: ಪಂಡೋರಾ ಪೇಪರ್ಸ್‌ನಲ್ಲಿ ಕ್ರಿಕೆಟ್ ದಿಗ್ಗಜನ ಹೆಸರು

ವಿಶ್ವದ ದಿಗ್ಗಜ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ವಿರುದ್ಧ ಈಗ ತೆರಿಗೆ ವಂಚಿಸಿದ ಆರೋಪ ಕೇಳಿ ಬಂದಿದೆ. ಪಂಡೋರಾ ಪೇಪರ್ಸ್ ಎಂಬ ರಹಸ್ಯ ಹಣಕಾಸು ಮಾಹಿತಿ ಬಹಿರಂಗವಾಗಿದ್ದು ಇದರಲ್ಲಿ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೆಸರು ಕೂಡ ಉಲ್ಲೇಖವಾಗಿದೆ. ಜಗತ್ತಿನ ಅನೇಕ ಉದ್ಯಮಿಗಳು, ರಾಜಕಾರಣಿಗಳು, ಕ್ರೀಡಾತಾರೆಗಳ ತೆರಿಗೆ ವಂಚಿಸಿರುವ ಬಗ್ಗೆ ಈ ರಹಸ್ಯ ದಾಖಲೆಗಳು ಮಾಹಿತಿ ನೀಡುತ್ತಿವೆ.

ಜಗತ್ತಿನ ಪ್ರಖ್ಯಾತ ಮಾಧ್ಯಮ ಸಂಸ್ಥೆಗಳಾದ ಬಿಬಿಸಿ, ದಿ ಗಾರ್ಡಿಯನ್, ಇಂಡಿಯನ್ ಎಕ್ಸ್‌ಪ್ರೆಸ್ ಸೇರಿದಂತೆ 150ಕ್ಕೂ ಹೆಚ್ಚು ಮಾಧ್ಯಮಗಳು ಒಳಗೊಂಡಿರುವ ತನಿಖಾ ಪತ್ರಕರ್ತರ ಒಕ್ಕೂಟ (ದಿ ಇಂಟರ್‌ನ್ಯಾಶನಲ್ ಕಾನ್ಸೋರ್ಟಿಯಮ್ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್) ನಡೆಸಿರುವ ತನಿಖಾ ವರದಿ ಇದಾಗಿದೆ. ವಿಶ್ವದ ಖ್ಯಾತನಾಮರ ಹಣಕಾಸು ವಹಿವಾಟಿನ 1.19ಕೋಟಿಗೂ ಅಧಿಕ ರಹಸ್ಯ ದಾಖಲೆಗಳು ಈ ಪಂಡೋರಾ ಪೇಪರ್ಸ್ ಹೊಂದಿದೆ ಎಂದು ಈ ಒಕ್ಕೂಟ ಹೇಳಿಕೊಂಡಿದೆ.

ಇನ್ನು ಈ ದಾಖಲೆಗಳಲ್ಲಿ ಭಾರತದ ಸಚಿನ್ ತೆಂಡೂಲ್ಕರ್ ಮಾತ್ರವಲ್ಲದೆ 300ಕ್ಕೂ ಅಧಿಕ ಭಾರತೀಯರ ಹೆಸರಗಳು ಇವೆ ಎನ್ನಲಾಗಿದೆ. ಭಾನುವಾರ ಬಿಡುಗಡೆಯಾದ ಈ ವರದಿಯಲ್ಲಿ ಸಚಿನ್ ತೆಂಡೂಲ್ಕರ್ ವಿದೇಶದಲ್ಲಿ ಆಸ್ತಿಯನ್ನು ಹೊಂದಿದ್ದಾರೆ ಎಂದಿದೆ. ಈ ವಿಚಾರವಾಗಿ ಸಚಿನ್ ತೆಂಡೂಲ್ಕರ್ ಪರ ವಕೀಲರು ಪ್ರತಿಕ್ರಿಯಿಸಿದ್ದು ಸಚಿನ್ ತೆಂಡೂಲ್ಕರ್ ಮಾಡಿರುವ ಎಲ್ಲಾ ಹೂಡಿಕೆಗಳು ನ್ಯಾಯಸಮ್ಮತವಾಗಿದೆ ಎಂದಿದ್ದಾರೆ. ಅಲ್ಲದೆ ತೆರಿಗೆ ಅಧಿಕಾರಿಗಳಿಗೆ ಈ ಬಗ್ಗೆ ವಿವರಗಳನ್ನು ನೀಡಲಾಗಿದೆ ಎಂದಿದ್ದಾರೆ.

ಇನ್ನು ಸಚಿನ್ ತೆಂಡೂಲ್ಕರ್ ಅಲ್ಲದೆ ವಿಶ್ವದ ಖ್ಯಾತ ತಾರೆಯರಾದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪಾಪ್ ತಾರೆ ಶಕೀರಾ, ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಇನ್ನು ಸಾಕಷ್ಟು ಹೆಸರುಗಳಿವೆ. ಭಾರತದ ಉದ್ಯಮಿಗಳಾದ ಅನಿಲ್ ಅಂಬಾನಿ, ಕಿರಣ್ ಮಜುಮ್ದಾರ್ ಶಾ ಅವರ ಗೌಪ್ಯ ಹೂಡಿಕೆಗಳ ಬಗ್ಗೆಯೂ ಈ ವರದಿಯಲ್ಲಿ ಉಲ್ಲೇಖವಾಗಿದೆ.

ತೆರಿಗೆ ವಂಚನೆ ಆರೋಪ, ಪಂಡೋರಾ ಪೇಪರ್ಸ್ ನಲ್ಲಿ ಕ್ರಿಕೆಟ್ ದಿಗ್ಗಜನ ಹೆಸರು | Oneindia Kannada

ತೆರಿಗೆ ವಿಚಾರವಾಗಿ ಹಿಂದೆಯೂ ವಿವಾದಕ್ಕೆ ಸಿಲುಕಿದ್ದ ಸಚಿನ್ ತೆಂಡೂಲ್ಕರ್: ವಿಶ್ವ ಕ್ರಿಕೆಟ್‌ನ ದಂತಕತೆಯೆನಿಸಿರುವ ಸಚಿನ್ ತೆಂಡೂಲ್ಕರ್ ಈ ಹಿಂದೆಯೂ ತೆರಿಗೆ ವಿಚಾರವಾಗಿಯೇ ವಿವಾದಕ್ಕೆ ಸಿಲುಕಿದ್ದರು. ಅದರಲ್ಲೂ 2003ರಲ್ಲಿ ಉಡುಗೊರೆಯಾಗಿ ಸಿಕ್ಕ ಕಾರಿಗೆ ತೆರಿಗೆ ವಿನಾಯಿತಿ ನೀಡಿದ ವಿಚಾರವಾಗಿ ದೊಡ್ಡ ವಿವಾದವಾಗಿತ್ತು. ಆದರೆ ಇದೀಗ ಸಚಿನ್ ತೆಂಡೂಲ್ಕರ್ ತೆರಿಗೆ ವಂಚಿಸಿ ಅಕ್ರಮವಾಗಿ ಹೂಡಿಕೆ ಮಾಡಿದ್ದಾರೆ ಎಂಬ ಆರೋಪವನ್ನು ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳ ವರದಿ ಮುಂದೆ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

For Quick Alerts
ALLOW NOTIFICATIONS
For Daily Alerts
Story first published: Monday, October 4, 2021, 16:27 [IST]
Other articles published on Oct 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X