ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡಿಆರ್‌ಎಸ್ ಎಂದರೆ ಅಭಿಮಾನಿಗಳ ಪಾಲಿಗೆ ಧೋನಿ ರಿವ್ಯೂ ಸಿಸ್ಟಮ್: ಮಾಹಿಗೂ ಈ ವಿಚಾರ ಗೊತ್ತು ಎಂದ ರೈನಾ

Suresh Raina said MS Dhoni is aware about fans call DRS as Dhoni Review System

ಕಳೆದ ಒಂದು ದಶಕಗಳಿಗೂ ಹೆಚ್ಚು ಕಾಲದಿಂದ ಕ್ರಿಕೆಟ್‌ನಲ್ಲಿ ಅಂಪಾಯರ್ ನಿರ್ಧಾರವನ್ನು ಪರಿಶೀಲಿಸುವ ಡಿಆರ್‌ಎಸ್ ನಿಯಮ ಜಾರಿಯಲ್ಲಿದೆ. ಅಂಪಾಯರ್ ನೀಡಿರುವ ತೀರ್ಪನ್ನು ಪರಿಶೀಲಿಸಿ ತೀರ್ಪು ಸರಿಪಡಿಸಿಕೊಳ್ಳಲು ಇರುವ ಅವಕಾಶ ಇದಾಗಿದೆ. ಡಿಸಿಶನ್ ರಿವ್ಯೂ ಸಿಸ್ಟಮ್ ಎಂಬುದನ್ನು ಚುಟುಕಾಗಿ ಡಿಆರ್ಎಸ್ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ಈ ಡಿಆರ್‌ಎಸ್ ಧೋನಿ ಅಭಿಮಾನಿಗಳ ಪಾಲಿಗೆ ಧೋನಿ ರಿವ್ಯೂ ಸಿಸ್ಟಮ್ ಎಂದೇ ಖ್ಯಾತವಾಗಿದೆ ಎಂದರೆ ತಪ್ಪಿಲ್ಲ. ಇದಕ್ಕೆ ಕಾರಣವೂ ಇದೆ. ಈ ವಿಚಾರ ಸ್ವತಃ ಧೋನಿಗೂ ತಿಳಿದಿದೆ ಎಂಬುದನ್ನು ಎಂಎಸ್ ಧೋನಿಯ ಆಪ್ತ ಗೆಳೆಯ ಸುರೇಶ್ ರೈನಾ ಬಹಿರಂಗಪಡಿಸಿದ್ದಾರೆ.

ಡಿಆರ್ಎಸ್ ನಿಯಮವನ್ನು ಅತ್ಯಂತ ಪರಿಣಾಮವಾಗಿ ಬಳಸುತ್ತಿದ್ದ ಆಟಗಾರ ಕ್ರಿಕೆಟಿಗ ಎಂದರೆ ಎಂಎಸ್ ಧೋನಿ. ಟೀಮ್ ಇಂಡಿಯಾ ನಾಯಕನಾಗಿದ್ದಾಗ ಹಾಗೂ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವ ವೇಳೆ ಎಂಎಸ್ ಧೋನಿ ಡಿಆರ್‌ಎಸ್ ತೆಗೆದುಕೊಂಡರೆ ಅದು ಬಹುತೇಕ ಧೋನಿ ಪರವಾಗಿಯೇ ಇರುತ್ತಿದ್ದಿದ್ದು ಇದಕ್ಕೆ ಕಾರಣ. ಹೀಗಾಗಿ ಡಿಸಿಶನ್ ರಿವ್ಯೂ ಸಿಸ್ಟಮ್ ಅಭಿಮಾನಿಗಳ ಪಾಲಿಗೆ ಧೋನಿ ರಿವ್ಯೂ ಸಿಸ್ಟಮ್ ಎನಿಸಿಕೊಂಡಿತ್ತು. ಈ ವಿಚಾರ ಎಂಎಸ್ ಧೋನಿಗೂ ಅರಿವಿಗೆ ಬಂದಿದೆ ಎಂದಿದ್ದಾರೆ ಸುರೇಶ್ ರೈನಾ.

Ind vs Nz 1st ODI: ಆ ವೇಗಿಯನ್ನು ಪ್ಲೇಯಿಂಗ್ XI ನಿಂದ ಹೊರಗಿಟ್ಟು ತಪ್ಪು ಮಾಡಿತಾ ಟೀಂ ಇಂಡಿಯಾ?Ind vs Nz 1st ODI: ಆ ವೇಗಿಯನ್ನು ಪ್ಲೇಯಿಂಗ್ XI ನಿಂದ ಹೊರಗಿಟ್ಟು ತಪ್ಪು ಮಾಡಿತಾ ಟೀಂ ಇಂಡಿಯಾ?

ವಯಕಾಮ್18 ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುರೇಶ್ ರೈನಾ ಈ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಅಭಿಮಾನಿಗಳು ಡಿಆರ್‌ಎಸ್‌ಅನ್ನು ಧೋನಿ ರಿವ್ಯೂ ಸಿಸ್ಟಮ್ ಎಂದು ಕರೆಯುತ್ತಾರೆ ಎಂಬುದರ ಅರಿವು ಧೋನಿಗೆ ಇದೆ" ಎಂದಿದ್ದಾರೆ ಸುರೇಶ್ ರೈನಾ.

"ನನಗೂ ಕೂಡ ಡಿಆರ್‌ಎಸ್ ಎಂದರೆ ಯಾವಾಗಲೂ ಧೋನಿ ರಿವ್ಯೂ ಸಿಸ್ಟಮ್ ಎಂಬುದೇ ಆಗಿದೆ. ನನಗು ಕೂಡ ಅದರ ನಿಜ ಸ್ವರೂಪ ತಡವಾಗಿಯೇ ತಿಳಿಯಿತು. ಧೋನಿ ರಿವ್ಯೂ ನಿರ್ಧಾರವನ್ನು ಯಾವಾಗಲೂ ಕೊನೇಯ ಕ್ಷಣದಲ್ಲಿಯೇ ನಿರ್ಧರಿಸುತ್ತಿದ್ದರು, ಯಾಕೆಂದರೆ ಬೌಲರ್‌ಗಳು ಯಾವಾಗಲೂ ಔಟ್ ಎಂದೇ ಭಾವಿಸುತ್ತಾರೆ. ಆದರೆ ವಿಕೆಟ್‌ನ ಹಿಂದೆ ನಿಂತಿರುವ ಧೋನಿ ಅದರ ಬಗ್ಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿತ್ತು" ಎಂದಿದ್ದಾರೆ ಸುರೇಶ್ ರೈನಾ.

ಇನ್ನು ಇದೇ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಕೂಡ ಕೆಲ ಸಂದರ್ಭಗಳಲ್ಲಿ ಅಂಪೈರ್‌ಗಳು ಕೂಡ ಧೋನಿ ಅಪೀಲ್ ಮಾಡಿದ್ದಾರಾ ಎಂದು ನೋಡುತ್ತಿದ್ದರು ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

Story first published: Thursday, January 19, 2023, 13:46 [IST]
Other articles published on Jan 19, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X