ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೀಗೆ ಮಾಡಿದರಷ್ಟೆ ಭಾರತ ತಂಡ ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯ ಎಂದ ಸುನಿಲ್ ಗವಾಸ್ಕರ್

Sunil Gavaskar Advice That Team India Players Should Not Take Rest Until ODI World Cup 2023

ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಭಾರತ ತಂಡಕ್ಕೆ ಮಹತ್ವದ ಸಲಹೆ ನೀಡಿದ್ದಾರೆ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಗೆಲ್ಲಬೇಕೆಂದರೆ ತಂಡದ ಯಾವ ಆಟಗಾರರು ಕೂಡ ವಿಶ್ರಾಂತಿ ತೆಗೆದುಕೊಳ್ಳದೆ ಆಡಬೇಕು ಎಂದು ಹೇಳಿದ್ದಾರೆ.

ತಾವು ದೇಶಕ್ಕಾಗಿ ಆಡುತ್ತಿನ ದಿನಗಳಲ್ಲಿ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಳ್ಳಲು ಇಷ್ಟಪಡುತ್ತಿರಲಿಲ್ಲ ಎಂದು ಹೇಳಿರುವ ಅವರು, ಬಿಸಿಸಿಐಗೆ ಕೂಡ ಈಗ ಅದೇ ಸಲಹೆಯನ್ನು ನೀಡಿದ್ದಾರೆ. ಅದರಲ್ಲೂ ಭಾರತದ ಅಗ್ರ ಬ್ಯಾಟರ್‌ಗಳಿಗೆ 2023ರ ಏಕದಿನ ವಿಶ್ವಕಪ್ ಮುಗಿಯುವವರೆಗೆ ಯಾವುದೇ ಕಾರಣಕ್ಕೂ ವಿಶ್ರಾಂತಿ ನೀಡದಂತೆ ತಂಡದ ಮ್ಯಾನೇಜ್‌ಮೆಂಟ್‌ಗೆ ಸಲಹೆ ನೀಡಿದ್ದಾರೆ.

ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ ಪಂದ್ಯಕ್ಕೆ ಆಸಿಸ್ ಪಡೆಯ ಬಲಿಷ್ಠ ಆಡುವ ಬಳಗ ಘೋಷಣೆಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ ಪಂದ್ಯಕ್ಕೆ ಆಸಿಸ್ ಪಡೆಯ ಬಲಿಷ್ಠ ಆಡುವ ಬಳಗ ಘೋಷಣೆ

ಭಾರತ ತಂಡ ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುತ್ತಿದೆ. ಈ ಸರಣಿಯಲ್ಲಿ ಭಾರತದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್‌ ರಾಹುಲ್‌ ಮತ್ತು ಇತರ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹಿರಿಯ ಆಟಗಾರರು ವಿಶ್ರಾಂತಿ ಪಡೆಯುತ್ತಿರುವುದರಿಂದ ಅನೇಕ ಕಿರಿಯ ಆಟಗಾರರಿಗೆ ಆಡಲು ಅವಕಾಶ ಸಿಕ್ಕಿದೆ.

ಪದೇ ಪದೇ ತಂಡದಲ್ಲಿ ಬದಲಾವಣೆ ಬೇಡ

ಪದೇ ಪದೇ ತಂಡದಲ್ಲಿ ಬದಲಾವಣೆ ಬೇಡ

ಪದೇ ಪದೇ ತಂಡದಲ್ಲಿ ಬದಲಾವಣೆ ಮಾಡುವುದರಿಂದ ತಂಡದ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡದ ಮ್ಯಾನೇಜ್‌ಮೆಂಟ್ 2023ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಮುನ್ನ ಉತ್ತಮ ಬ್ಯಾಟಿಂಗ್ ಸಂಯೋಜನೆಯನ್ನು ನಿರ್ಧರಿಸುವ ಉದ್ದೇಶದಿಂದ ಹಲವರಿಗೆ ಅವಕಾಶ ನೀಡುತ್ತಿದೆ.

"ತಂಡದ ಬ್ಯಾಟಿಂಗ್ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ, ಆದರೆ ಏಕದಿನ ವಿಶ್ವಕಪ್‌ಗೆ ಒಂದು ವರ್ಷಕ್ಕಿಂತ ಕಡಿಮೆ ಸಮಯ ಉಳಿದಿದೆ. ಯಾವುದೇ ವಿಶ್ರಾಂತಿ ನೀಡುವ ಅಗತ್ಯವಿಲ್ಲ. ತಂಡದ ಆಟಗಾರರನ್ನು ಪದೇ ಪದೇ ಬದಲಾಯಿಸಬಾರದು, ಇದರಿಂದ ತಂಡದಲ್ಲಿನ ಸಮತೋಲನ ಹಾಳಾಗುತ್ತದೆ" ಎಂದು ಹೇಳಿದರು.

IND vs NZ 3rd ODI : 3ನೇ ಏಕದಿನ ಪಂದ್ಯಕ್ಕೂ ಮಳೆ ಕಾಟ; ಸರಣಿ ಸೋಲಿನ ಭೀತಿಯಲ್ಲಿ ಭಾರತ!

 ಯಾವ ಆಟಗಾರನಿಗೂ ವಿಶ್ರಾಂತಿ ಬೇಡ

ಯಾವ ಆಟಗಾರನಿಗೂ ವಿಶ್ರಾಂತಿ ಬೇಡ

ದೀರ್ಘಾವಧಿಯವರೆಗೆ ಒಟ್ಟಿಗೆ ಆಡಲು ಅವಕಾಶ ನೀಡುವ ಸಲುವಾಗಿ ಬ್ಯಾಟರ್‌ಗಳಿಗೆ ವಿರಾಮ ನೀಡದಂತೆ ತಂಡದ ಮ್ಯಾನೇಜ್‌ಮೆಂಟ್‌ಗೆ ಸಲಹೆ ನೀಡಿದ್ದಾರೆ. ಸುನಿಲ್ ಗವಾಸ್ಕರ್ ಅವರ ಪ್ರಕಾರ, ಇದು ದೀರ್ಘಾವಧಿಯಲ್ಲಿ ತಂಡಕ್ಕೆ ಪ್ರಯೋಜನ ನೀಡುತ್ತದೆ.

"ಸೀಮಿತ ಓವರ್ ಕ್ರಿಕೆಟ್‌ನಲ್ಲಿ, ಬ್ಯಾಟಿಂಗ್ ಜೊತೆಯಾಟಗಳಲ್ಲಿ ಬ್ಯಾಟರ್‌ಗಳು ಪರಸ್ಪರರ ತೀರ್ಪಿನಲ್ಲಿ ವಿಶ್ವಾಸವನ್ನು ಹೊಂದಿರಬೇಕು, ಆದ್ದರಿಂದ ಹೆಚ್ಚಿನ ಅವಧಿಯವರೆಗೆ ಜೊತೆಯಲ್ಲಿ ಆಡಿದಾಗ ಮಾತ್ರ ಈ ಹೊಂದಾಣಿಕೆ ಸಾಧ್ಯವಾಗುತ್ತದೆ" ಎಂದು ಗವಾಸ್ಕರ್ ಹೇಳಿದ್ದಾರೆ.

ಬಿಡುವಿಲ್ಲದ ಅಂತಾರಾಷ್ಟ್ರೀಯ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು, ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ತಂಡದ ಆಡಳಿತ ಮಂಡಳಿ ನಿಯಮಿತವಾಗಿ ಆಟಗಾರರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿತು.

 ಆಟಗಾರರ ಜೊತೆ ಕೋಚ್‌ಗೆ ಕೂಡ ವಿಶ್ರಾಂತಿ

ಆಟಗಾರರ ಜೊತೆ ಕೋಚ್‌ಗೆ ಕೂಡ ವಿಶ್ರಾಂತಿ

ಆಟಗಾರರು ಮಾತ್ರವಲ್ಲದೆ ಕೋಚಿಂಗ್ ಸಿಬ್ಬಂದಿ ಕೂಡ ವಿಶ್ರಾಂತಿಯಲ್ಲಿದ್ದಾರೆ. ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿಶ್ರಾಂತಿ ತೆಗೆದುಕೊಂಡ ಬಗ್ಗೆ ಟೀಕೆ ಮಾಡಿದ್ದಾರೆ. ನಾನು ವಿರಾಮಗಳನ್ನು ನಂಬುವುದಿಲ್ಲ, ತಂಡ ಮತ್ತು ಆಟಗಾರರ ನಡುವೆ ಹೊಂದಾಣಿಕೆ ಇರಬೇಕು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇಷ್ಟು ವಿರಾಮಗಳ ಅಗತ್ಯವಿಲ್ಲ ಎಂದು ರವಿಶಾಸ್ತ್ರಿ ಹೇಳಿದರು.

ಹಿರಿಯ ಕ್ರಿಕೆಟಿಗರು ವಿರಾಮದಲ್ಲಿರುವಾಗ ಪ್ರತಿಭಾವಂತ ವ್ಯಕ್ತಿಗೆ ಅವಕಾಶ ನೀಡುವುದು ನಂತರ ಅವರು ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಅವರನ್ನು ಕೈಬಿಡುವುದು ಯುವಕರ ಆತ್ಮವಿಶ್ವಾಸಕ್ಕೆ ಅಡ್ಡಿಯಾಗಬಹುದು.

ಭಾರತ ತಂಡ ಕೊನೆಯ ಬಾರಿಗೆ 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಪಂದ್ಯಾವಳಿಯನ್ನು ಗೆದ್ದುಕೊಂಡಿತು. 2011ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ 50 ಓವರ್ ಗಳ ವಿಶ್ವಕಪ್ ಅನ್ನುಗೆದ್ದುಕೊಂಡಿತ್ತು.

Story first published: Tuesday, November 29, 2022, 17:00 [IST]
Other articles published on Nov 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X