ವಿಶ್ವಕಪ್‌ಗೂ ಮುನ್ನ ಐಪಿಎಲ್: ಯುಎಇ ಪಿಚ್ ಬಗ್ಗೆ ಮಾರ್ಕ್ ಬೌಷರ್ ಮಹತ್ವದ ಹೇಳಿಕೆ

ಕೊರೊನಾವೈರಸ್‌ನಿಂದಾಗಿ ಈ ಬಾರಿಯ ಐಪಿಎಲ್ ಆವೃತ್ತಿಯ ಉಳಿದ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಸಲಾಗಿದೆ. ಮತ್ತೊಂದೆಡೆ ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಕೂಡ ಯುಎಇಯಲ್ಲಿಯೇ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ವಿಶ್ವಕಪ್‌ಗೂ ಮುನ್ನ ಐಪಿಎಲ್ ಇದೇ ಪಿಚ್‌ನಲ್ಲಿ ನಡೆಯುವ ಕಾರಣ ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಕೋಚ್ ಮಾರ್ಕ್ ಬೌಷರ್ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ವಿಶ್ಕಪ್‌ಗೂ ಮುನ್ನ ಐಪಿಎಲ್ ಪಂದ್ಯಗಳು ನಡೆಯುವ ಕಾರಣ ಪಿಚ್‌ನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ವಿಶ್ವಕಪ್ ಪಂದ್ಯದ ವೇಳೆ ಇದು ಸ್ಪಿನ್ನರ್‌ಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ಕೋಚ್ ಮಾರ್ಕ್ ಬೌಷರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪ್ರಥಮದರ್ಜೆನಲ್ಲಿ ದಾಖಲೆ ಬರೆದ ಆಂಗ್ಲ ವೇಗಿ ಜೇಮ್ಸ್ ಆ್ಯಂಡರ್ಸನ್ಪ್ರಥಮದರ್ಜೆನಲ್ಲಿ ದಾಖಲೆ ಬರೆದ ಆಂಗ್ಲ ವೇಗಿ ಜೇಮ್ಸ್ ಆ್ಯಂಡರ್ಸನ್

ಕೊರೊನಾವೈರಸ್‌ನಿಂದ ಅರ್ಧಕ್ಕೆ ಸ್ಥಗಿತವಾಗಿರುವ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳು ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರವರೆಗೆ ನಡೆಯಲಿದೆ. ಅಕ್ಟೋಬರ್ 17ರಿಂದ ಟಿ20 ವಿಶ್ವಕಪ್ ಪಂದ್ಯಗಳು ಆರಂಭವಾಗಲಿದೆ.

ಹೆಚ್ಚಿನ ಕೌಶಲ್ಯ ಬೇಕು

ಹೆಚ್ಚಿನ ಕೌಶಲ್ಯ ಬೇಕು

"ಐಪಿಎಲ್ ಪಂದ್ಯಗಳು ನಡೆದ ನಂತರ ಪಿಚ್‌ ಒಣಗುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಬಳಸಿದ ಪಿಚ್‌ನಂತೆ ಇರುವುದಿಲ್ಲ ಅಲ್ಲಿ ನೀವು 180-200 ರನ್‌ಗಳನ್ನು ಗಳಿಸಲು ಸಾಧ್ಯವಾಗುತ್ತಿತ್ತು. ಇಲ್ಲಿ ಹೆಚ್ಚು ಕೌಶಲ್ಯವನ್ನು ಹೊಂದಿರಬೇಕು ಹಾಗೂ ಚಾಣಾಕ್ಷರಾಗಿರಬೇಕು" ಎಂದು ಮಾರ್ಕ್ ಬೌಷರ್ ಹೇಳಿದ್ದಾರೆ.

ಬ್ಯಾಟಿಂಗ್ ಸುಲಭವಿಲ್ಲ

ಬ್ಯಾಟಿಂಗ್ ಸುಲಭವಿಲ್ಲ

ಸ್ಪಿನ್ನರ್‌ಗಳಿಗೆ ಹೆಚ್ಚಿನ ಅನುಕೂಲಕರವಾಗಿರುವ ಪಿಚ್‌ನಲ್ಲಿ ಬ್ಯಾಟಿಂಗ್ ನಡೆಸುವುದು ಸುಲಭವಲ್ಲ ಎಂಬ ಅಭಿಪ್ರಾಯವನ್ನು ಮಾರ್ಕ್ ಬೌಷರ್ ವ್ಯಕ್ತಪಡಿಸಿದ್ದಾರೆ. ನಾವು ಇಲ್ಲಿ ನೋಡಿದಂತೆ ಬ್ಯಾಟಿಂಗ್ ನಡೆಸುವುದು ಕಠಿಣವಾಗಿರಲಿದೆ. ಐಪಿಎಲ್‌ನ ಪಂದ್ಯಗಳನ್ನು ನೋಡಿದ ನಂತರ ಎಷ್ಟು ರನ್‌ಗಳನ್ನು ಗಳಿಸಬಹುದು ಎಂದು ನಮಗೆ ತಿಳಿಯಲಿದೆ. ಅದಾದ ನಂತರ ವಿಶ್ವಕಪ್‌ನ ಆರಂಭದ ನಂತರ ಪಿಚ್‌ಗಳು ಯಾವ ರೀತಿಯಲ್ಲಿ ವರ್ತಿಸಲಿದೆ ಎಂಬುದನ್ನು ನಾವು ವಿಶ್ಲೇಷಣೆ ನಡೆಸಲಿದ್ದೇವೆ ಎಂದು ಬೌಷರ್ ಹೇಳಿದ್ದಾರೆ.

Ravi Shastri ಅವಧಿ ಮುಕ್ತಾಯ Rahul Dravid ಆಗ್ತಾರಾ ಟೀಂ ಇಂಡಿಯಾ ಗುರು | Oneindia Kannada
ಸ್ಪಿನ್ನರ್‌ಗಳ ಪಾತ್ರ ನಿರ್ಣಾಯಕ

ಸ್ಪಿನ್ನರ್‌ಗಳ ಪಾತ್ರ ನಿರ್ಣಾಯಕ

ಇನ್ನು ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಕೋಚ್ ಬೌಷರ್ ಈ ವಿಶ್ವಕಪ್‌ನಲ್ಲಿ ಸ್ಪಿನ್ನರ್‌ಗಳು ಅತ್ಯಂತ ಮಹತ್ವದ ಪಾತ್ರವನ್ನು ವಹಿಸಲಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿಯ ವಿಶ್ವಕಪ್‌ನ ಆಯೋಜನೆಯ ಜವಾಬ್ಧಾರಿ ಭಾರತ ವಹಿಸಿಕೊಂಡಿದೆ. ಆದರೆ ಕೊರೊನಾವೈರಸ್ ಪ್ರಕರಣಗಳ ಭೀತಿಯಿಂದ ವಿಶ್ವಕಪ್‌ಅನ್ನು ಯುಎಇನಲ್ಲಿ ಆಯೋಜನೆ ಮಾಡಲು ನಿರ್ಧರಿಸಲಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, July 6, 2021, 12:01 [IST]
Other articles published on Jul 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X