ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಟ್ಟ ಮಾತು ಉಳಿಸಿಕೊಳ್ಳದ ವಿರಾಟ್ ಕೊಹ್ಲಿ: ಮತ್ತದೇ ಕೆಟ್ಟ ಹಳೇ ಚಾಳಿ

ಕಿವೀಸ್ ವಿರುದ್ದದ ಎರಡನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಏಳು ವಿಕೆಟ್ ಗಳಿಂದ ಸೋಲುವ ಮೂಲಕ, ನ್ಯೂಜಿಲ್ಯಾಂಡ್ ಪ್ರವಾಸ ಮುಗಿಸಿದೆ. ಏಕದಿನ ಮತ್ತು ಟೆಸ್ಟ್ ಪಂದ್ಯದಲ್ಲಿ ಕ್ಲೀನ್ ಸ್ವೀಪ್ ಮುಖಭಂಗದ ಮೂಲಕ ಸ್ವದೇಶಕ್ಕೆ ವಾಪಸ್ ಆಗಬೇಕಿದೆ.

"ಸೋಲಿಗೆ ನೆಪ ಹೇಳುವುದಿಲ್ಲ, ತಪ್ಪಿನಿಂದ ಪಾಠವನ್ನು ಕಲಿಯುತ್ತೇವೆ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. "ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳಿಗೆ ಸಾಕಾಗುವಷ್ಟು ರನ್ ಪೇರಿಸಿರಲಿಲ್ಲ. ಈ ಕಾರಣದಿಂದಾಗಿ ಬೌಲರ್‌ಗಳಿಗೆ ಟೀಮ್ ಇಂಡಿಯಾ ಸೋಲುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ" ಎನ್ನುವ ಮಾತನ್ನು ಕೊಹ್ಲಿ ಹೇಳಿದ್ದಾರೆ.

ಇದುವರೆಗಿನ ತನ್ನ ಕ್ರಿಕೆಟ್ ವೃತ್ತಿ ಜೀವನದ ಅತ್ಯಂತ ಕಳಪೆ ಫಾರಂನಲ್ಲಿದ್ದಾರೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ. ಕಳೆದ ಹನ್ನೆರಡು ಇನ್ನಿಂಗ್ಸ್ ನಲ್ಲಿ (ಐದು ಟಿ20, ಮೂರು ಏಕದಿನ ಮತ್ತು ಎರಡು ಟೆಸ್ಟಿನ ನಾಲ್ಕು ಇನ್ನಿಂಗ್ಸ್) ಬರೀ 232 ರನ್ ಕೊಹ್ಲಿಯಿಂದ ಬಂದಿದ್ದು. ಅಂದರೆ, ಸರಾಸರಿ ಕೇವಲ 19.3.

ಎರಡನೇ ಟೆಸ್ಟ್‌ನಲ್ಲೂ ಟೀಮ್ ಇಂಡಿಯಾಗೆ ಸೋಲು: ಮತ್ತೆ ಕ್ಲೀನ್‌ಸ್ವೀಪ್ ಮುಖಭಂಗ ಎರಡನೇ ಟೆಸ್ಟ್‌ನಲ್ಲೂ ಟೀಮ್ ಇಂಡಿಯಾಗೆ ಸೋಲು: ಮತ್ತೆ ಕ್ಲೀನ್‌ಸ್ವೀಪ್ ಮುಖಭಂಗ

ಬ್ಯಾಟಿಂಗ್ ವೈಫಲ್ಯ, ನಾಯಕತ್ವದ ಹೊಣೆ ನಿಭಾಯಿಸುವುದರಲ್ಲೂ ವಿಫಲ, ಇದರ ಜೊತೆಗೆ, ಮೈದಾನದಲ್ಲಿ ಕೊಹ್ಲಿ ನಡೆದುಕೊಂಡ ರೀತಿ ವ್ಯಾಪಕ ಟೀಕೆಗೆ ಒಳಗಾಗಿದೆ. ಎರಡನೇ ದಿನದ ಆಟದ ವೇಳೆ, ಕೊಹ್ಲಿ ಅತಿಯಾಗಿ ವರ್ತಿಸಿದ್ದಾರೆ.

ತಾಳ್ಮೆಯ ಪ್ರತಿರೂಪದಂತಿರುವ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್

ತಾಳ್ಮೆಯ ಪ್ರತಿರೂಪದಂತಿರುವ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್

ಸದ್ಯದ ವಿಶ್ವ ಕ್ರಿಕೆಟ್ ನ ನಾಯಕರ ಪೈಕಿ ತಾಳ್ಮೆಯ ಪ್ರತಿರೂಪದಂತಿರುವ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಅನಾವಶ್ಯಕವಾಗಿ ಕೊಹ್ಲಿ ಕೆಣಕಿ, ಸಾಮಾಜಿಕ ತಾಣದಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದಾರೆ. ಎರಡನೇ ದಿನದ ಆಟದಲ್ಲಿ ವಿಲಿಯಮ್ಸನ್, ಬುಮ್ರಾಗೆ ವಿಕೆಟ್ ಒಪ್ಪಿಸಿ, ಪೆವಲಿಯನ್ ಕಡೆಗೆ ನಡೆದು ಹೋಗುತ್ತಿದ್ದಾಗ ಕೊಹ್ಲಿ ಕೆಟ್ಟದಾಗಿ ವರ್ತಿಸಿದ್ದರು.

ವಿಲಿಯಮ್ಸನ್ ಜೊತೆಗಿನ ಕೊಹ್ಲಿ ಸ್ನೇಹ

ವಿಲಿಯಮ್ಸನ್ ಜೊತೆಗಿನ ಕೊಹ್ಲಿ ಸ್ನೇಹ

ಆದರೆ, ಇದಕ್ಕೆ ಯಾವುದೇ ವಿರೋಧ ತೋರದ ವಿಲಿಯಮ್ಸನ್ ಎಂದಿನಂತೆ, ಮೌನದಿಂದಲೇ ಪೆವಲಿಯನ್ ಅತ್ತ ತೆರಳಿದರು. ವಿಲಿಯಮ್ಸನ್ ಜೊತೆಗಿನ ಸ್ನೇಹವನ್ನು ಹಲವು ರೀತಿಯಲ್ಲಿ ಈ ಹಿಂದೆ ಕೊಹ್ಲಿ ಪ್ರದರ್ಶಿಸಿದ್ದರು. ಆದರೆ, ಕ್ರೈಸ್ಟ್ ಚರ್ಚ್ ಮೈದಾನದಲ್ಲಿ ಕೊಹ್ಲಿ ವರ್ತನೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇದೊಂದೇ ಅಲ್ಲಾ..

ಅದ್ಯಾರ ಕಣ್ ಬಿತ್ತೋ ಏನೋ? ವಿರಾಟ್ ಕೊಹ್ಲಿಗೆ ಏನಾಗಿದೆ, ಅವರ ಬ್ಯಾಟಿಗೆ ಏನಾಗಿದೆ?

ಪ್ರೇಕ್ಷಕರಿಗೆ ಬಾಯಿ ಮುಚ್ಚಿ ಕೂತುಕೊಳ್ಳುವಂತೆ ಕೈಸನ್ನೆ

ಇದಲ್ಲದೇ ಕಿವೀಸ್ ಆರಂಭಿಕ ಆಟಗಾರ ಟಾಮ್ ಲೇಥಮ್, ಮೊಹಮ್ಮದ್ ಶಮಿ ಎಸೆತಕ್ಕೆ ಬೌಲ್ಡ್ ಆದಾಗಲೂ, ಕೊಹ್ಲಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಜೊತೆಗೆ, ಪ್ರೇಕ್ಷಕರಿಗೆ ಬಾಯಿ ಮುಚ್ಚಿ ಕೂತುಕೊಳ್ಳುವಂತೆ ಕೈಸನ್ನೆ ಮಾಡಿದ್ದರು. ಇದು, ವ್ಯಾಪಕ ಟೀಕೆಗೆ ಒಳಗಾಗಿದೆ.

ವಿಶ್ವಕಪ್ ಸೆಮಿಫೈನಲ್ ನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಪ್ರಯತ್ನಿಸುತ್ತೀರಾ

ವಿಶ್ವಕಪ್ ಸೆಮಿಫೈನಲ್ ನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಪ್ರಯತ್ನಿಸುತ್ತೀರಾ

ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಹೊರಡುವ ವೇಳೆ ಟೀಂ ಇಂಡಿಯಾದ ನಾಯಕ ಕೊಹ್ಲಿಯನ್ನು ಮಾಧ್ಯಮದವರು, ವಿಶ್ವಕಪ್ ಸೆಮಿಫೈನಲ್ ನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಪ್ರಯತ್ನಿಸುತ್ತೀರಾ ಎನ್ನುವ ಪ್ರಶ್ನೆಗೆ, "ಆ ರೀತಿಯ ಯಾವುದೇ ಯೋಚನೆ ನಮಗಿಲ್ಲ. ಉತ್ತಮ ಕ್ರಿಕೆಟ್ ಆಡುವುದಷ್ಟೇ ನಮ್ಮ ಗುರಿ" ಎಂದು ಕೊಹ್ಲಿ ಹೇಳಿದ್ದರು. ಈಗ, ಮೈದಾನದಲ್ಲಿ ಕೆಟ್ಟದಾಗಿ ವರ್ತಿಸುವ ಮೂಲಕ, ಕೊಹ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ.

Story first published: Monday, March 2, 2020, 13:50 [IST]
Other articles published on Mar 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X