ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SMAT 2020-21: ಕರ್ನಾಟಕದ ಸತತ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಬಂಗಾಳ!

SMAT 2020-21: Karnataka lost the match by 7 Wickets against Bengal

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸತತ ನಾಲ್ಕು ಗೆಲುವು ಸಾಧಿಸಿ ಆತ್ಮ ವಿಶ್ವಾಸದಲ್ಲಿದ್ದ ಕರ್ನಾಟಕ ತಂಡಕ್ಕೆ ಬಂಗಾಳ ಆಘಾತ ನೀಡಿದೆ. ಇಂದು ನಡೆದ ಪಂದ್ಯದಲ್ಲಿ ಕರ್ನಾಟಕ ಬಂಗಾಳ ತಂಡಕ್ಕೆ 7 ವಿಕೆಟ್‌ಗಳ ಅಂತರದಿಂದ ಶರಣಾಗಿದೆ. ಈ ಮೂಲಕ ಮನೀಶ್ ಪಾಂಡೆ ಬಳಗ ಈ ಬಾರಿಯ ಟೂರ್ನಿಯಲ್ಲಿ ಮೊದಲ ಸೋಲು ಕಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ತಂಡ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿತು. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ ಕರ್ನಾಟಕ 8 ವಿಕೆಟ್ ಕಳೆದುಕೊಂಡು 134 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಇದನ್ನು ಸಮರ್ಥವಾಗಿ ಬೆನ್ನಟ್ಟಿದ ಕರ್ನಾಟಕ ತಂಡ 18 ಓವರ್‌ಗಳಲ್ಲಿ ಈ ಗುರಿಯನ್ನು ಕೇವಲ 3 ವಿಕೆಟ್ ಕಳೆದುಕೊಂಡು ಗೆದ್ದು ಬೀಗಿದೆ.

ಟಿ20 ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ: ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶಟಿ20 ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ: ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ

ಕರ್ನಾಟಕ ಆರಂಭಿಕರಿಬ್ಬರು ಈ ಪಂದ್ಯದಲ್ಲಿ ದೊಡ್ಡ ನಿರಾಸೆ ಅನುಭವಿಸಿದರು. ಮಯಾಂಕ್ ಅಗರ್ವಾಲ್ ಕೇವಲ 4 ರನ್‌ಗಳಿಗೆ ವಿಕೆಟ್ ಕಳೆದುಕೊಂಡರೆ ದೇವದತ್ ಪಡಿಕ್ಕಲ್ ತಾನು ಎದುರಿಸಿದ ಮೊದಲ ಎಸೆತದಲ್ಲಿಯೇ ಔಟ್ ಆಗುವ ಮೂಲಕ ಗೋಲ್ಡನ್ ಡಕ್‌ಗೆ ಬಲಿಯಾದರು. ಆದರೆ ನಂತರ ನಾಯಕ ಮನೀಶ್ ಪಾಂಡೆ ಹಾಗೂ ಕರುಣ್ ನಾಯರ್ ಕರ್ನಾಟಕ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ನಡೆಸಿದರು. ಈ ಜೋಡಿ ಅರ್ಧ ಶತಕದ ಜೊತೆಯಾಟವನ್ನು ನಡೆಸಿತು. ಆದರೆ ತಂಡದ ಮೊತ್ತ 72 ರನ್‌ಗಳಾಗಿದ್ದಾಗ ಮನೀಶ್ ಪಾಂಡೆ ತಮ್ಮ ವಿಕೆಟ್ ಕಳೆದುಕೊಂಡರು. ಔಟಾಗುವ ಮುನ್ನ ಮನೀಸ್ 27 ಎಸೆತಗಳಲ್ಲಿ 32 ರನ್‌ಗಳಿಸಿದರು.

ಅನುಭವಿ ಕರುಣ್ ನಾಯರ್ 44 ಎಸೆತಗಳಲ್ಲಿ 44 ರನ್‌ಗಳಿಸಿ ಕರ್ನಾಟಕ ತಂಡದ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿದರು. ಉಳಿದಂತೆ ಯಾವ ಆಟಗಾರರಿಂದಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ಬಾರದ ಕಾರಣ ಕರ್ನಾಟಕ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಯಿತು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 134 ರನ್‌ಗಳಿಸಲು ಕರ್ನಾಟಕ ಶಕ್ತವಾಯಿತು.

ಕರ್ನಾಟಕ ತಂಡ ನೀಡಿದ 135 ರನ್‌ಗಳ ಸ್ಕೋರ್ ಬೆನ್ನಟ್ಟಿದ ಬೆಂಗಾಲ್ ತಂಡ ಆರಂಭದಲ್ಲಿ ಒಂದು ವಿಕೆಟ್ ಪಡೆಯುವ ಮೂಲಕ ಯಶಸ್ಸು ಗಳಿಸಿತು. 25 ರನ್ ಆಗುವಷ್ಟರಲ್ಲಿ 2ನೇ ವಿಕೆಟ್ ಕೂಡ ಕಳೆದುಕೊಂಡಿತು. ಆದರೆ ಅದಾದ ಬಳಿಕ ಅಭಿಮನ್ಯು ಈಶ್ವರನ್ ಹಾಗೂ ವೃದ್ಧಿಮಾನ್ ಸಾಹಾ ಜೋಡಿ ಎಚ್ಚರಿಕೆಯಿಂದ ಆಟವಾಡುತ್ತಾ ಉತ್ತಮವಾಗಿ ಇನ್ನಿಂಗ್ಸ್ ಕಟ್ಟಿದರು. ಸಾಹಾ 27 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಆದರೆ ಬಳಿಕ ಬಂದ ಕೈಫ್ ಅಹ್ಮದ್ ಅಜೇಯ 34 ರನ್‌ಗಳ ಕೊಡುಗೆ ನೀಡಿದರು. ಅಭಿಮನ್ಯು ಈಶ್ವರನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದು 51 ರನ್‌ಗಳನ್ನು ಗಳಿಸಿ ತಂಡಕ್ಕೆ ಗೆಲುವನ್ನು ತಂದಿತ್ತರು. 18 ಓವರ್‌ಗಳಲ್ಲಿಯೇ ಕರ್ನಾಟಕ ನಿಡಿದ ಗುರಿಯನ್ನು ತಲುಪಿತ್ತು ಬಂಗಾಳ. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ಕೋಚ್‌ ಸ್ಥಾನದಿಂದ ನಿರ್ಗಮಿಸಿದ ರವಿಶಾಸ್ತ್ರಿ: ಪ್ರಮುಖ ಸಾಧನೆಗಳು ಇಲ್ಲಿದೆಕೋಚ್‌ ಸ್ಥಾನದಿಂದ ನಿರ್ಗಮಿಸಿದ ರವಿಶಾಸ್ತ್ರಿ: ಪ್ರಮುಖ ಸಾಧನೆಗಳು ಇಲ್ಲಿದೆ

ಕರ್ನಾಟಕ ತಂಡದ ಪರವಾಗಿ ಪ್ರಸಿದ್ಧ್ ಕೃಷ್ಣ, ಜಗದೀಶ ಸುಚಿತ್ ಹಾಗೂ ಕಾರಿಯಪ್ಪ ತಲಾ 1 ವಿಕೆಟ್ ಕಬಳಿಸಿದರು. ಆದರೆ ಪ್ರಸಿದ್ಧ್ ಕೃಷ್ಣ ಈ ಪಂದ್ಯದಲ್ಲಿ ದುಬಾರಿಯಾಗಿ ಪರಿಣಮಿಸಿದರು. ಮೂರು ಓವರ್‌ಗಳಲ್ಲಿ ಅವರು 36 ರನ್ ಬಿಟ್ಟುಕೊಟ್ಟರು.

ಕರ್ನಾಟದ ಪ್ಲೇಯಿಂಗ್ XI: ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ (ನಾಯಕ), ಕರುಣ್ ನಾಯರ್, ಅನಿರುದ್ಧ ಜೋಶಿ, ಶರತ್ ಬಿಆರ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ಜಗದೀಶ ಸುಚಿತ್, ಕೆಸಿ ಕಾರಿಯಪ್ಪ, ಪ್ರಸಿದ್ಧ್ ಕೃಷ್ಣ, ವಿಜಯ್ ಕುಮಾರ್ ವೈಶಾಕ್
ಬೆಂಚ್: ಪ್ರತೀಕ್ ಜೈನ್, ಅಭಿನವ್ ಮನೋಹರ್, ನಿಹಾಲ್ ಉಳ್ಳಾಲ್, ಕೃಷ್ಣಮೂರ್ತಿ ಸಿದ್ಧಾರ್ಥ್, ದರ್ಶನ್ ಎಂಬಿ, ವಿದ್ಯಾಧರ್ ಪಾಟೀಲ್, ಪ್ರವೀಣ್ ದುಬೆ, ರೋಹನ್ ಕದಂ, ಶ್ರೇಯಸ್ ಗೋಪಾಲ್

ಬೆಂಗಾಲ್ ಪ್ಲೇಯಿಂಗ್ XI: ಸುದೀಪ್ ಚಟರ್ಜಿ (ನಾಯಕ), ಅಭಿಮನ್ಯು ಈಶ್ವರನ್, ಸುಜಿತ್ ಕುಮಾರ್ ಯಾದವ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಕೈಫ್ ಅಹ್ಮದ್, ಋತ್ವಿಕ್ ಚೌಧರಿ, ಶಹಬಾಜ್ ಅಹ್ಮದ್, ಆಕಾಶ್ ದೀಪ್, ರಿಟಿಕ್ ಚಟರ್ಜಿ, ಪ್ರದೀಪ್ತ ಪ್ರಮಾಣಿಕ್, ಮುಖೇಶ್ ಕುಮಾರ್
ಬೆಂಚ್: ಕರಣ್ ಲಾಲ್, ಪ್ರತಾಪ್ ಸಿಂಗ್, ಇಶಾನ್ ಪೊರೆಲ್, ಸುವಂಕರ್ ಬಾಲ್, ಮೊಹಮ್ಮದ್ ಕೈಫ್, ರಂಜೋತ್ ಸಿಂಗ್, ಶಾಕಿರ್ ಗಾಂಧಿ, ಸಯಾನ್ ಘೋಷ್, ಅಭಿಷೇಕ್ ದಾಸ್

Story first published: Tuesday, November 9, 2021, 18:30 [IST]
Other articles published on Nov 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X