ಅಶ್ವಿನ್ ಸೇರ್ಪಡೆ ಹಾಗೂ ಚಾಹಲ್ ಕೈಬಿಟ್ಟ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಹೇಳಿದ್ದಿಷ್ಟು

ಮುಂಬೈ, ಸೆಪ್ಟೆಂಬರ್ 9: ಟಿ20 ವಿಶ್ವಕಪ್‌ಗೆ ಭಾರತೀಯ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಯಾವೆಲ್ಲಾ ಆಟಗಾರರು ಈ ಬಾರಿಯ ತಂಡದಲ್ಲಿ ಸ್ಥಾನವನ್ನು ಪಡೆಯಲಿದ್ದಾರೆ ಎಂಬ ಕುತೂಹಲಕ್ಕೆ ಉತ್ತರ ದೊರೆತಿದೆ. ಈ ಬಾರಿಯ ಆಯ್ಕೆಯಲ್ಲಿ ಕೆಲ ಅಚ್ಚರಿಗಳು ಕಾಣಿಸಿಕೊಂಡಿದೆ. ಪ್ರಮುಖವಾಗಿ ಸ್ಪಿನ್ ವಿಭಾಗದಲ್ಲಿ ಆರ್ ಅಶ್ವಿನ್ ಟಿ20 ವಿಶ್ವಕಪ್‌ಗೆ ಸೇರ್ಪಡೆಯಾಗಿದ್ದರೆ ಯುಜುವೇಂದ್ರ ಚಾಹಲ್ ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಈ ಎರಡು ಬದಲಾವಣೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.

ಇನ್ನು ಈ ಎರಡು ಆಟಗಾರರ ಆಯ್ಕೆಯ ಬಗ್ಗೆ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಆರ್ ಅಶ್ವಿನ್ ಟೀಮ್ ಇಂಡಿಯಾದ ಟಿ20 ವಿಶ್ವಕಪ್ ತಂಡಕ್ಕೆ ಸೇರ್ಪಡೆಯಾಗಲು ಕಾರಣವೇನು ಎಂಬ ವಿಚಾರವಾಗಿ ಕೆಲ ಅಂಶಗಳನ್ನು ಚೇತನ್ ಶರ್ಮಾ ಮಾಧ್ಯಮಗಳ ಮುಂದಿಟ್ಟಿದ್ದಾರೆ. ಆರ್ ಅಶ್ವಿನ್ ಟೀಮ್ ಇಂಡಿಯಾ ಸೇರ್ಪಡೆಗೆ ಐಪಿಎಲ್‌ನಲ್ಲಿ ಅವರು ನೀಡುತ್ತಾ ಬಂದಿರುವ ಪ್ರದರ್ಶನವೃ ಕಾರಣ ಎಂದು ತಿಳಿಸಿದರು.

ಟಿ20 ವಿಶ್ವಕಪ್‌: ಟೀಮ್ ಇಂಡಿಯಾದಲ್ಲಿಲ್ಲ ಈ ಪ್ರಮುಖ ಆಟಗಾರರಿಗೆ ಸ್ಥಾನಟಿ20 ವಿಶ್ವಕಪ್‌: ಟೀಮ್ ಇಂಡಿಯಾದಲ್ಲಿಲ್ಲ ಈ ಪ್ರಮುಖ ಆಟಗಾರರಿಗೆ ಸ್ಥಾನ

"ಆರ್ ಅಶ್ವಿನ್ ಐಪಿಎಲ್‌ನಲ್ಲಿ ನಿರಂತರವಾಗಿ ಆಡಿಕೊಂಡು ಬರುತ್ತಿದ್ದಾರೆ. ಐಪಿಎಲ್ ವೇದಿಕೆಯಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ನೀವು ವಿಶ್ವಕಪ್‌ನಂತಾ ದೊಡ್ಡ ಟೂರ್ನಮೆಂಟ್‌ಗೆ ಸ್ಪರ್ಧಿಸುತ್ತಿದ್ದಾಗ ನಿಮಗೆ ಆಫ್ ಸ್ಪಿನ್ನರ್‌ನ ಅಗತ್ಯವಿದೆ. ಈ ಬಾರಿಯ ಐಪಿಎಲ್ ಕೂಡ ಯುಎಇನಲ್ಲಿಯೇ ನಡೆಯುತ್ತಿರುವ ಕಾರಣದಿಂದಾಗಿ ಪಿಚ್ ನಿಧಾನಗತಿಯನ್ನು ಪಡೆದುಕೊಳ್ಳಲಿದೆ ಎಂದು ಎಲ್ಲರೂ ಈ ನಿರ್ಧಾರಕ್ಕೆ ಬರಲಾಯಿತು. ಇಲ್ಲಿ ಸ್ಪಿನ್ನರ್‌ಗಳಿಗೆ ಉತ್ತಮವಾದ ಅವಕಾಶವಿದೆ. ಹೀಗಾಗಿ ಆಪ್‌ಸ್ಪಿನ್ನರ್‌ನನ್ನು ಮುಖ್ಯವಾಗಿ ಪರಿಹಣಿಸಲಾಯಿತು. ವಾಶಿಂಗ್ಟನ್ ಸುಂದರ್ ಗಾಯಗೊಂಡಿರರುವ ಕಾರಣದಿಂದಾಗಿ ಆರ್ ಅಶ್ವಿನ್ ತಂಡದ ಪಾಲಿಗೆ ಅಸ್ತ್ರವಾಗಲಿದ್ದಾರೆ" ಎಂದಿದ್ದಾರೆ ಚೇತನ್ ಶರ್ಮಾ.

ಇನ್ನು ಮತ್ತೊಂದೆಡೆ ಯುಜುವೇಂದ್ರ ಚಾಹಲ್ ಸ್ಥಾನಕ್ಕೆ ಯುವ ಸ್ಪಿನ್ನರ್ ರಾಹುಲ್ ಚಹರ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಸಿಕ್ಕ ಅವಕಾಶವನ್ನು ಕೂಡ ಚಹರ್ ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಹೀಗಾಗಿ ಚಾಹಲ್ ಬದಲಿಗೆ ರಾಹುಲ್ ಚಹಲ್ ತಂಡವನ್ನು ಸೇರಿಕೊಂಡಿದ್ದಾರೆ.

ಟಿ20 ವಿಶ್ವಕಪ್‌ಗೆ ಬಲಿಷ್ಠ ಟೀಮ್ ಇಂಡಿಯಾ ತಂಡ ಪ್ರಕಟ: ಸಂಪೂರ್ಣ ತಂಡದ ವಿವರಟಿ20 ವಿಶ್ವಕಪ್‌ಗೆ ಬಲಿಷ್ಠ ಟೀಮ್ ಇಂಡಿಯಾ ತಂಡ ಪ್ರಕಟ: ಸಂಪೂರ್ಣ ತಂಡದ ವಿವರ

ಇನ್ನು ಯುಜುವೇಂದ್ರ ಚಾಹಲ್ ಆಯ್ಕೆಯಾಗದ ಬಗ್ಗೆ ಚೇತನ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. "ಯುಜುವೇಂದ್ರ ಚಾಹಲ್ ಹೆಸರು ಕೂಡ ಚರ್ಚೆಗೆ ಬಂದಿತ್ತು. ಆದರೆ ವೇಗ ಕಡಿಮೆ ಇರುವ ಪಿಚ್‌ನಲ್ಲಿ ವೇಗವಾಗಿ ಚೆಂಡು ಎಸೆಯುವ ಬೌಲರ್‌ನನ್ನು ಆಯ್ಕೆ ಮಾಡಲು ನಾವು ಬಯಸಿದ್ದೆವು. ಹೀಗಾಗಿ ಚಾಹಲ್ ಬದಲಿಗೆ ರಾಹುಲ್ ಚಹರ್ ಅವರನ್ನು ಆಯ್ಕೆ ಮಾಡಲಾಯಿತು" ಎಂದು ವಿವರಿಸಿದ್ದಾರೆ ಚೇತನ್ ಶರ್ಮಾ.

ಟಿ 20 ವಿಶ್ವಕಪ್‌ಗೆ ಆಯ್ಕೆಯಾದ ಭಾರತ ತಂಡ

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ,ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರಿತ್ ಬೂಮ್ರ, ರಾಹುಲ್ ಚಹರ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ,

T 20 ವಿಶ್ವಕಪ್ ಆಡಲು ಹೊರಟ ತಂಡಕ್ಕೆ ಧೋನಿ ಮಾರ್ಗದರ್ಶನ | Oneindia Kannada

ಮೀಸಲು ಆಟಗಾರರು: ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಶ್ರೇಯಸ್ ಅಯ್ಯರ್

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 9, 2021, 13:12 [IST]
Other articles published on Sep 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X