ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ 3rd ODI : 3ನೇ ಏಕದಿನ ಪಂದ್ಯಕ್ಕೂ ಮಳೆ ಕಾಟ; ಸರಣಿ ಸೋಲಿನ ಭೀತಿಯಲ್ಲಿ ಭಾರತ!

IND vs NZ 3rd ODI: Heavy Rain Predicted In Christchurch; India In Fear Of Series Defeat

ನ್ಯೂಜಿಲೆಂಡ್‌ನಲ್ಲಿ ಹವಾಮಾನ ಮತ್ತು ಮಳೆಯ ಕಣ್ಣಾಮುಚ್ಚಾಲೆ ಆಟದ ನಡುವೆಯೇ ಕಳೆದ ಎರಡು ವಾರಗಳಲ್ಲಿ ಭಾರತ ಮತ್ತು ನ್ಯೂಜಿಲೆಂಡ್‌ನ ಟಿ20 ಮತ್ತು ಏಕದಿನ ಸರಣಿ ನಡೆಯುತ್ತಿದೆ.

ಭಾನುವಾರ (ನವೆಂಬರ್ 27) ಹ್ಯಾಮಿಲ್ಟ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಇನ್ನು ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯವೂ ಮಳೆಯಿಂದಾಗಿ ರದ್ದುಗೊಂಡಿತ್ತು.

'ನನ್ನನ್ನು ಗುಲಾಮನಂತೆ ನಡೆಸಿಕೊಂಡರು' ಎಂಬ ವಾಸಿಂ ಅಕ್ರಮ್ ಆರೋಪಕ್ಕೆ ಸಲೀಂ ಮಲಿಕ್ ತಿರುಗೇಟು'ನನ್ನನ್ನು ಗುಲಾಮನಂತೆ ನಡೆಸಿಕೊಂಡರು' ಎಂಬ ವಾಸಿಂ ಅಕ್ರಮ್ ಆರೋಪಕ್ಕೆ ಸಲೀಂ ಮಲಿಕ್ ತಿರುಗೇಟು

ಶಿಖರ್ ಧವನ್ ನಾಯಕತ್ವದ ಟೀಮ್ ಇಂಡಿಯಾ ಬುಧವಾರ (ನವೆಂಬರ್ 30) ನ್ಯೂಜಿಲೆಂಡ್ ವಿರುದ್ಧ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಪಾರ್ಕ್‌ನಲ್ಲಿ ಮೂರನೇ ಏಕದಿನ ಪಂದ್ಯವನ್ನಾಡಲಿದೆ.

ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಸಮಬಲಗೊಳಿಸಲು ಶುಭ್ರ ವಾತಾವರಣವಿರುವಂತೆ ಮತ್ತು ಇದಕ್ಕೆ ವರುಣ ಸಹಕರಿಸುವಂತೆ ಪ್ರಾರ್ಥಿಸುತ್ತಿದೆ. ಕಳೆದ ವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆ ಏಳು ವಿಕೆಟ್‌ಗಳಿಂದ ಪ್ರವಾಸಿ ತಂಡವನ್ನು ಮಣಿಸಿ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಆತಿಥೇಯ ತಂಡವು ಸರಣಿ ಸೋಲುವುದಿಲ್ಲ

ಆತಿಥೇಯ ತಂಡವು ಸರಣಿ ಸೋಲುವುದಿಲ್ಲ

ಮೂರನೇ ಪಂದ್ಯವನ್ನು ಭಾರತ ಗೆದ್ದರೂ, ಎರಡನೇ ಏಕದಿನ ಪಂದ್ಯ ರದ್ದಾಗಿದ್ದರಿಂದ ಆತಿಥೇಯ ತಂಡವು ಸರಣಿ ಸೋಲುವುದಿಲ್ಲ. ಬ್ಲ್ಯಾಕ್ ಕ್ಯಾಪ್ಸ್ ತಂಡ 2019ರ ವಿಶ್ವಕಪ್‌ನಿಂದ ತವರಿನಲ್ಲಿ ಏಕದಿನ ಸರಣಿಯನ್ನು ಸೋತಿಲ್ಲ.

ಇದೀಗ ಎಲ್ಲ ಕ್ರಿಕೆಟ್ ಅಭಿಮಾನಿಗಳ ಕಣ್ಣುಗಳು ಹವಾಮಾನದ ಮೇಲೆ ಇದ್ದು, ಟೀಮ್ ಇಂಡಿಯಾ ಅಂತಿಮ ಪಂದ್ಯದಲ್ಲಿ ಗೆಲುವಿನೊಂದಿಗೆ ಕನಿಷ್ಠ ಪಕ್ಷ ಏಕದಿನ ಸರಣಿಯನ್ನು 1-1ರಿಂದ ಸಮಬಲಗೊಳಿಸಿಕೊಳ್ಳಲು ಎದುರು ನೋಡುತ್ತಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯು ಹೆಚ್ಚು ಶುಭ್ರ ವಾತಾವರಣ ಭರವಸೆ ಇಲ್ಲ. ಬುಧವಾರ ಸಂಜೆ ಶೇಕಡಾ 88ಕ್ಕಿಂತ ಹೆಚ್ಚಿನ ತೇವಾಂಶದಿಂದ ಕೂಡಿದ್ದು, ಮಳೆಯ ಮುನ್ಸೂಚನೆ ಇದೆ ಎಂದು ಹೇಳಿದೆ.

ಉಭಯ ತಂಡಗಳ ನಡುವೆ ಕನಿಷ್ಠ 20 ಓವರ್‌ ಆಡಬೇಕು

ಉಭಯ ತಂಡಗಳ ನಡುವೆ ಕನಿಷ್ಠ 20 ಓವರ್‌ ಆಡಬೇಕು

"ಬೆಳಗ್ಗೆ ಮೋಡಕವಿದ ನಂತರ ಭಾರೀ ಪ್ರಮಾಣದಲ್ಲಿ ಮಧ್ಯಾಹ್ನದಿಂದ ಮಳೆ ಸುರಿಯುತ್ತದೆ. ಮಾರುತಗಳು ಮಧ್ಯಾಹ್ನದಿಂದ ದಕ್ಷಿಣಕ್ಕೆ ತಿರುಗುತ್ತವೆ, ಬ್ಯಾಂಕ್ಸ್ ಪೆನಿನ್ಸುಲಾದಲ್ಲಿ ಪ್ರಬಲವಾಗಿವೆ," ನ್ಯೂಜಿಲೆಂಡ್‌ನ ಹವಾಮಾನ ಇಲಾಖೆ ಬುಧವಾರದ ಹವಾಮಾನ ಭವಿಷ್ಯ ನುಡಿದಿದೆ.

ತಾಪಮಾನವು 10 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಕ್ಕೆ ಇಳಿಯುವ ನಿರೀಕ್ಷೆಯಿದೆ ಮತ್ತು ಮಧ್ಯಾಹ್ನದ ನಂತರ ಪಂದ್ಯವು ಮುಂದುವರಿಯುತ್ತದೆ. ಅಧಿಕೃತವಾಗಿ ಏಕದಿನ ಪಂದ್ಯವನ್ನು ಆಡಿಸಬೇಕೆಂದರೆ ಉಭಯ ತಂಡಗಳ ನಡುವೆ ಕನಿಷ್ಠ 20 ಓವರ್‌ಗಳನ್ನು ಆಡಬೇಕಾಗುತ್ತದೆ.

ಭಾರತ vs ನ್ಯೂಜಿಲೆಂಡ್ 3ನೇ ಏಕದಿನ ಪಂದ್ಯದ ವಿವರ

ಭಾರತ vs ನ್ಯೂಜಿಲೆಂಡ್ 3ನೇ ಏಕದಿನ ಪಂದ್ಯದ ವಿವರ

ಭಾರತ vs ನ್ಯೂಜಿಲೆಂಡ್ 3ನೇ ಏಕದಿನ ಪಂದ್ಯವು ಬುಧವಾರ, ನವೆಂಬರ್ 30ರಂದು ನಡೆಯಲಿದೆ.

3ನೇ ಏಕದಿನ ಪಂದ್ಯದ ಸ್ಥಳ: ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಪಾರ್ಕ್

ಭಾರತ vs ನ್ಯೂಜಿಲೆಂಡ್ 3ನೇ ಏಕದಿನ ಪಂದ್ಯದ ಸಮಯ: ಭಾರತೀಯ ಕಾಲಮಾನ ಬೆಳಗ್ಗೆ 7 ಗಂಟೆ

ಭಾರತ vs ನ್ಯೂಜಿಲೆಂಡ್ 3ನೇ ಏಕದಿನ ಪಂದ್ಯ ಯಾವ ಟಿವಿ ಚಾನೆಲ್‌ನಲ್ಲಿ ನೇರಪ್ರಸಾರ: DD ಸ್ಪೋರ್ಟ್ಸ್

ಭಾರತ vs ನ್ಯೂಜಿಲೆಂಡ್ 3ನೇ ಏಕದಿನ ಪಂದ್ಯವು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ನೇರ ಪ್ರಸಾರವಾಗಲಿದೆ.

ಭಾರತ vs ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ

ಭಾರತ vs ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ

ಭಾರತ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್, ಉಮ್ರಾನ್ ಮಲಿಕ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಮೈಕೆಲ್ ಬ್ರೇಸ್‌ವೆಲ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಲ್ಯೂಕಿ ಫರ್ಗುಸನ್

Story first published: Tuesday, November 29, 2022, 13:41 [IST]
Other articles published on Nov 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X