ಟಿ20 ವಿಶ್ವಕಪ್‌: ಇದು ನ್ಯಾಯ ಅಲ್ಲ; ಸರಣಿ ಶ್ರೇಷ್ಠ ಪ್ರಶಸ್ತಿ ಬಗ್ಗೆ ಅಪಸ್ವರವೆತ್ತಿದ ಶೋಯೆಬ್ ಅಖ್ತರ್

ಟಿ20 ವಿಶ್ವಕಪ್‌ ಅಂತ್ಯವಾಗಿದ್ದು ಆಸ್ಟ್ರೇಲಿಯಾ ತಂಡ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ ರೋಚಕ ಸೆಣೆಸಾಟದಲ್ಲಿ ಆಸ್ಟ್ರೇಲಿಯಾ ಭರ್ಜರಿ 8 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿದೆ. ಟೂರ್ನಿಯುದ್ದಕ್ಕೂ ನೀಡಿದ ಅದ್ಭುತ ಪ್ರದರ್ಶನದ ಕಾರಣಕ್ಕೆ ಆಸ್ಟ್ರೇಲಿಯಾ ತಂಡದ ಆರಂಭೀಕ ಆಟಗಾರ ಡೇವಿಡ್ ವಾರ್ನರ್ ಸರಣಿ ಶ್ರೆಷ್ಠ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಆದರೆ ಈ ಪ್ರಶಸ್ತಿಯ ಬಗ್ಗೆ ಮಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಈಗ ಅಪಸ್ವರವೆಸತ್ತಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಬಾಬರ್ ಅಜಂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯಬೇಕಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಶೋಯೆಬ್ ಅಖ್ತರ್. ಇದೇ ಕಾರಣಕ್ಕಾಗಿ ಟ್ವಿಟ್ಟರ್‌ನಲ್ಲಿ ಅವರು ತಮ್ಮ ಅಸಮಾಧಾನವನ್ನು ಹೇಳಿಕೊಂಡಿದ್ದಾರೆ. ಬಾಬರ್ ಅಜಂ ಈ ಪ್ರಶಸ್ತಿಗೆ ಭಾಜನವಾಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ತಾನಿದ್ದೆ ಎಂದಿದ್ದಾರೆ ಅಖ್ತರ್. ಬಾಬರ್ ಅಜಂ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಆದರೆ ಡೇವಿಡ್ ವಾರ್ನರ್‌ಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಿದ್ದು ನ್ಯಾಯಯುತವಾದ ನಡೆಯಲ್ಲ ಎಂದಿದ್ದಾರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ.

ದ್ರಾವಿಡ್ ಕೊಡೋ ಟಾರ್ಚರ್ ನ್ನು ಗಂಗೂಲಿ ಬಳಿ ಹೇಳಿಕೊಂಡ ದ್ರಾವಿಡ್ ಮಗ | Oneindia Kannada

ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಧೋನಿ ಫೋಟೋ ಹಾಕಿದ ಜಾನ್ ಸೀನಾ; ನ.14ರ ಕ್ರಿಕೆಟ್ ಸುದ್ದಿಗಳುಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಧೋನಿ ಫೋಟೋ ಹಾಕಿದ ಜಾನ್ ಸೀನಾ; ನ.14ರ ಕ್ರಿಕೆಟ್ ಸುದ್ದಿಗಳು

"ನಾನು ನಿಜಕ್ಕೂ ಬಾಬರ್ ಅಜಂ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಭಾಜನವಾಗುವುದನ್ನು ಎದುರು ನೋಡುತ್ತಿದ್ದೆ. ಖಂಡಿತಾ ಇದು ನ್ಯಾಯಯುವಲ್ಲದ ನಿರ್ಧಾರ" ಎಂದು ಟ್ವಿಟ್ಟರ್‌ನಲ್ಲಿ ಶೋಯೆಬ್ ಅಖ್ತರ್ ಹೇಳಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಬಾಬರ್ ಅಜಂ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಬ್ಯಾಟರ್ ಆಗಿ ಹಾಗೂ ನಾಯಕನಾಗಿ ನೀಡಿದ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ಪಾಕಿಸ್ತಾನ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿತ್ತು. ಆಡಿದ 6 ಒಪಂದ್ಯಗಳಲ್ಲಿ ಬಾಬರ್ ಅಜಂ 303 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದ್ದಾರೆ. ಈ ಆರು ಪಂದ್ಯಗಳ ಪೈಕಿ ನಾಲ್ಕು ಅರ್ಧ ಶತಕಗಳನ್ನು ಬಾಬರ್ ಅಜಂ ಬಾರಿಸಿದ್ದಾರೆ ಎಂಬುದು ಗಮನಾರ್ಹ ಸಂಗತಿ.

ವಿಶ್ವಕಪ್‌ಗೆ ಮುನ್ನ ಸತತ 5 ಟಿ20 ಸರಣಿ ಸೋಲು: ಆಸ್ಟ್ರೇಲಿಯಾದ ವಿಶ್ವಕಪ್ ಗೆಲುವಿನ ರೋಚಕ ಹಾದಿವಿಶ್ವಕಪ್‌ಗೆ ಮುನ್ನ ಸತತ 5 ಟಿ20 ಸರಣಿ ಸೋಲು: ಆಸ್ಟ್ರೇಲಿಯಾದ ವಿಶ್ವಕಪ್ ಗೆಲುವಿನ ರೋಚಕ ಹಾದಿ

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಪಾಲಾಗಿದೆ. ಆಸ್ಟ್ರೇಲಿಯಾದ ಈ ಆರಂಭಿಕ ಆಟಗಾರ ಟೂರ್ನಿಯ್ಲಲಿ ಎರಡನೇ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿದ್ದಾರೆ. ಆಡಿದ 7 ಪಂದ್ಯಗಳಲ್ಲಿ ವಾರ್ನರ್ ಮೂರು ಅರ್ಧ ಶತಕಗಳ ಸಹಿತ 289 ರನ್‌ಗಳಿಸಿ ಮಿಂಚಿದ್ದಾರೆ.

ದ್ರಾವಿಡ್ ಮೇಲೆ ಬಿಸಿಸಿಐ ಅಧ್ಯಕ್ಷರಲ್ಲಿ ದೂರು ನೀಡಿದ್ರಂತೆ ಆ ವ್ಯಕ್ತಿ: ಬಹಿರಂಗಡಿಸಿದ ಸೌರವ್ ಗಂಗೂಲಿದ್ರಾವಿಡ್ ಮೇಲೆ ಬಿಸಿಸಿಐ ಅಧ್ಯಕ್ಷರಲ್ಲಿ ದೂರು ನೀಡಿದ್ರಂತೆ ಆ ವ್ಯಕ್ತಿ: ಬಹಿರಂಗಡಿಸಿದ ಸೌರವ್ ಗಂಗೂಲಿ

ಇನ್ನು ಫೈನಲ್‌ನಲ್ಲಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದು ಟಾಸ್ ಸೋತ ನ್ಯೂಜಿಲೆಂಡ್ ತಂಡ ಮೊದಲಿಗೆ ಬ್ಯಾಟಿಂಗ್ ಮಾಡುವ ಸವಾಲು ಸ್ವೀಕರಿಸಿತು. ನಾಯಕ ಕೇನ್ ವಿಲಿಯಮ್ಸನ್ ಅದ್ಭುತ ಪ್ರದರ್ಶನದಿಂದಾಗಿ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 172 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾಗೆ ಡೇವಿಡ್ ವಾರ್ನರ್ ಹಾಗೂ ಶಾನ್ ಮಾರ್ಶ್ ಅದ್ಭುತವಾದ ಜೊತೆಯಾಟ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಈ ಇಬ್ಬರು ಆಟಗಾರರು ಕೂಡ ಅರ್ಧ ಶತಕದ ಕೊಡುಗೆ ನೀಡುವ ಮೂಲಕ ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಲು ಕಾರಣವಾದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, November 15, 2021, 9:22 [IST]
Other articles published on Nov 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X