ಅಕ್ರಮ ಬೌಲಿಂಗ್ ಶೈಲಿ: ನರೇನ್ ವಿರುದ್ಧ ದೂರು

Posted By:
Sunil Naren suspect for illeagel bowling action

ನವ ದೆಹಲಿ, ಮಾರ್ಚ್‌ 16: ತಮ್ಮ ವಿಭಿನ್ನ ಬೌಲಿಂಗ್ ಶೈಲಿಯಿಂದ ನಂ.1 ಸ್ಥಾನಕ್ಕೇರಿದ್ದ ವೆಸ್ಟ್‌ ಇಂಡೀಸ್‌ನ ಸ್ಪಿನ್ ಬೌಲರ್‌ ಸುನಿಲ್ ನರೇನ್ ಶಂಕಾಸ್ಪದ ಬೌಲಿಂಗ್ ವಿವಾದಕ್ಕೆ ಮತ್ತೆ ಸಿಲುಕಿದ್ದು, ಅವರು ಐಪಿಎಲ್ ಆಡುವರೇ ಇಲ್ಲವೆ ಎಂಬ ಅನುಮಾನ ಪ್ರಾರಂಭವಾಗಿದೆ.

ಅರಬ್‌ನಲ್ಲಿ ಪಿಸಿಎಲ್ (ಪಾಕಿಸ್ತಾನ ಸೂಪರ್ ಲೀಗ್) ಆಡುತ್ತಿರುವ ಟೂರ್ನಿಯಲ್ಲಿ ಲಾಹೋರ್ ಖಲಂದರ್ ಪರ ಆಡುತ್ತಿರುವ ಸುನಿಲ್ ನರೇನ್ ಅವರ ಬೌಲಿಂಗ್ ಶೈಲಿ ಬಗ್ಗೆ ಮ್ಯಾಚ್ ರೆಫರಿ ಹಾಗೂ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೂ ದೂರು ನೀಡಲಾಗಿದೆ.

ನರೇನ್ ಪ್ರತಿನಿಧಿಸುತ್ತಿರುವ ಲಾಹೋರ್ ತಂಡ ಈಗಾಗಲೇ ಟೂರ್ನಿಯಿಂದ ಹೊರ ಹೋಗಿದ್ದು, ಇಂದು ತನ್ನ ಕೊನೆಯ ಪಂದ್ಯ ಆಡಲಿದೆ. ದೂರು ಮಾತ್ರವೇ ದಾಖಲಾಗಿರುವ ಕಾರಣ ಈ ಪಂದ್ಯದಲ್ಲಿ ಆಡಲು ನರೇನ್‌ಗೆ ಅವಕಾಶ ನೀಡಲಾಗಿದೆ.

ನರೇನ್ ಬೌಲಿಂಗ್ ಶೈಲಿಯ ಬಗ್ಗೆ ಬಂದಿರುವ ದೂರನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್‌ಗೆ ವರ್ಗಾವಣೆ ಮಾಡಲಿದೆ. ವೆಸ್ಟ್‌ ಇಂಡೀಸ್ ಬೋರ್ಡ್‌ ತನ್ನ ನಿಯಮಕ್ಕೆ ಅನುಸಾರವಾಗಿ ನರೇನ್ ಬೌಲಿಂಗ್ ಶೈಲಿಯನ್ನು ತಪಾಸಣೆ ಮಾಡಿ ಆ ನಂತರದ ಕ್ರಮ ಕೈಗೊಳ್ಳಲಿದೆ.

ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಬೋರ್ಡ್‌ ನರೇನ್ ಬೌಲಿಂಗ್ ಶೈಲಿ ಪರೀಕ್ಷೆ ಮಾಡಿ ತೀರ್ಪು ನೀಡಿದ ಬಳಿಕವಷ್ಟೆ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಆಡಬಹುದಾಗಿದೆ. ಹಾಗಾಗಿ ಭಾರತದಲ್ಲಿ ನಡೆಯುವ ಐಪಿಎಲ್ ಸರಣಿಗೆ ಅವರ ಲಭ್ಯತೆಯ ಬಗ್ಗೆ ಅನುಮಾನ ಮೂಡಿಸಿದೆ. ಸುನಿಲ್ ನರೇನ್ ಅವರು ಕೊಲ್ಕತ್ತಾ ನೈಟ್‌ ರೈಡರ್ಸ್‌ ಪರ ಆಡುತ್ತಿದ್ದು, ಆ ತಂಡದ ಅತಿ ದುಬಾರಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಈ ಹಿಂದೆ 2015 ಮತ್ತು 2016ರಲ್ಲಿಯೂ ನರೇನ್ ಅವರ ಬೌಲಿಂಗ್ ಶೈಲಿಯ ಬಗ್ಗೆ ದೂರುಗಳು ಬಂದಿದ್ದವು ಆಗ ಅವರು ಬೌಲಿಂಗ್ ಪರೀಕ್ಷೆಗೆ ಒಳಗಾಗಿ ಉತ್ತೀರ್ಣರಾಗಿ ಬಂದಿದ್ದರು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, March 16, 2018, 16:04 [IST]
Other articles published on Mar 16, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ