ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಮ್ರಾನ್ ಪ್ರಧಾನಿಯಾಗುತ್ತಾರೆ ಎಂದು 2012ರಲ್ಲೇ ಸನ್ನಿ ಭವಿಷ್ಯ!

By Mahesh
 Sunil Gavaskar’s prediction about Imran Khan in 2012 turns true

ಬೆಂಗಳೂರು, ಜುಲೈ 29: ಪಾಕಿಸ್ತಾನ ತಂಡದ ಮಾಜಿ ನಾಯಕ ಇಮ್ರಾನ್ ಅವರು ಮುಂದೊಂದು ದಿನ ಪಾಕಿಸ್ತಾನದ ಪ್ರಧಾನಿಯಾಗುತ್ತಾರೆ ಎಂದು ಲಿಟ್ಲ್ ಮಾಸ್ಟರ್, ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರು ಭವಿಷ್ಯ ನುಡಿದಿದ್ದರು. ಗವಾಸ್ಕರ್ ಅವರು ಪಂದ್ಯವೊಂದರಲ್ಲಿ ಕಾಮೆಂಟ್ರಿ ಮಾಡುವಾಗ ಹೇಳಿದ್ದು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಮತ್ತೆ ವೈರಲ್ ಆಗಿದೆ.

2012ರ ಏಷ್ಯಾಕಪ್ ಟೂರ್ನಮೆಂಟ್ ನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯ ನಡೆಯುವಾಗ ರಮೀಜ್ ರಾಜಾ ಹಾಗೂ ಗವಾಸ್ಕರ್ ಅವರು ಕಾಮೆಂಟ್ರಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ರಮೀಜ್ ಅವರು ಇಮ್ರಾನ್ ಅವರ ವಾಯ್ಸ್ ನಕಲು ಮಾಡಿ ಮಿಮಿಕ್ರಿ ಮಾಡಿ ಮಾತನಾಡಿದರು.

38 ಓವರ್ ಇದ್ದಾಗ ಇಂಡಿಯಾ ಬ್ಯಾಟಿಂಗ್ ಆಡುತ್ತಿದ್ದಾಗ ರಮೀಜ್ ಅವರು ಈ ರೀತಿ ಅಣಕವಾಡಿದರು. ತಕ್ಷಣವೇ ಪ್ರತಿಕ್ರಿಯಿಸಿದ ಗವಾಸ್ಕರ್, ಹುಷಾರಾಗಿ ಮಾತನಾಡಿ, ನೀವೀಗ ಮಿಮಿಕ್ರಿ ಮಾಡುತ್ತಿರುವ ವ್ಯಕ್ತಿ ಮುಂದೊಂದು ದಿನ ನಿಮ್ಮ ದೇಶದ ಪ್ರಧಾನಿಯಾಗಬಹುದು ಎಂದಿದ್ದರು.

ಪಾಕಿಸ್ತಾನ ಪ್ಯಾಷನ್ ನ ಸಂಪಾದಕ ಸಾಜ್ ಸಾದಿಕ್ ಅವರು ಈ ವಿಡಿಯೋ ಕ್ಲಿಪ್ಪಿಂಗ್ ಪೋಸ್ಟ್ ಮಾಡಿ, ಗವಾಸ್ಕರ್ ಅವರು ಅಂದು ಹೇಳಿದ್ದು, ಇಂದು ನಿಜವಾಗುತ್ತಿದೆ ಎಂದಿದ್ದಾರೆ.


ಪಾಕಿಸ್ತಾನದ ಕೆಳಮನೆಯಲ್ಲಿ 342 ಸ್ಥಾನಗಳಿದ್ದರೆ ನೇರವಾಗಿ ಚುನಾವಣೆ ನಡೆಯುವುದು 272 ಸ್ಥಾನಗಳಿಗೆ ಮಾತ್ರ. ಇಷ್ಟು ಸ್ಥಾನಗಳ ಪೈಕಿ 141 ಸ್ಥಾನಗಳು ಪಾಕಿಸ್ತಾನದಲ್ಲಿರುವ ಪಂಜಾಬ್ ಪ್ರಾಂತ್ಯದಲ್ಲೇ ಬರುತ್ತದೆ. ಇನ್ನು ಸಿಂಧ್ ಪ್ರಾತ್ಯದಲ್ಲಿ 61, ಖೈಬರ್ ಪಖ್ತುನ್ವಾ 39, ಬಲೂಚಿಸ್ತಾನ್ 16, ಎಫ್ ಎಟಿಎ (ಫತಾ) 12, ರಾಜಧಾನಿ (ಇಸ್ಲಾಮಾಬಾದ್ ಭಾಗಕ್ಕೆ) 3 ಸ್ಥಾನಗಳಿವೆ.

ಇಲ್ಲಿ ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ 172. ಈಗಾಗಲೇ 117ಸ್ಥಾನಗಳಲ್ಲಿ ಜಯಗಳಿಸಿರುವ ಪಿಟಿಐ ಪಕ್ಷ ಸರ್ಕಾರ ರಚಿಸುವುದು ಬಹುತೇಕ ಖಚಿತ. ಈ ನಿಟ್ಟಿನಲ್ಲಿ ಎಲ್ಲಾ ಸಾಧ್ಯತೆಗಳ ಬಗ್ಗೆ ಮಾಜಿ ಕ್ರಿಕೆಟಿಗರೂ ಆಗಿರುವ ಇಮ್ರಾನ್ ಖಾನ್ ಪರಾಮರ್ಶಿಸುತ್ತಿದ್ದಾರೆ. ಪಿಪಿಪಿ 43 ಹಾಗೂ ಪಿಎಂಎಲ್ ಎನ್ 63 ಸ್ಥಾನಗಳು ಹಾಗೂ ಇತರೆ 47 ಸ್ಥಾನಗಳನ್ನು ಗೆದ್ದಿದ್ದಾರೆ.

Story first published: Sunday, July 29, 2018, 17:52 [IST]
Other articles published on Jul 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X