ಇಂಗ್ಲೆಂಡ್ ಬಳಸಿದ ಈ ಸೂತ್ರವನ್ನು ಭಾರತ ತಂಡ ಅಳವಡಿಸಿಕೊಳ್ಳಬೇಕು; ಅನಿಲ್ ಕುಂಬ್ಳೆ ಒತ್ತಾಯ

ನವೆಂಬರ್ 13ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ 2022ರ ಟಿ20 ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವು ಎರಡನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಿತು.

ಅದೇ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ 10 ವಿಕೆಟ್‌ಗಳ ಅಂತರದಿಂದ ಪರಾಭವಗೊಂಡ ಭಾರತ ತಂಡ ನಿರಾಸೆಯ ಮುಖ ಹೊತ್ತು ತವರಿಗೆ ಮರಳಿದೆ. ಇದರಿಂದ ದಶಕದಿಂದ ಕನಸು ಕಾಣುತ್ತಿರುವ ಐಸಿಸಿ ಟ್ರೋಫಿ ಭಾರತ ತಂಡಕ್ಕೆ ಮರೀಚಿಕೆಯಾಗಿದೆ.

ಟಿ20 ವಿಶ್ವಕಪ್ 2022: ಈ ಭಾರತೀಯನೊಂದಿಗೆ ಜೋಸ್ ಬಟ್ಲರ್‌ನನ್ನು ಹೋಲಿಕೆ ಮಾಡಿದ ವಾನ್!ಟಿ20 ವಿಶ್ವಕಪ್ 2022: ಈ ಭಾರತೀಯನೊಂದಿಗೆ ಜೋಸ್ ಬಟ್ಲರ್‌ನನ್ನು ಹೋಲಿಕೆ ಮಾಡಿದ ವಾನ್!

ಟಿ20 ವಿಶ್ವಕಪ್‌ನಲ್ಲಿ ಹೀನಾಯವಾಗಿ ಸೋತ ನಂತರ, ಭಾರತ ತಂಡದಲ್ಲಿ ಕೆಲವು ಬದಲಾವಣೆಗಳಾಬೇಕು ಎಂದು ಮಾಜಿ ಕ್ರಿಕೆಟಿಗರು ಒತ್ತಾಯಿಸುತ್ತಿದ್ದಾರೆ. ಇದೇ ವೇಳೆ ಭಾರತ ತಂಡದ ಮಾಜಿ ಮುಖ್ಯ ಕೋಚ್ ಮತ್ತು ಮಾಜಿ ನಾಯಕ ಅನಿಲ್ ಕುಂಬ್ಳೆ ಕೆಲವು ಸಲಹೆ ನೀಡಿದ್ದಾರೆ.

ರೆಡ್ ಬಾಲ್ ಮತ್ತು ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸುವುದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲಾ ತಂಡಗಳಿಗೆ ಮುಂದಿರುವ ದಾರಿ ಎಂದು ಭಾರತದ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡವೂ ಈ ವಿಧಾನವನ್ನು ಅಳವಡಿಸಿಕೊಳ್ಳಬೇಕು

ಭಾರತ ತಂಡವೂ ಈ ವಿಧಾನವನ್ನು ಅಳವಡಿಸಿಕೊಳ್ಳಬೇಕು

ಈ ಪ್ರಯೋಗದಲ್ಲಿ ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ಯಶಸ್ವಿಯಾಗಿದ್ದು, ಭಾರತ ತಂಡವೂ ಈ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಅನಿಲ್ ಕುಂಬ್ಳೆ ತಿಳಿಸಿದ್ದಾರೆ.

ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ತಂಡ ಪ್ರಚಂಡ ಯಶಸ್ಸು ಕಂಡಿದೆ. ಹೀಗಾಗಿ 2019ರ ಏಕದಿನ ವಿಶ್ವಕಪ್ ಮತ್ತು 2022ರ ಟಿ20 ವಿಶ್ವಕಪ್‌ನ ಚಾಂಪಿಯನ್‌ಗಳಾಗಲು ಸಹಾಯ ಮಾಡಿದ್ದು, ಟೆಸ್ಟ್ ಮತ್ತು ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಗಳಿಗಾಗಿ ಬೇರೆ ಬೇರೆ ತಂಡಗಳನ್ನು ಆಯ್ಕೆ ಮಾಡಿರುವುದು. ಆಯಾ ತಂಡಗಳ ಆಟಗಾರರು ಒಂದೇ ಸ್ವರೂಪದ ಕ್ರಿಕೆಟ್‌ಗೆ ಒತ್ತು ನೀಡುವುದರಿಂದ ಉತ್ತಮ ಪ್ರದರ್ಶನ ಕಾಣಬಹುದಾಗಿದೆ.

ಭಾರತ ತಂಡಕ್ಕೆ ಟಿ20 ಪರಿಣಿತ ಆಟಗಾರರ ಅವಶ್ಯಕತೆ ಇದೆ

ಭಾರತ ತಂಡಕ್ಕೆ ಟಿ20 ಪರಿಣಿತ ಆಟಗಾರರ ಅವಶ್ಯಕತೆ ಇದೆ

"ಖಂಡಿತವಾಗಿಯೂ ಪ್ರತ್ಯೇಕ ತಂಡಗಳು ಇರಬೇಕು. ಭಾರತ ತಂಡಕ್ಕೆ ಟಿ20 ಪರಿಣಿತ ಆಟಗಾರರ ಅವಶ್ಯಕತೆ ಇದೆ. ಅದನ್ನು ಇಂಗ್ಲೆಂಡ್ ತಂಡ ಮಾಡಿ ತೋರಿಸಿದೆ. ಅಷ್ಟೇ ಅಲ್ಲದೆ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವೂ ಅದನ್ನು ಪ್ರಯೋಗಿಸಿದೆ. ಹೆಚ್ಚಿನ ಆಲ್‌ರೌಂಡರ್‌ಗಳನ್ನು ತಂಡಕ್ಕೆ ಸೇರಿಸಿಕೊಳ್ಳಕಾಗಿದೆ," ಎಂದು ಕನ್ನಡಿಗ ಅನಿಲ್ ಕುಂಬ್ಳೆ ತಿಳಿಸಿದರು.

"ಇಂಗ್ಲೆಂಡ್ ತಂಡದ ಪರವಾಗಿ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾನೆ, ಆತನಂತಹ ಗುಣಮಟ್ಟದ ಆಟಗಾರನನ್ನು ಆ ಕ್ರಮಾಂಕದಲ್ಲಿ ಬೇರೆ ಯಾವುದೇ ತಂಡವು ಹೊಂದಿಲ್ಲ. ಇನ್ನು ಆಸ್ಟ್ರೇಲಿಯಾ ತಂಡದ ಪರವಾಗಿ ಮಾರ್ಕಸ್ ಸ್ಟೊಯಿನಿಸ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವುದನ್ನು ನೋಡಬಹುದು. ಭಾರತವೂ ಈ ರೀತಿಯ ತಂಡವನ್ನು ಕಟ್ಟಬೇಕಾಗಿದೆ," ಎಂದು ಅನಿಲ್ ಕುಂಬ್ಳೆ ಸಲಹೆ ನೀಡಿದರು.

ಮಾರ್ಗನ್ ನಿವೃತ್ತಿಯ ನಂತರ ಜೋಸ್ ಬಟ್ಲರ್ ನಾಯಕನಾಗಿ ಆಯ್ಕೆ

ಮಾರ್ಗನ್ ನಿವೃತ್ತಿಯ ನಂತರ ಜೋಸ್ ಬಟ್ಲರ್ ನಾಯಕನಾಗಿ ಆಯ್ಕೆ

"ಟಿ20 ಕ್ರಿಕೆಟ್‌ಗಾಗಿ ಬೇರೆ ನಾಯಕ ಅಥವಾ ಬೇರೆ ಕೋಚ್ ಬೇಕು ಎನ್ನುವುದರ ಬಗ್ಗೆ ನನಗೆ ಖಚಿತತೆ ಇಲ್ಲ. ಆದರೆ ನೀವು ಯಾವ ತಂಡವನ್ನು ಆಯ್ಕೆ ಮಾಡುತ್ತೀರಿ ಎಂಬುದರ ಮೇಲೆ ಎಲ್ಲ ಅವಲಂಬಿತವಾಗಿದೆ," ಎಂದು ಅನಿಲ್ ಕುಂಬ್ಳೆ ESPNCricinfoಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇಂಗ್ಲೆಂಡ್ ತಂಡವನ್ನು ನೋಡುವುದಾದರೆ, ಬ್ರೆಂಡನ್ ಮೆಕಲಮ್ ಟೆಸ್ಟ್ ತಂಡದ ಮುಖ್ಯ ಕೋಚ್ ಮತ್ತು ಬೆನ್ ಸ್ಟೋಕ್ಸ್ ನಾಯಕನಾಗಿದ್ದರೆ, ಸೀಮಿತ ಓವರ್‌ಗಳ ತಂಡದ ಮುಖ್ಯ ಕೋಚ್ ಆಗಿ ಮ್ಯಾಥ್ಯೂ ಮೋಟ್ ಮತ್ತು ನಾಯಕನಾಗಿ ಜೋಸ್ ಬಟ್ಲರ್ ಇದ್ದಾರೆ. ಈ ವಿಧಾನದಿಂದ ಇಂಗ್ಲೆಂಡ್ ತಂಡವು ಈ ವರ್ಷ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್, ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸಿತ್ತು.

ಇಯಾನ್ ಮಾರ್ಗನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯ ನಂತರ ಜೋಸ್ ಬಟ್ಲರ್ ನಾಯಕನಾಗಿ ಆಯ್ಕೆಯಾದ ನಂತರ ಭಾರತದ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಸೋಲು, ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಸಮಬಲ ಮತ್ತು ಟಿ20 ಸರಣಿ ಸೋಲಿನಿಂದ ನಾಯಕನಾಗಿ ಉತ್ತಮ ಶುಭಾರಂಭ ಮಾಡಲಿಲ್ಲ. ಆದರೆ ಜೋಸ್ ಬಟ್ಲರ್ ಅನುಪಸ್ಥಿತಿಯಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಏಳು ಪಂದ್ಯಗಳ ಟಿ20 ಸರಣಿಯನ್ನು ಗೆದ್ದುಕೊಂಡಿತು. ಆಗ ತಂಡವನ್ನು ಮೊಯಿನ್ ಅಲಿ ಮುನ್ನಡೆಸಿದ್ದರು. ಅನಂತರ ಆಸ್ಟ್ರೇಲಿಯದಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದು ಬೀಗಿದರು.

For Quick Alerts
ALLOW NOTIFICATIONS
For Daily Alerts
Story first published: Monday, November 14, 2022, 21:34 [IST]
Other articles published on Nov 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X