ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಸ್ಟಾರ್ ಆಟಗಾರನ ಏಕದಿನ ಭವಿಷ್ಯ ಇನ್ನೂ ಮುಗಿದಿಲ್ಲ: ಸಂಜಯ್ ಬಂಗಾರ್

Sanjay Bangar said Shikhar Dhawan still have chance to come back in ODIs

ಭಾರತ ಐಸಿಸಿ ಟೂರ್ನಿಗಳಲ್ಲಿ ಸತತವಾಗಿ ಹಿನ್ನಡೆ ಅನುಭವಿಸುತ್ತಿರುವ ಬಳಿಕ ಬಿಸಿಸಿಐ ಕೆಲ ಪ್ರನುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸೂಚನೆ ನೀಡಿದೆ. ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಹಿನ್ನಲೆಯಲ್ಲಿ ಈಗಾಗಲೇ ಕೆಲ ಹೆಜ್ಜೆಗಳನ್ನಿಟ್ಟಿದೆ. ಇದರ ಭಾಗವಾಗಿಯೇ ಅನುಭವಿ ಆಟಗಾರ ಶಿಖರ್ ಧವನ್ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದಲೂ ಹೊರಬಿದ್ದಿದ್ದಾರೆ. ಈ ಬಗ್ಗೆ ಮಾಜಿ ಕೋಚ್ ಸಂಜಯ್ ಬಂಗಾರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಶ್ರೀಲಂಕಾ ವಿರದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಧವನ್ ಹೊರಬಿದ್ದ ಹಿನ್ನೆಲೆಯಲ್ಲಿ ಸಂಜಯ್ ಬಂಗಾರ್ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾದ ಅನುಭವಿ ಆಟಗಾರನಿಗೆ ಇನ್ನು ಕೂಡ ತಂಡದ ಬಾಗಿಲು ಮುಚ್ಚಿಲ್ಲ. ಅವರಿಗೆ ಕಮ್‌ಬ್ಯಾಕ್ ಮಾಡುವ ಅವಕಾಶ ಇದ್ದೇ ಇದೆ ಎಂದಿದ್ದಾರೆ.

ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಈ ಆಲ್‌ರೌಂಡರ್ ಫಿಟ್ ಆಗುತ್ತಾರೆ ಎಂದ ಆಸ್ಟ್ರೇಲಿಯಾ ಕೋಚ್ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಈ ಆಲ್‌ರೌಂಡರ್ ಫಿಟ್ ಆಗುತ್ತಾರೆ ಎಂದ ಆಸ್ಟ್ರೇಲಿಯಾ ಕೋಚ್

ರೋಹಿತ್‌ಗೆ ಸಾಥ್ ನೀಡಲಿದ್ದಾರೆ ಕಿಶನ್ ಅಥವಾ ಗಿಲ್

ರೋಹಿತ್‌ಗೆ ಸಾಥ್ ನೀಡಲಿದ್ದಾರೆ ಕಿಶನ್ ಅಥವಾ ಗಿಲ್

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ ಬಳಿಕ ಏಕದಿನ ಸರಣಿಗೆ ಸಂಪೂರ್ಣ ಸಾಮರ್ಥ್ಯದ ತಂಡವನ್ನು ಆಯ್ಕೆ ಮಾಡಿದೆ. ಆದರೆ ಧವನ್ ಅವರನ್ನು ಹೊರಗಿಡಗಲಾಗಿದ್ದು ಯುವ ಆಟಗಾರರಾದ ಇಶಾನ್ ಕಿಶನ್ ಹಾಗೂ ಶುಬ್ಮನ್ ಗಿಲ್‌ಗೆ ಅವಕಾಶ ದೊರೆತಿದೆ. ಈ ಇಬ್ಬರ ಪೈಕಿ ಒಬ್ಬರು ಆರಂಭಿಕನಾಗಿ ರೋಹಿತ್ ಶರ್ಮಾಗೆ ಸಾಥ್ ನೀಡುವ ನಿರೀಕ್ಷೆಯಿದೆ.

ಯುವ ಆಟಗಾರರ ಮುಂದೆ ಮಂಕಾದ ಧವನ್

ಯುವ ಆಟಗಾರರ ಮುಂದೆ ಮಂಕಾದ ಧವನ್

2022ರಲ್ಲಿ ಭಾರತದ ಪರವಾಗಿ ಅತೀ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂದರೆ ಅದು ಶಿಖರ್ ಧವನ್. 34.40ರ ಸರಾಸರಿಯಲ್ಲಿ ಅವರು ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಪರಿಣಾಮಕಾರಿ ಇನ್ನಿಂಗ್ಸ್ ನೀಡಲು ಧವನ್ ವಿಫಲವಾಗಿದ್ದರು. ಕುತೂಹಲಕಾರಿ ಅಂಶವೆಂದರೆ ಧವನ್ 2022ರಲ್ಲಿ 9 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಇದು ಖಾಯಂ ನಾಯ ರೋಹಿತ್ ಶರ್ಮಾ ಅವರಿಗಿಂತ ಒಂದು ಪಂದ್ಯ ಹೆಚ್ಚು. ಆದರೆ ಯುವ ಆಟಗಾರರಾದ ಇಶಾನ್ ಕಿಶನ್ ಹಾಗೂ ಶುಬ್ಮನ್ ಗಿಲ್ ಪ್ರದರ್ಶನದ ಮುಂದೆ ಧವನ್ ಸದ್ಯ ಮಂಕಾದಂತೆ ಕಂಡು ಬರುತ್ತಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಇಶಾನ್ ಕಿಶನ್ ಭರ್ಜರಿ ದ್ವಿಶತಕ ಸಿಡಿಸಿದ್ದರೆ ಗಿಲ್ ತಮ್ಮ ಸ್ಥಿರ ಪ್ರದರ್ಶನದ ಮೂಲಕ ಗಮನಸೆಳೆಯುತ್ತಿದ್ದಾರೆ. ಹೀಗಾಗಿ ಮುಂದಿನ ವಿಶ್ವಕಪ್‌ಗೆ ಧವನ್ ಕಮ್‌ಬ್ಯಾಕ್ ಮಾಡುವುದು ಕಷ್ಟ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಧವನ್ ಪ್ರದರ್ಶನ ಉತ್ತಮವಾಗಿದೆ

ಧವನ್ ಪ್ರದರ್ಶನ ಉತ್ತಮವಾಗಿದೆ

ಧವನ್ ಬಗ್ಗೆ ಮಾತನಾಡಿದ ಸಂಜಯ್ ಬಂಗಾರ್ "ಧವನ್ ಹೊರಬಿದ್ದಿದ್ದಾರೆ ಎಂದು ನಾನು ಪರಿಗಣಿಸುವುದಿಲ್ಲ. ಆತ ಬಹಳ ಸಮರ್ಥವಾಗಿದ್ದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಎರಡ್ಮೂರು ಸರಣಿಗಳಲ್ಲಿ ಅವರು ದೊಡ್ಡ ಮೊತ್ತದ ರನ್ ಗಳಿಸದೇ ಇರಬಹುದು. ಆದರೆ ಆ ಸರಣಿಗಳಲ್ಲಿ ಕೂಡ ಯುವ ಆಟಗಾರರ ಪಡೆಯನ್ನು ಇಟ್ಟುಕೊಂಡು ಧವನ್ ಗೆಲುವು ಸಾಧಿಸಿದ್ದಾರೆ" ಎಂದು ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇಶಾನ್ ಅಲಭ್ಯವಾದರೆ ಧವನ್‌ಗೆ ಇದೆ ಅವಕಾಶ

ಇಶಾನ್ ಅಲಭ್ಯವಾದರೆ ಧವನ್‌ಗೆ ಇದೆ ಅವಕಾಶ

2021ರ ಜುಲೈ ತಿಂಗಳಿನಲ್ಲಿ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ ಬಳಿಕ ಇಶಾನ್ ಕಿಶನ್ ಭಾರತ ತಂಡದ ಪರವಾಗಿ 10 ಏಕದಿನ ಪಂದ್ಯಗಳಲ್ಲಿ ಆಡಿದ್ದು 53ರ ಅದ್ಭುತ ಸರಾಸರಿಯೊಂದಿಗೆ 477 ರನ್ ಗಳಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ಸಿಡಿಸಿದ 210 ರನ್ ಅವರ ಹೈಯೆಸ್ಟ್ ಸ್ಕೋರ್ ಎನಿಸಿಕೊಂಡಿದೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಭಾರತದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ವಿಶ್ವಕಪ್‌ಗೆ ಮುನ್ನ ಇಶಾನ್ ಕಿಶನ್ ಅಲಭ್ಯವಾದರೆ ಆಗ ಶಿಖರ್ ಧವನ್‌ಗೆ ಭಾರತ ತಂಡದಲ್ಲಿ ಮತ್ತೆ ಅವಕಾಶ ಪಡೆಯುವ ಸಾಧ್ಯತೆ ಇದ್ದೇ ಇದೆ ಎಂದಿದ್ದಾರೆ ಬಂಗಾರ್.

Story first published: Tuesday, January 3, 2023, 16:08 [IST]
Other articles published on Jan 3, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X