ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಮರು ಆಯೋಜನೆಗೆ ಸೂಕ್ತ ತಾಣವನ್ನು ಕಾರಣ ಸಹಿತ ಹೆಸರಿಸಿದ ಕೆವಿನ್ ಪೀಟರ್ಸನ್

The IPL Should Move To The UK In September: Kevin Pietersen

ಕೊರೊನಾ ವೈರಸ್‌ನ ಕಾರಣದಿಂದಾಗಿ ಮುಂದೂಡಿಕೆಯಾಗಿರುವ ಐಪಿಎಲ್ ಪುನಾರಂಭವಾಗುವುದು ಯಾವಾಗ ಮತ್ತು ಎಲ್ಲಿ ಎಂಬುದು ಈಗ ಎಲ್ಲರ ಕುತೂಹಲವಾಗಿದೆ. ಬಿಸಿಸಿಐ ಕೂಡ ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿದೆ. ಈ ಮಧ್ಯೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಯುನೈಟೆಡ್ ಕಿಂಗ್‌ಡಮ್‌ನಲ್ಲಿಯೇ ಟೂರ್ನಿಯನ್ನು ನಡೆಸುವಂತೆ ಆಗ್ರಹಿಸಿದ್ದಾರೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಐಪಿಎಲ್ ಟೂರ್ನಿಯನ್ನು ಮರು ಆಯೋಜಿಸಲು ಸೂಕ್ತವಾದ ಸಂದರ್ಭವಾಗಿರುವ ಹಿನ್ನೆಲೆಯಲ್ಲಿ ಪೀಟರ್ಸನ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆ ಸಂದರ್ಭದಲ್ಲಿ ಭಾರತದ ಪ್ರಮುಖ ಆಟಗಾರರು ಇಂಗ್ಲೆಂಡ್‌ನಲ್ಲಿಯೇ ಇರುವ ಕಾರಣ ಯುಕೆ ಸೂಕ್ತವಾದ ಆಯ್ಕೆ ಎಂದು ಹೇಳಿದ್ದಾರೆ.

ಆತನಲ್ಲಿ ವೈರಸ್ ಈಗ ತೆಗೆಯಲ್ಪಟ್ಟಿದೆ: ಆಟಗಾರನ ಶ್ಲಾಘಿಸಿದ ಜಡೇಜಾಆತನಲ್ಲಿ ವೈರಸ್ ಈಗ ತೆಗೆಯಲ್ಪಟ್ಟಿದೆ: ಆಟಗಾರನ ಶ್ಲಾಘಿಸಿದ ಜಡೇಜಾ

"ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್‌ನಲ್ಲಿ ಮುಂದುವರಿಸಲು ಯುಎಇ ಸೂಕ್ತವಾದ ತಾಣ ಎಂದು ಜನರು ಮಾತನಾಡಿಕೊಳ್ಳುವುದನ್ನು ನಾನು ಈಗಾಗಲೇ ಕಂಡಿದ್ದೇನೆ. ಆದರೆ ನನಗೆ ಅನಿಸುವಂತೆ ಐಪಿಎಲ್ ಯುಕೆಗೆ ಸ್ಥಳಾಂತರವಾಗುವುದು ಉತ್ತಮ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಅಂತ್ಯವಾದ ಬಳಿಕ ಸೆಪ್ಟೆಂಬರ್ ತಿಂಗಳಿನಲ್ಲಿ ಇದಕ್ಕಾಗಿ ಅವಕಾಶವಿದೆ. ಆ ಸಂದರ್ಭದಲ್ಲಿ ಭಾರತದ ಆಟಗಾರರ ಅದಾಗಲೇ ಇಂಗ್ಲೆಂಡ್‌ನಲ್ಲಿ ಇರುತ್ತಾರೆ. ಇಂಗ್ಲೆಂಡ್‌ ಆಟಗಾರರು ಕೂಡ ಲಭ್ಯವಾಗುತ್ತಾರೆ ಎಂದು ಪೀಟರ್ಸನ್ ಹೇಳಿದ್ದಾರೆ.

ಸೆಪ್ಟೆಂಬರ್ ಮಧ್ಯ ಮತ್ತು ಅಂತ್ಯಭಾಗ ಯುಕೆಯಲ್ಲಿ ಅತ್ಯಂತ ಸುಂದರವಾದ ಸಮಯವಾಗಿದೆ. ಈ ಟೂರ್ನಿಗಾಗಿ ಅವರು ಮ್ಯಾಂಚೆಸ್ಟರ್, ಲೀಡ್ಸ್, ಬರ್ಮಿಂಗ್‌ಹ್ಯಾಮ್ ಮತ್ತು ಲಂಡನ್‌ನಲ್ಲಿರುವ ಎರಡು ಕ್ರೀಡಾಂಗಣಗಳನ್ನು ಬಳಸಿಕೊಳ್ಳಬಹುದಾಗಿದೆ. ಮೈದಾನಕ್ಕೆ ಪ್ರೇಕ್ಷಕರನ್ನು ಸೇರಿಸುವುದಕ್ಕೂ ಇಲ್ಲಿ ಉತ್ತಮ ಅವಕಾಶಗಳು ಇದೆ" ಎಂದು ಪೀಟರ್ಸನ್ ಹೇಳಿದ್ದಾರೆ.

ಐಪಿಎಲ್‌ನಿಂದ ಕೊರೊನಾ ನಿಯಂತ್ರಣ ಕೂಡ ಸಾಧ್ಯ ಎಂದು ತಿಳಿಸಿದ ಪ್ಯಾಟ್ ಕಮಿನ್ಸ್ಐಪಿಎಲ್‌ನಿಂದ ಕೊರೊನಾ ನಿಯಂತ್ರಣ ಕೂಡ ಸಾಧ್ಯ ಎಂದು ತಿಳಿಸಿದ ಪ್ಯಾಟ್ ಕಮಿನ್ಸ್

ಈ ಬಾರಿಯ ಐಪಿಎಲ್ ಟೂರ್ನಿಯನ್ನು ಮುಂದೂಡುವ ಸಂದರ್ಭದಲ್ಲಿ ಅಂಕಪಟ್ಟಿಯಲ್ಲಿ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಗ್ರಸ್ಥಾನದಲ್ಲಿದ್ದರೆ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಸ್ಥಾನದಲ್ಲಿ ಹಾಗೂ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಾಲ್ಕನೇ ಸ್ಥಾನದಲ್ಲಿದೆ.

Story first published: Friday, May 7, 2021, 17:47 [IST]
Other articles published on May 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X