ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರವೀಂದ್ರ ಜಡೇಜಾಗೆ ಸಮರ್ಥ ಬದಲಿ ಆಟಗಾರ ಸಿಕ್ಕಾಯ್ತು: ಭರವಸೆ ಹೆಚ್ಚಿಸಿದೆ ಯುಜುವೇಂದ್ರ ಚಾಹಲ್ ಮಾತು

T20 world cup: Yuzvendra Chahal interesting statement on Ravindra Jadeja’s replacement

ಟಿ20 ವಿಶ್ವಕಪ್‌ ಆರಂಭಕ್ಕೆ ಇನ್ನು ಕೆಲವೇ ದಿನಗಳು ಮಾತ್ರವೇ ಬಾಕಿಯಿದೆ. ಟೀಮ್ ಇಂಡಿಯಾ ಈಗಾಗಲೇ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿ ಅಭ್ಯಾಸವನ್ನು ಆರಂಭಿಸಿದ್ದು ಉತ್ತಮ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ವೆಸ್ಟರ್ನ್ ಆಸ್ಟ್ರೇಲಿಯಾ XI ವಿರುದ್ಧ ಭಾರತ ಅಭ್ಯಾಸ ಪಂದ್ಯವನ್ನು ಆಡಿದ್ದು ಇದರಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ವಿಶ್ವಕಪ್ ಪಂದ್ಯಗಳಿಗೆ ಆಡುವ ಬಳಗದವನ್ನು ಅಂತಿಮಗೊಳಿಸುವ ಪ್ರಯತ್ನದಲ್ಲಿದೆ ಭಾರತ ತಂಡ.

ಇನ್ನು ಈ ಬಾರಿಯ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಗಾಯದ ಸಮಸ್ಯೆಗಳು ಕಾಡುತ್ತಿದೆ. ಅದರಲ್ಲೂ ಇಬ್ಬರು ಪ್ರಮುಖ ಆಟಗಾರರಾದ ರವೀಂದ್ರ ಜಡೇಜಾ ಹಾಗೂ ವೇಗಿ ಜಸ್ಪ್ರೀತ್ ಬೂಮ್ರಾ ಗಾಯದ ಕಾರಣದಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ವಿಶ್ವಕಪ್‌ಗೆ ಇದೀಗ ಕೆಲವೇ ದಿನಗಳಿರುವಾಗ ತಂಡದ ಅನುಭವಿ ಆಟಗಾರ ಯುಜುವೇಂದ್ರ ಚಾಹಲ್ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತ ತಂಡ ರವೀಂದ್ರ ಜಡೇಜಾಗೆ ಸಮರ್ಥವಾದ ಬದಲಿ ಆಟಗಾರನನ್ನು ಕಂಡುಕೊಂಡಿದೆ ಎಂದಿದ್ದಾರೆ.

ಅಂತಿಮ ಪಂದ್ಯ ಗೆದ್ದು ಸರಣಿ ವಶಕ್ಕೆ ಪಡೆಯುತ್ತಾ ಧವನ್ ನೇತೃತ್ವದ ಟೀಮ್ ಇಂಡಿಯಾಅಂತಿಮ ಪಂದ್ಯ ಗೆದ್ದು ಸರಣಿ ವಶಕ್ಕೆ ಪಡೆಯುತ್ತಾ ಧವನ್ ನೇತೃತ್ವದ ಟೀಮ್ ಇಂಡಿಯಾ

ಏಷ್ಯಾ ಕಪ್ ಟೂರ್ನಿ ವೇಳೆ ಗಾಯಗೊಂಡ ಜಡೇಜಾ

ಏಷ್ಯಾ ಕಪ್ ಟೂರ್ನಿ ವೇಳೆ ಗಾಯಗೊಂಡ ಜಡೇಜಾ

ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ರವೀಂದ್ರ ಜಡೇಜಾ ಕಳೆದ ಏಷ್ಯಾ ಕಪ್ ಟೂರ್ನಿಯಲ್ಲಿ ಆರಂಭಿಕ ಪಂದ್ಯಗಳಲ್ಲಿ ಭಾರತದ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು. ಆದರೆ ನಂತರ ಗಾಯಗೊಂಡ ಕಾರಣ ಟೂರ್ನಿಯ ಉಳಿದ ಪಂದ್ಯಗಳಿಗೆ ಅಲಭ್ಯವಾಗಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ಚೇತರಿಕೆಗೆ ಸುದೀರ್ಘ ಕಾಲದ ವಿಶ್ರಾಂತಿಯ ಅಗತ್ಯವಿರುವ ಕಾರಣ ವಿಶ್ವಕಪ್ ತಂಡದಿಂದಲೂ ಹೊರಬಿದ್ದಿದ್ದಾರೆ.

ಜಡೇಜಾಗೆ ಸಮರ್ಥ ಆಟಗಾರನಿದ್ದಾರೆ

ಜಡೇಜಾಗೆ ಸಮರ್ಥ ಆಟಗಾರನಿದ್ದಾರೆ

ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅನುಭವಿ ರವೀಂದ್ರ ಜಡೇಜಾಗೆ ಬದಲಿ ಆಟಗಾರನ ಬಗ್ಗೆ ಚಾಹಲ್ ಮಾತನಾಡಿದ್ದಾರೆ. 32ರ ಹರೆಯದ ಅನುಭವಿ ಆಟಗಾರನಿಗೆ ಸಮರ್ಥವಾದ ಬದಲಿ ಆಟಗಾರನನ್ನು ಭಾರತ ತಂಡ ಕಂಡುಕೊಂಡಿದೆ ಎಂದಿದ್ದಾರೆ ಯುಜುವೇಂದ್ರ ಚಾಹಲ್. ರವೀಂದ್ರ ಜಡೇಜಾ ವಿಶ್ವದರ್ಜೆಯ ಆಟಗಾರನಾಗಿದ್ದು ಆತನ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಒಬ್ಬ ಆಟಗಾರ ಆ ಸ್ಥಾನದಲ್ಲಿ ಅದ್ಭುತ ಪ್ರದರ್ಶನ ನೀಡುವ ವಿಶ್ವಾಸ ಮೂಡಿಸಿದ್ದಾರೆ ಎಂದಿದ್ದಾರೆ ಚಾಹಲ್.

ಅಕ್ಷರ್ ಪಟೇಲ್ ಬಗ್ಗೆ ಚಾಹಲ್ ವಿಶ್ವಾಸ

ಅಕ್ಷರ್ ಪಟೇಲ್ ಬಗ್ಗೆ ಚಾಹಲ್ ವಿಶ್ವಾಸ

ರವೀಂದ್ರ ಜಡೇಜಾ ಸ್ಥಾನಕ್ಕೆ ಬದಲಿ ಆಟಗಾರನಾಗಿ ಅಕ್ಷರ್ ಪಟೇಲ್ ಸಮರ್ಥ ಆಟಗಾರ ಎಂದು ಯುಜುವೇಂದ್ರ ಚಾಹಲ್ ಹೇಳಿಕೊಂಡಿದ್ದಾರೆ. "ರವೀಂದ್ರ ಜಡೇಜಾ ವಿಶ್ವದರ್ಜೆಯ ಆಟಗಾರನಾಗಿದ್ದು ಅವರ ಸ್ಥಾನವನ್ನು ತುಂಬುವುದು ಸುಲಭವಲ್ಲ. ಆದರೆ ಅಕ್ಷರ್ ಪಟೇಲ್ ಅವರು ಈವರೆಗೆ ನೀಡಿರುವ ಪ್ರದರ್ಶನ ಅದ್ಭುತವಾಗಿದ್ದು ಸಮರ್ಥವಾದ ಬದಲಿ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ರವೀಂದ್ರ ಜಡೇಜಾ ಸ್ಥಾನವನ್ನು ಸಮರ್ಥವಾಗಿ ತುಂಬುವ ವಿಶ್ವಾಸ ಮೂಡಿಸಿದ್ದಾರೆ" ಎಂದು ಯುಜುವೇಂದ್ರ ಚಾಹಲ್ ಹೇಳಿಕೆ ನೀಡಿದ್ದಾರೆ.

ಟಿ20 ವಿಶ್ವಕಪ್‌ಗಾಗಿ ಭಾರತ ತಂಡ

ಟಿ20 ವಿಶ್ವಕಪ್‌ಗಾಗಿ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್. ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

Story first published: Tuesday, October 11, 2022, 13:42 [IST]
Other articles published on Oct 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X