ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ vs ಇಂಗ್ಲೆಂಡ್: ಕ್ರೀಸ್ ಬಿಟ್ಟ ಜೋಸ್ ಬಟ್ಲರ್‌ಗೆ ಮಿಚೆಲ್ ಸ್ಟಾರ್ಕ್ ಎಚ್ಚರಿಕೆ

Australia vs England 3rd t20: Australian pacer Mitchell Starc warns England skipper Jos Buttler

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯ ಕ್ಯಾನ್‌ಬೆರಾದಲ್ಲಿ ನಡೆದಿದೆ. ಈ ಪಂದ್ಯಕ್ಕೆ ಮಳೆ ಸತತವಾಗಿ ಅಡ್ಡಿಯುಂಟು ಮಾಡಿದ ಪರಣಾಮವಾಗಿ ತಲಾ 12 ಓವರ್‌ಗಳ ಪಂದ್ಯ ನಡೆದಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 12 ಓವರ್‌ಗಳಲ್ಲಿ 112 ರನ್‌ಗಳಿಸಿತು. ಡಕ್ವರ್ತ್ ಲೂಯೀಸ್ ನಿಯಮದ ಪ್ರಕಾರ ಆಸ್ಟ್ರೇಲಿಯಾಗೆ 12 ಓವರ್‌ಗಳಲ್ಲಿ 130 ರನ್‌ಗಳ ಗುರಿ ನಿಗದಿಪಡಿಸಲಾಗಿದೆ.

ಈ ಪಂದ್ಯದ ಆರಂಭದ ಹಂತದಲ್ಲಿಯೇ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್‌ಗೆ ಆಸಿಸ್ ವೇಗಿ ಮಿಚೆಲ್ ಸ್ಟಾರ್ಕ್ ಎಚ್ಚರಿಕೆ ನೀಡಿದರು. ಬೌಲಿಂಗ್ ಪೂರ್ಣಗೊಳಿಸುವ ಮುನ್ನವೇ ಕ್ರೀಸ್ ಬಿಟ್ಟು ಮುನ್ನಡೆದಿರುವುದನ್ನು ನೋಡಿದ ಮಿಚೆಲ್ ಸ್ಟಾರ್ಕ್ ಇಂಗ್ಲೆಂಡ್ ನಾಯಕನಿಗೆ ಎಚ್ಚರಿಸಿದರು. ಈ ಸಂದರ್ಭದಲ್ಲಿ ಇಬ್ಬರು ಆಟಗಾರರ ಮಧ್ಯೆ ಸಣ್ಣ ಮಾತಿನ ಚಕಮಕಿಯೂ ನಡೆದಿದೆ. ಸ್ಟಾರ್ಕ್ ಆರೋಪವನ್ನು ತಳ್ಳುಹಾಕಿದ ಬಟ್ಲರ್ ತಾನು ಕ್ರೀಸ್ ಬಿಟ್ಟು ಮುಂದೆ ನಡೆದೆ ಅನಿಸುತ್ತಿಲ್ಲ ಎಂದು ನಿರಾಕರಿಸಿದರು.

T20 World Cup: ಈ ಐವರು ಯುವ ಆಟಗಾರರ ಪ್ರದರ್ಶನದ ಮೇಲೆ ಹೆಚ್ಚಿದ ನಿರೀಕ್ಷೆT20 World Cup: ಈ ಐವರು ಯುವ ಆಟಗಾರರ ಪ್ರದರ್ಶನದ ಮೇಲೆ ಹೆಚ್ಚಿದ ನಿರೀಕ್ಷೆ

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಬೌಲಿಂಗ್‌ನಲ್ಲಿಒ ಹೆಳಿಕೊಳ್ಳುವಂತಾ ಯಶಸ್ವು ಸಾಧಿಸಲು ಸಾಧ್ಯವಾಗಿಲ್ಲ. ಆರಂಬಿಕ ಆಟಗಾರ ಹೇಲ್ಸ್ ವಿಕೆಟ್ ಶೀಘ್ರದಲ್ಲಿ ಕಳೆದುಕೊಂಡರೂ ನಾಯಕ ಜೋಸ್ ಬಟ್ಲರ್ ಅಜೇಯ ಪ್ರದರ್ಶನ ನೀಡಿದರು. 41 ಎಸೆತಗಳಲ್ಲಿ 65 ರನ್‌ಗಳನ್ನು ಗಳಿಸಿದ ಬಟ್ಲರ್ ಆಸ್ಟ್ರೇಲಿಯಾಗೆ ದೊಡ್ಡ ಗುರಿ ನಿಗದಿಪಡಿಸಲು ಕಾರಣವಾದರು. ಇನ್ನು ಈ ಮೊತ್ತವನ್ನ ಬೆನ್ನಟ್ಟಿರುವ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಘಾತ ಉಂಟಾಗಿದೆ.

ಆಸ್ಟ್ರೇಲಿಯಾ ನೆಲದಲ್ಲಿಯೇ ಈ ಸರಣಿ ನಡೆಯುತ್ತಿದ್ದರೂ ಮೊದಲ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ಗ ಶರಣಾಗಿದೆ. ಹೀಗಾಗಿ ಈ ಸರಣಿಯನ್ನು ಇಂಗ್ಲೆಂಡ್ ತಂಡಕ್ಕೆ ಈಗಾಗಲೇ ಒಪ್ಪಿಸಿರುವ ಆಸ್ಟ್ರೇಲಿಯಾ ಸರಣಿಯಲ್ಲಿ ವೈಟ್‌ವಾಶ್ ಮುಖಭಂಗದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ವಿಶ್ವಕಪ್‌ನ ಹೊಸ್ತಿಲಲ್ಲಿ ತವರಿನಲ್ಲಿ ನಡೆದ ಸರಣಿಯಲ್ಲಿಯೇ ಹಿನ್ನಡೆ ಅನುಭವಿಸಿರುವುದು ಆಸಿಸ್ ಪಾಲಿಗೆ ಬಿಸಿ ತುಪ್ಪವಾಗಿದ್ದು ಅಂತಿಮ ಪಂದ್ಯವನ್ನಾದರೂ ಗೆಲ್ಲುವ ಒತ್ತಡದಲ್ಲಿದೆ.

ವೆಸ್ಟ್ ಇಂಡೀಸ್ ಪಾಲಿಗೆ ಆಸ್ಟ್ರೇಲಿಯಾದಲ್ಲಿ ವಿಶೇಷವಾಗಿದ್ದು ನಡೆಯಲಿದೆ ಎಂದ ಮಾಜಿ ನಾಯಕವೆಸ್ಟ್ ಇಂಡೀಸ್ ಪಾಲಿಗೆ ಆಸ್ಟ್ರೇಲಿಯಾದಲ್ಲಿ ವಿಶೇಷವಾಗಿದ್ದು ನಡೆಯಲಿದೆ ಎಂದ ಮಾಜಿ ನಾಯಕ

ಆಸ್ಟ್ರೇಲಿಯಾ: ಆರನ್ ಫಿಂಚ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್ವುಡ್
ಬೆಂಚ್: ಡೇವಿಡ್ ವಾರ್ನರ್, ಕೇನ್ ರಿಚರ್ಡ್ಸನ್, ಸೀನ್ ಅಬಾಟ್, ಆಷ್ಟನ್ ಅಗರ್, ಜೋಶ್ ಇಂಗ್ಲಿಸ್, ಕ್ಯಾಮರೂನ್ ಗ್ರೀನ್, ಡೇನಿಯಲ್ ಸ್ಯಾಮ್ಸ್

ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ & ವಿಕಟ್ ಕೀಪರ್), ಅಲೆಕ್ಸ್ ಹೇಲ್ಸ್, ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್,
ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಆದಿಲ್ ರಶೀದ್, ರೀಸ್ ಟೋಪ್ಲಿ
ಬೆಂಚ್: ಸ್ಯಾಮ್ ಕರ್ರಾನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್ಸ್ಟೋನ್, ಫಿಲಿಪ್ ಸಾಲ್ಟ್

Story first published: Friday, October 14, 2022, 16:47 [IST]
Other articles published on Oct 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X