ಟೀಮ್ ಇಂಡಿಯಾ ಮೇಲೆ ಗಂಭೀರ ಆರೋಪ ಹೊರಿಸಿದ ಸ್ಟೀವ್ ಹಾರ್ಮಿಸನ್!

ಲಂಡನ್‌: ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯಲಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ರದ್ದಾಗಿದೆ. ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಬೇಸರ ತೋರಿಕೊಂಡಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ವೇಗಿ ಸ್ಟೀವ್ ಹಾರ್ಮಿಸನ್ ಕೂಡ ಭಾರತಕ್ಕೆ ಐದನೇ ಟೆಸ್ಟ್‌ ಪಂದ್ಯ ಆಡಲು ಆಸಕ್ತಿ ಇರಲಿಲ್ಲ. ಟೀಮ್ ಇಂಡಿಯಾದ ಈ ನಡೆ ಟೆಸ್ಟ್ ಕ್ರಿಕೆಟ್ ಅಂತ್ಯದ ಆರಂಭವನ್ನು ಸೂಚಿಸುತ್ತದೆ ಎಂದಿದ್ದಾರೆ.

18 ವರ್ಷಗಳ ಬಳಿಕ ಪ್ರವಾಸ ಸರಣಿಗಾಗಿ ಪಾಕ್‌ಗೆ ಬಂದಿಳಿದ ನ್ಯೂಜಿಲೆಂಡ್!18 ವರ್ಷಗಳ ಬಳಿಕ ಪ್ರವಾಸ ಸರಣಿಗಾಗಿ ಪಾಕ್‌ಗೆ ಬಂದಿಳಿದ ನ್ಯೂಜಿಲೆಂಡ್!

ಐದನೇ ಮತ್ತು ಕೊನೇಯ ಟೆಸ್ಟ್‌ ಪಂದ್ಯದ ವೇಳೆ ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಮತ್ತು ಇಬ್ಬರು ಫಿಸಿಯೋಗಳು ಕೋವಿಡ್-19 ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಟೀಮ್ ಇಂಡಿಯಾಕ್ಕೆ ಕೋಚ್‌ಗಳು ಮತ್ತು ಬೆಂಬಲ ಸಿಬ್ಬಂದಿಯೇ ಇಲ್ಲದ್ದರಿಂದ ಟೆಸ್ಟ್‌ ಆಡಲು ಭಾರತೀಯ ಕ್ರಿಕೆಟಿಗರು ಹಿಂದೇಟು ಹಾಕಿದ್ದರು.

ಐದನೇ ಟೆಸ್ಟ್‌ ಪಂದ್ಯ ಆಡದಿರಲು ಇಂಗ್ಲೆಂಡ್ ಕೊಡುವ ಕಾರಣ
ಟೀಮ್ ಇಂಡಿಯಾದ ಕೋಚಿಂಗ್ ಬಳಗ ಮತ್ತು ಬೆಂಬಲ ಸಿಬ್ಬಂದಿಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಕಾಣಸಿಕೊಂಡಿದ್ದರಿಂದ ಐದನೇ ಟೆಸ್ಟ್‌ ಪಂದ್ಯ ಆಡದಿರಲು ಭಾರತೀಯ ಕ್ರಿಕೆಟ್‌ ಆಟಗಾರರು ನಿರ್ಧರಿಸಿದ್ದರು. ಆದರೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮತ್ತು ಅಲ್ಲಿನ ಆಟಗಾರರು ಬೇರೆನೇ ಕಾರಣ ನೀಡುತ್ತಿದ್ದಾರೆ. ಭಾರತೀಯ ಆಟಗಾರರಿಗೆ ಕೊನೇಯ ಟೆಸ್ಟ್ ಆಡಲು ಆಸಕ್ತಿ ಇರಲಿಲ್ಲ. ಯಾಕೆಂದರೆ ಅವರಿಗೆ ಟೆಸ್ಟ್ ಕ್ರಿಕೆಟ್‌ನಿಂದ ಐಪಿಎಲ್‌ನಲ್ಲಿ ಆಡೋದೇ ಮುಖ್ಯವಾಗಿತ್ತು. ಐಪಿಎಲ್‌ ಶುರುವಾಗುತ್ತದೆ ಎನ್ನುವ ಕಾರಣಕ್ಕೆ ಕೊನೇ ಟೆಸ್ಟ್‌ ಪಂದ್ಯ ಆಡದೆ ನಮಗೆ ಕೋಟ್ಯಾಂತರ ನಷ್ಟ ಮಾಡಿ, ಇಲ್ಲಿಂದ ಹೊರಟಿದ್ದಾರೆ. ಭಾರತೀಯರು ಐಪಿಎಲ್ ಕಾರಣದಿಂದಲೇ ಕೊನೇಯ ಟೆಸ್ಟ್‌ ಪಂದ್ಯ ಆಡಲಿಲ್ಲ ಎಂದು ಸ್ಟೀವ್ ಹಾರ್ಮಿಸನ್ ಹೇಳಿದ್ದಾರೆ.

ಮ್ಯಾಂಚೆಸ್ಟರ್ ಟೆಸ್ಟ್ ರದ್ದಾದ ಕೋಪವನ್ನು ಐಪಿಎಲ್ ಮೇಲೆ ಹಾಕಿದ ಸ್ಟಾರ್ ಆಟಗಾರ!ಮ್ಯಾಂಚೆಸ್ಟರ್ ಟೆಸ್ಟ್ ರದ್ದಾದ ಕೋಪವನ್ನು ಐಪಿಎಲ್ ಮೇಲೆ ಹಾಕಿದ ಸ್ಟಾರ್ ಆಟಗಾರ!

ಭಾರತದ ಕಾರಣ ಒಪ್ಪಲು ಸಾಧ್ಯವಿಲ್ಲ
ಟಾಕ್ ಸ್ಪೋರ್ಟ್ ಜೊತೆ ಮಾತನಾಡಿದ ಹಾರ್ಮಿಸನ್, "ಕೋಚ್‌ಗಳು ಇರಲಿಲ್ಲ, ಬೆಂಬಲ ಸಿಬ್ಬಂದಿ ಇರಲಿಲ್ಲ ಎನ್ನುವ ಭಾರತೀಯರ ಕಾರಣ ನಿಜಕ್ಕೂ ಅಸಂಬದ್ಧ. ನಿಜಕ್ಕೂ ಅವರ ಮಾತು ಒಪ್ಪಲು ಸಾಧ್ಯವಿಲ್ಲ. ಇದನ್ನು ನೋಡಿ ನನ್ನ ಮನಸ್ಸಿನಲ್ಲಿ ಏನು ಯೋಚನೆ ಬರುತ್ತಿದೆಯೆಂದರೆ ಇಂಥ ನಡೆ ಟೆಸ್ಟ್‌ ಕ್ರಿಕೆಟ್‌ನ ಅಂತ್ಯ ಶುರುವಾಗುವುದನ್ನು ಸೂಚಿಸುತ್ತದೆ. ಇಲ್ಲಿ ಟೆಸ್ಟ್‌ಗಿಂತ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಭಾರತ ನೀಡಿದ ಕಾರಣ ಒಪ್ಪಿಕೊಳ್ಳಲು ನಾನು ಎಷ್ಟು ಪ್ರಯತ್ನಿಸಿದರೂ ನನ್ನಿಂದ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಐದನೇ ಟೆಸ್ಟ್‌ ಮುಗಿದ ಬಳಿಕ ಐಪಿಎಲ್ ಇನ್ನು ಐದು ದಿನಗಳಲ್ಲಿ ಆರಂಭವಾಗುವುದರಲ್ಲಿತ್ತು. ಹೀಗಾಗಿ ಭಾರತೀಯರು ಟೆಸ್ಟ್‌ ಬದಿಗಿರಿಸಿ ಐಪಿಎಲ್‌ ಆರಿಸಿದರು," ಎಂದು ಹಾರ್ಮಿಸನ್ ಬೇಸರ ತೋರಿಕೊಂಡಿದ್ದಾರೆ.

ಹಾರ್ಮಿಸನ್ ಹೇಳುತ್ತಿರುವ ಕಾರಣ ನಿಜವೆ!
ಇಂಗ್ಲೆಂಡ್ ಮಾಜಿ ವೇಗಿ ಹಾರ್ಮಿಸನ್ ಅವರು ಟೀಮ್ ಇಂಡಿಯಾವನ್ನು ದೂರಿ ಮಾತನಾಡುತ್ತಿರುವುದು ಒಂದರ್ಥದಲ್ಲಿ ನಿಜವೆ. ಯಾಕೆಂದರೆ ಸೆಪ್ಟೆಂಬರ್‌ 10ರಂದು ಭಾರತ-ಇಂಗ್ಲೆಂಡ್ ಐದನೇ ಟೆಸ್ಟ್‌ ಪಂದ್ಯ ನಡೆದಿದ್ದರೆ, ಮುಗಿಯುವಾಗ ಸೆಪ್ಟೆಂಬರ್‌ 14 ಆಗುತ್ತಿತ್ತು. ಆಗ ಐಪಿಎಲ್ ಆರಂಭಕ್ಕೆ ಉಳಿಯುತ್ತಿದ್ದುದು ಕೇವಲ 5 ದಿನ. ಅದರಲ್ಲೂ ಸೆಪ್ಟೆಂಬರ್‌ 11ರಂದು ಐದನೇ ಟೆಸ್ಟ್ ಪಂದ್ಯ ಆರಂಭವಾಗುತ್ತದೆ ಎಂದುಕೊಂಡರೂ ಪಂದ್ಯ ಮುಗಿಯುತ್ತಿದ್ದುದು ಸೆಪ್ಟೆಂಬರ್‌ 15ರಂದು ಐಪಿಎಲ್ ಆರಂಭ ಸೆಪ್ಟೆಂಬರ್‌ 19ರಂದು. ಮಧ್ಯದಲ್ಲಿ ಬಿಡುವು ಸಿಗುತ್ತಿದ್ದುದು ಕೇವಲ 4 ದಿನ. ಇದರಲ್ಲಿ ಪ್ರಯಾಣ ಮತ್ತು ಆರು ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಕಾಲಾವಕಾಶ ಸಿಗುತ್ತಿರಲಿಲ್ಲ. ಇದೇ ಕಾರಣಕ್ಕೆ ಭಾರತೀಯ ಆಟಗಾರರು, ಕ್ರಿಕೆಟ್ ಬೋರ್ಡ್ ಐದನೇ ಟೆಸ್ಟ್ ಪಂದ್ಯ ಕಡೆಗಣಿಸಿ ಐಪಿಎಲ್ ಕಡೆ ವಾಲಿತು. ಅಂದರೆ ಹಾರ್ಮಿಸನ್ ಹೇಳುವಂತೆ ಭಾರತಕ್ಕೆ ಟೆಸ್ಟ್‌ ಕ್ರಿಕೆಟ್‌ನ ಪ್ರತಿಷ್ಠೆ ಉಳಿಸುವುದಕ್ಕಿಂತ ನಗದು ಶ್ರೀಮಂತ ಟೂರ್ನಿ ಐಪಿಎಲ್ ಹೆಚ್ಚೆಸಿದೆ ಎನ್ನೋದು ನಿಜವೆ ಅಲ್ಲವೆ?

For Quick Alerts
ALLOW NOTIFICATIONS
For Daily Alerts
Story first published: Saturday, September 11, 2021, 22:29 [IST]
Other articles published on Sep 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X