ಪಾಕ್ ವಿರುದ್ಧ ವಾರ್ನರ್‌ ನಾಟ್ಔಟ್ ಆಗಿದ್ದರೂ ನಿರ್ಗಮಿಸಲು ಕಾರಣ ಆ ಆಟಗಾರ!; ಸತ್ಯ ಬಿಚ್ಚಿಟ್ಟ ವೇಡ್

ಆ್ಯರನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಯಾರೂ ಊಹಿಸಿರದ ರೀತಿಯ ಪ್ರದರ್ಶನವನ್ನು ನೀಡಿ ಮಿಂಚುತ್ತಿದೆ. ಟೂರ್ನಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಸೆಮಿಫೈನಲ್ ಹಂತವನ್ನು ತಲುಪುವುದು ಕಷ್ಟ ಎಂದು ಹಲವಾರು ನುರಿತ ಮಾಜಿ ಕ್ರಿಕೆಟಿಗರೇ ಹೇಳಿಕೆಗಳನ್ನು ನೀಡಿದ್ದರು. ಆದರೆ ಆ ಎಲ್ಲಾ ಊಹೆಗಳಿಗೂ ತಮ್ಮ ಪ್ರದರ್ಶನದ ಮೂಲಕ ಉತ್ತರ ನೀಡುತ್ತಿರುವ ಆಸ್ಟ್ರೇಲಿಯಾ ಇದೀಗ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿದೆ.

ನೀವು ಈ ತಪ್ಪನ್ನು ಮಾಡಿದರೆ ನ್ಯೂಜಿಲೆಂಡ್‌ ವಿರುದ್ಧ ಗೆಲುವು ಕಷ್ಟ; ರೋಹಿತ್ ಪಡೆಗೆ ಎಚ್ಚರಿಸಿದ ಸೆಹ್ವಾಗ್ನೀವು ಈ ತಪ್ಪನ್ನು ಮಾಡಿದರೆ ನ್ಯೂಜಿಲೆಂಡ್‌ ವಿರುದ್ಧ ಗೆಲುವು ಕಷ್ಟ; ರೋಹಿತ್ ಪಡೆಗೆ ಎಚ್ಚರಿಸಿದ ಸೆಹ್ವಾಗ್

ಹೌದು, ಲೀಗ್ ಹಂತದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕಿಂತ ಅತ್ಯುತ್ತಮ ನೆಟ್ ರನ್ ರೇಟ್ ಪಡೆದುಕೊಳ್ಳುವುದರ ಮೂಲಕ ಸೆಮಿಫೈನಲ್ ಹಂತಕ್ಕೆ ಲಗ್ಗೆ ಇಟ್ಟ ಆಸ್ಟ್ರೇಲಿಯ ನವೆಂಬರ್ 11ರಂದು ಪಾಕಿಸ್ತಾನದ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಸೆಣಸಾಡಿತು. ಹಾಗೂ ಈ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 5 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ ಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದ್ದು ಟ್ರೋಫಿಗಾಗಿ ನ್ಯೂಜಿಲೆಂಡ್ ವಿರುದ್ಧ ನವೆಂಬರ್ 14ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸೆಣಸಾಟ ನಡೆಸಲಿದೆ.

ಭಾರತ vs ನ್ಯೂಜಿಲೆಂಡ್‌: ಈ ಇಬ್ಬರಿಗೆ ಅವಕಾಶ ನೀಡದೇ ಇರುವುದು ಸರಿಯಲ್ಲ ಎಂದು ಗರಂ ಆದ ಗವಾಸ್ಕರ್ಭಾರತ vs ನ್ಯೂಜಿಲೆಂಡ್‌: ಈ ಇಬ್ಬರಿಗೆ ಅವಕಾಶ ನೀಡದೇ ಇರುವುದು ಸರಿಯಲ್ಲ ಎಂದು ಗರಂ ಆದ ಗವಾಸ್ಕರ್

ಇನ್ನು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಕುರಿತಾಗಿ 2 ವಿವಾದಗಳು ಹುಟ್ಟಿಕೊಂಡಿವೆ. ಹೌದು, ಮೊದಲನೆಯದಾಗಿ ಆಸ್ಟ್ರೇಲಿಯದ ಬ್ಯಾಟಿಂಗ್ ವೇಳೆ 8ನೇ ಓವರ್ ಬೌಲಿಂಗ್ ಮಾಡುತ್ತಿದ್ದ ಪಾಕಿಸ್ತಾನದ ಮೊಹಮ್ಮದ್ ಹಫೀಜ್ ಎಸೆತವೊಂದನ್ನು ಹಾಕುವಾಗ ನಿಯಂತ್ರಣ ಕಳೆದುಕೊಂಡು ಎರಡರಿಂದ ಮೂರು ಪಿಚ್ ಬೀಳುವಂತಹ ಎಸೆತವನ್ನು ಪಿಚ್‌ನಿಂದ ತೀರ ಹೊರಕ್ಕೆ ಹಾಕಿಬಿಟ್ಟರು. ಹೀಗೆ ನಿಯಂತ್ರಣವನ್ನು ಕಳೆದುಕೊಂಡು ಮೊಹಮ್ಮದ್ ಹಫೀಜ್ ಎಸೆದ ಎಸೆತಕ್ಕೆ ಕಣದಲ್ಲಿದ್ದ ಡೇವಿಡ್ ವಾರ್ನರ್ ಪಿಚ್‌ನಿಂದ ಹೊರಹೋಗುತ್ತಿದ್ದ ಚೆಂಡಿನ ಸಮೀಪಕ್ಕೆ ಬಂದು ಸಿಕ್ಸರ್ ಬಾರಿಸಿದ್ದರು. ಈ ಕುರಿತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸೇರಿ ಇನ್ನೂ ಮುಂತಾದವರು ವಿರೋಧ ವ್ಯಕ್ತಪಡಿಸುತ್ತಿದ್ದು ಡೇವಿಡ್ ವಾರ್ನರ್ ಇಂತಹ ಎಸೆತಕ್ಕೆ ಸಿಕ್ಸರ್ ಬಾರಿಸಿ ಕ್ರೀಡಾಸ್ಫೂರ್ತಿಯನ್ನು ಮರೆತಿದ್ದಾರೆ ಎಂದು ಕಿಡಿಕಾರುತ್ತಿದ್ದಾರೆ.

ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಿಲ್ಲ, ತಂಡದಿಂದಲೇ ಆಚೆ ಹಾಕಲಾಗಿದೆ; ಕಾರಣ ಆ ಓರ್ವ ಆಟಗಾರ!ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಿಲ್ಲ, ತಂಡದಿಂದಲೇ ಆಚೆ ಹಾಕಲಾಗಿದೆ; ಕಾರಣ ಆ ಓರ್ವ ಆಟಗಾರ!

ಇದೊಂದು ವಿವಾದವಾದರೆ, ಇದೇ ಪಂದ್ಯದಲ್ಲಿ ಮತ್ತೊಂದು ವಿವಾದಕ್ಕೆ ಡೇವಿಡ್ ವಾರ್ನರ್ ಅವರ ಹೆಸರು ತಗುಲಿ ಹಾಕಿಕೊಂಡಿದೆ. ಹೌದು, ಡೇವಿಡ್ ವಾರ್ನರ್ ಔಟ್ ಇಲ್ಲದಿದ್ದರೂ ಅಂಪೈರ್ ತೀರ್ಪಿಗೆ ತಲೆಬಾಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ನಾಟ್ ಔಟ್ ಆಗಿದ್ದರೂ ಡೇವಿಡ್ ವಾರ್ನರ್ ಡಿ ಆರ್ ಎಸ್ ಬಳಸಿಕೊಳ್ಳದೇ ಇರುವುದು ಇದೀಗ ಈ ವಿವಾದ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುವಂತೆ ಮಾಡಿದೆ. ಅಷ್ಟಕ್ಕೂ ಸಾಕಷ್ಟು ಅನುಭವ ಇರುವ ಡೇವಿಡ್ ವಾರ್ನರ್ ಡಿ ಆರ್ ಎಸ್ ನಿಯಮವನ್ನು ಯಾಕೆ ಆಯ್ಕೆ ಮಾಡಿಕೊಳ್ಳಲಿಲ್ಲ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಕಾಡುತ್ತಿದ್ದು,ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿರುವ ಈ ಸಂಶಯಕ್ಕೆ ಇದೀಗ ಮ್ಯಾಥ್ಯೂ ವೇಡ್ ಈ ಕೆಳಕಂಡಂತೆ ಉತ್ತರವನ್ನು ನೀಡಿದ್ದಾರೆ.

ಡೇವಿಡ್ ವಾರ್ನರ್ ಡಿ ಆರ್ ಎಸ್ ತೆಗೆದುಕೊಳ್ಳದೇ ಇರಲು ಕಾರಣ ಆ ಆಟಗಾರ

ಡೇವಿಡ್ ವಾರ್ನರ್ ಡಿ ಆರ್ ಎಸ್ ತೆಗೆದುಕೊಳ್ಳದೇ ಇರಲು ಕಾರಣ ಆ ಆಟಗಾರ

ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಸೆಮಿಫೈನಲ್ ಪಂದ್ಯ ಮುಗಿದ ನಂತರ ಮಾತನಾಡಿರುವ ಮ್ಯಾಥ್ಯೂ ವೇಡ್ ನಾಟ್ ಔಟ್ ಆಗಿದ್ದರೂ ಡೇವಿಡ್ ವಾರ್ನರ್ ಡಿ ಆರ್ ಎಸ್ ನಿಯಮ ತೆಗೆದುಕೊಳ್ಳದೇ ಪೆವಿಲಿಯನ್ ಕಡೆ ಹೆಜ್ಜೆ ಹಾಕುವುದಕ್ಕೆ ಕಾರಣ ವಾರ್ನರ್ ಜತೆ ಕಣದಲ್ಲಿದ್ದ ಮತ್ತೋರ್ವ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಎಂದಿದ್ದಾರೆ. ಬೌಲರ್ ಎಸೆದ ಚೆಂಡು ಡೇವಿಡ್ ವಾರ್ನರ್ ಬ್ಯಾಟ್ ಸಮೀಪ ಬರುತ್ತಿದ್ದಂತೆಯೇ ಶಬ್ದವೊಂದು ಕೇಳಿ ಬಂದಿತ್ತು, ಹೀಗಾಗಿಯೇ ಗ್ಲೆನ್ ಮ್ಯಾಕ್ಸ್‌ವೆಲ್ ಡೇವಿಡ್ ವಾರ್ನರ್ ಬ್ಯಾಟ್ ಚೆಂಡಿಗೆ ತಾಕಿದೆ ಭಾವಿಸಿದ್ದರು. ಈ ಕಾರಣದಿಂದಾಗಿ ಡೇವಿಡ್ ವಾರ್ನರ್ ಡಿ ಆರ್ ಎಸ್ ನಿಯಮವನ್ನು ತೆಗೆದುಕೊಳ್ಳಲು ಮುಂದಾಗಲಿಲ್ಲ ಎಂದು ಮ್ಯಾಥ್ಯೂ ವೇಡ್ ಆ ಸಂದರ್ಭದಲ್ಲಿ ಡೇವಿಡ್ ವಾರ್ನರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ನಡುವೆ ನಡೆದ ಮಾತುಕತೆಯನ್ನು ಬಿಚ್ಚಿಟ್ಟಿದ್ದಾರೆ.

ಆ ಸಂದರ್ಭ ಕಠಿಣವಾದದ್ದು

ಆ ಸಂದರ್ಭ ಕಠಿಣವಾದದ್ದು

ಇನ್ನೂ ಮುಂದುವರೆದು ಡೇವಿಡ್ ವಾರ್ನರ್ ನಾಟೌಟ್ ಕುರಿತಾಗಿ ಮಾತನಾಡಿರುವ ಮ್ಯಾಥ್ಯೂ ವೇಡ್ ಅಂತಹ ಸಂದರ್ಭಗಳಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ತೀರಾ ಕಷ್ಟದ ಕೆಲಸ ಎಂದಿದ್ದಾರೆ. ಚೆಂಡು ನಿಜಕ್ಕೂ ಬ್ಯಾಟಿಗೆ ತಾಕಿದೆಯೋ ಅಥವಾ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸುವುದು ಕಷ್ಟ, ಹೀಗಾಗಿ ಈ ರೀತಿಯ ತಪ್ಪು ನಿರ್ಣಯಗಳು ಹಲವಾರು ಬಾರಿ ಜರುಗಿವೆ ಎಂದು ಮ್ಯಾಥ್ಯೂ ವೇಡ್ ಹೇಳಿದ್ದಾರೆ.

ಮ್ಯಾಥ್ಯೂ ವೇಡ್ ಪಂದ್ಯಶ್ರೇಷ್ಠ

ಮ್ಯಾಥ್ಯೂ ವೇಡ್ ಪಂದ್ಯಶ್ರೇಷ್ಠ

ಡೇವಿಡ್ ವಾರ್ನರ್ ನಾಟೌಟ್ ವಿವಾದದ ಕುರಿತಾಗಿ ಇಷ್ಟೆಲ್ಲಾ ಮಾತನಾಡಿರುವ ಮ್ಯಾಥ್ಯೂ ವೇಡ್ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಕೇವಲ 17 ಎಸೆತಗಳಲ್ಲಿ ಅಜೇಯ 41 ರನ್ ಬಾರಿಸಿದ ಮ್ಯಾಥ್ಯೂ ವೇಡ್ 2 ಬೌಂಡರಿ ಮತ್ತು 4 ಸಿಕ್ಸರ್ ಚಚ್ಚಿದರು. ಅಂತಿಮವಾಗಿ 10 ಎಸೆತಗಳಲ್ಲಿ 20 ರನ್ ಅಗತ್ಯವಿದ್ದಾಗ ಶಾಹಿನ್ ಅಫ್ರಿದಿ ಎಸೆತದಲ್ಲಿ ಸಿಕ್ಸ್ ಬಾರಿಸಲು ಮ್ಯಾಥ್ಯೂ ವೇಡ್ ಯತ್ನಿಸಿದರು. ಆದರೆ ಆ ಹೊಡೆತಕ್ಕೆ ಚೆಂಡು ಹಸನ್ ಅಲಿ ಕೈಗೆ ಹೋಗಿತ್ತು, ಆದರೂ ಸಹ ಹಸನ್ ಅಲಿ ಆ ಕ್ಯಾಚ್ ಹಿಡಿಯುವಲ್ಲಿ ವಿಫಲವಾಗಿ ಕ್ಯಾಚನ್ನು ಕೈಚೆಲ್ಲಿದರು. ಹೀಗೆ ಹಸನ್ ಅಲಿ ಕ್ಯಾಚ್ ಬಿಟ್ಟದ್ದೇ ತಡ ಅದೇ ಓವರ್‌ನ ಮುಂದಿನ 3 ಎಸೆತಗಳಿಗೂ ಸಿಕ್ಸರ್ ಚಚ್ಚುವ ಮೂಲಕ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಮ್ಯಾಥ್ಯೂ ವೇಡ್ ಆಸ್ಟ್ರೇಲಿಯವನ್ನು ಇನ್ನೂ 1 ಓವರ್ ಬಾಕಿ ಉಳಿದಿರುವಾಗಲೇ ಗೆಲುವಿನ ದಡ ಸೇರಿಸಿಬಿಟ್ಟರು. ಹೀಗೆ ಅಂತಿಮ ಹಂತದಲ್ಲಿ ಆಸ್ಟ್ರೇಲಿಯಾ ಪರ ಅಬ್ಬರಿಸಿದ ಮ್ಯಾಥ್ಯೂ ವೇಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

For Quick Alerts
ALLOW NOTIFICATIONS
For Daily Alerts
Story first published: Friday, November 12, 2021, 13:53 [IST]
Other articles published on Nov 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X