ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಯಶಸ್ಸಿಗೆ ಕಾರಣ ಹೇಳಿದ ಯುವ ಆಲ್‌ರೌಂಡರ್ ಸ್ಯಾಮ್ ಕರನ್

T20 World Cup: England cricketer Sam Curran said consistent run in the team has given more confidence

ಇಂಗ್ಲೆಂಡ್ ತಂಡದ ಯುವ ಆಲ್‌ರೌಂಡರ್ ಸ್ಯಾಮ್ ಕರನ್ ಅದ್ಭುತ ಪ್ರದರ್ಶನದ ಮೂಲಕ ಮಿಂಚುತ್ತಿದ್ದಾರೆ. ಐರ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತನಾಡಿದ ಕರನ್ ತನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಲು ಕಾರಣ ವಿವರಿಸಿದ್ದಾರೆ. ತಂಡದಲ್ಲಿ ಆಡಲು ಸ್ಥಿರವಾಗಿ ಅವಕಾಶ ದೊರೆಯುತ್ತಿರುವ ಕಾರಣದಿಂದಾಗಿಯೇ ತನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದಿದ್ದಾರೆ ಸ್ಯಾಮ್ ಕರನ್.

ಇಂಗ್ಲೆಂಡ್ ತಂಡ ತನ್ನ ಎರಡನೇ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಐತಿಹಾಸಿಕ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದ್ದು ಕುತೂಹಲ ಮೂಡಿಸಿದೆ. ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ತನ್ನ ಮೇಲೆ ಸಾಕಷ್ಟು ವಿಶ್ವಾವಿಟ್ಟುಕೊಂಡಿದ್ದು ಹೆಚ್ಚಿನ ಅವಕಾಶಗಳನ್ನು ನೀಡುತ್ತಿದ್ದಾರೆ. ಇದು ತನ್ನ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದಿದ್ದಾರೆ ಸ್ಯಾಮ್ ಕರನ್.

IND vs PAK: ಸಚಿನ್ ಮಾತ್ರವಲ್ಲ, ಕೋಚ್ ದ್ರಾವಿಡ್ ದಾಖಲೆಯನ್ನೂ ಪುಡಿಪುಡಿ ಮಾಡಿದ ವಿರಾಟ್ ಕೊಹ್ಲಿIND vs PAK: ಸಚಿನ್ ಮಾತ್ರವಲ್ಲ, ಕೋಚ್ ದ್ರಾವಿಡ್ ದಾಖಲೆಯನ್ನೂ ಪುಡಿಪುಡಿ ಮಾಡಿದ ವಿರಾಟ್ ಕೊಹ್ಲಿ

ಇನ್ನು ಐರ್ಲೆಂಡ್ ವಿರುದ್ಧದ ಪಂದ್ಯವನ್ನು ತಮ್ಮ ತಂಡ ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದಿದ್ದಾರೆ ಸ್ಯಾಮ್ ಕರನ್. "ಐರ್ಲೆಂಡ್ ಕೆಲವು ಅದ್ಭುತ ಆಟಗಾರರನ್ನು ಹೊಂದಿದೆ. ಕೌಂಟಿ ವ್ಯವಸ್ಥೆಯಲ್ಲಿ ನಾವು ಅವರ ವಿರುದ್ಧ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಅಲ್ಲಿ ಅವರ ಬಹಳಷ್ಟು ಆಟಗಾರರು ವಿವಿಧ ತಂಡಗಳ ಪರವಾಗಿ ಆಡುತ್ತಾರೆ. ಇದು ನಾವು ಇಲ್ಲಿ ಸ್ವಲ್ಪವೂ ಎಡವಬಾರದು ಯಾಕೆಂದರೆ ಈ ಮಾದರಿಯಲ್ಲಿ ಒಬ್ಬ ಆಟಗಾರ ಪಂದ್ಯವನ್ನು ಕಸಿದುಕೊಳ್ಳುವ ಅವಕಾಶವಿದೆ" ಎಂದು ಕರನ್ ಹೇಳಿದ್ದಾರೆ.

ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡಕ್ಕೆ ಸಾಕಷ್ಟು ಗಾಯದ ಸಮಸ್ಯೆಗಳು ಕಾಡುತ್ತಿದ್ದರೂ ತಂಡ ಬಲಿಷ್ಠವಾಗಿಯೇ ಕಾಣಿಸುತ್ತಿದೆ. ಹೀಗಾಗಿ ಈ ಬಾರಿಯ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಇಂಗ್ಲೆಂಡ್ ಕೂಡ ಒಂದಾಗಿದೆ. ಮತ್ತೊಂದೆಡೆ ಐರ್ಲೆಂಡ್ ತಂಡ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದರೂ ತಂಡದಲ್ಲಿ ಹಲವು ಸ್ಪೋಟಕ ಆಟಗಾರರು ಇದ್ದಾರೆ ಎಂಬುದು ಗಮನಾರ್ಹ ಸಂಗತಿ. ಐರ್ಲೆಂಡ್ ಅನೇಕ ಸಂದರ್ಭಗಳಲ್ಲಿ ದೊಡ್ಡ ತಂಡಗಳಿಗೆ ಆಘಾತ ನೀಡಿರುವ ಉದಾಹರಣೆಯಿದ್ದು ಮತ್ತೊಂದು ಅಂಥಾದ್ದೇ ಪ್ರದರ್ಶನದ ನಿರೀಕ್ಷೆಯಲ್ಲಿದೆ.

ಐರ್ಲೆಂಡ್ ಸಂಭಾವ್ಯ ಆಡುವ ಬಳಗ: ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಸಿಮಿ ಸಿಂಗ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್

ಇಂಗ್ಲೆಂಡ್ ಸಂಭಾವ್ಯ ಆಡುವ ಬಳಗ: ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್

Story first published: Wednesday, October 26, 2022, 5:15 [IST]
Other articles published on Oct 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X