ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ತಂಡದ ಲಕ್ಕಿ ಚಾರ್ಮ್ 'ಅಜ್ಜಿ' ಗೆ ಥ್ಯಾಂಕ್ಸ್ ಎಂದ ಫ್ಯಾನ್ಸ್

ರಾಜೀವ್ ಗಾಂಧಿ ಮೈದಾನದಲ್ಲಿ ರೋಮಾಂಚನಕಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮ ಹಣಾಹಣಿ ಪಂದ್ಯದ ಕೊನೆ ಓವರ್ ವೇಳೆ ಟಿವಿ ಪರದೆ ಮೇಲೆ ಕಾಣಿಸಿಕೊಂಡ ಅಜ್ಜಿ ಯಾರು ಎಂಬ ಪ್ರಶ್ನೆ ಕಳೆದ ಎರಡು ದಿನಗಳಿಂದ ಓಡಾಡುತ್ತಿದ್ದು, ಇದಕ್ಕೆ ಉತ್ತರ ಇಲ್ಲಿದೆ

By Mahesh

ಹೈದರಾಬಾದ್, ಮೇ 23: ಭಾರತದಲ್ಲಿ ಕ್ರಿಕೆಟ್ ಕೂಡಾ ಒಂದು ಧರ್ಮ, ಎಲ್ಲಾ ಜಾತಿ, ಮತ ಪಂಥಗಳನ್ನು ಒಗ್ಗೂಡಿಸುವ ಶಕ್ತಿ ಇದಕ್ಕೆದೆ ಎಂಬುದನ್ನು ಹೇಳಬೇಕಾಗಿಲ್ಲ. ಕ್ರಿಕೆಟ್ ಪಂದ್ಯದ ವೇಳೆ ತಮ್ಮ ನೆಚ್ಚಿನ ತಂಡ ಗೆಲ್ಲಲಿ ಎಂದು ಫ್ಯಾನ್ಸ್ ಪ್ರಾರ್ಥನೆ ಸಲ್ಲಿಸುವುದು ಸಾಮಾನ್ಯ ದೃಶ್ಯ. ಆದರೆ, ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 10ರ ಫೈನಲ್ ಗೆಲ್ಲಲು ಕಾರಣವಾದ 'ನಾನಿ' ಬಗ್ಗೆ ಸಾಮಾಜಿಕ ಜಾಲ ತಾಣ ಹೆಚ್ಚಿನ ಆಸಕ್ತಿ ವಹಿಸಿದೆ.

ಐಪಿಎಲ್ ವಿಶೇಷ ಪುಟ | ಗ್ಯಾಲರಿ | ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ಮೇ 21ರಂದು ರಾಜೀವ್ ಗಾಂಧಿ ಮೈದಾನದಲ್ಲಿ ರೋಮಾಂಚನಕಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮ ಹಣಾಹಣಿ ಪಂದ್ಯದ ಕೊನೆ ಓವರ್ ವೇಳೆ ಟಿವಿ ಪರದೆ ಮೇಲೆ ಕಾಣಿಸಿಕೊಂಡ ಅಜ್ಜಿ ಯಾರು ಎಂಬ ಪ್ರಶ್ನೆ ಕಳೆದ ಎರಡು ದಿನಗಳಿಂದ ಓಡಾಡುತ್ತಿದ್ದು, ಇದಕ್ಕೆ ಮೊದಲಿಗೆ ಉತ್ತರಿಸಿದವರು ನಟ ಅಭಿಶೇಕ್ ಬಚ್ಚನ್.

The 'Nani' who prayed for Mumbai Indians' win at IPL 2017 final


ಕೊನೆ ಓವರ್ ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಲು 11ರನ್ ಅಗತ್ಯವಿತ್ತು.130ರನ್ ಗುರಿ ಬೆನ್ನು ಹತ್ತಿದ ಪುಣೆಗೆ ಈ ಪಂದ್ಯ ಗೆಲ್ಲುವ ಎಲ್ಲಾ ಸಾಧ್ಯತೆಯಿತ್ತು. ಆದರೆ, ಮಿಚೆಲ್ ಜಾನ್ಸನ್ ಓವರ್ ನಲ್ಲಿ ಎರಡು ವಿಕೆಟ್ ಉದುರಿದ್ದು, ಪಂದ್ಯ ರೋಚಕ ಕ್ಷಣಕ್ಕೆ ಬಂದು ನಿಂತಿತು. ಪುಣೆ ನಾಯಕ 51 ರನ್ ಗಳಿಸಿ ಔಟಾದಾಗ ಪಂದ್ಯ ಮುಂಬೈ ಪರ ವಾಲಿತು.


ಆ ಕ್ಷಣದಲ್ಲಿ ಈ ಅಜ್ಜಿ ಪ್ರಾರ್ಥನೆ ಮಾಡುವ ದೃಶ್ಯ ಕಾಣಿಸಿಕೊಂಡು, ಎಲ್ಲರ ಗಮನ ಸೆಳೆಯಿತು. 4 ಎಸೆತಗಳಲ್ಲಿ 7ರನ್ ಗಳಿಸಬೇಕಿದ್ದ ಪುಣೆ ಕೊನೆಗೆ 1 ರನ್ ನಿಂದ ಪಂದ್ಯವನ್ನು ಕಳೆದುಕೊಂಡಿತು. ಈ ಅಜ್ಜಿ ಯಾರು ಎಂಬ ಕುತೂಹಲದಿಂದ ಪ್ರೇಕ್ಷಕರು ಗೂಗಲ್ ಸರ್ಚ್ ಆರಂಭಿಸಿದರು.

ಈಕೆ ಬೇರೆ ಯಾರು ಅಲ್ಲ, ಶ್ರೀಮತಿ ಅಂಬಾನಿ (ನೀತಾ) ಅವರ ಅಮ್ಮ ಪೂರ್ಣಿಮಾ, ನಮ್ಮೆಲ್ಲರ ಲಕ್ಕಿ ಚಾರ್ಮ್ 'ನಾನಿ' ಎಂದು ನಟ ಅಭಿಶೇಕ್ ಬಚ್ಚನ್ ಟ್ವೀಟ್ ಮಾಡಿದರು. ಈ ಅಜ್ಜಿಯ ಪ್ರಾರ್ಥನೆಯಿಂದಲೆ ಮುಂಬೈ ಇಂಡಿಯನ್ಸ್ ಗೆಲುವು ದಾಖಲಿಸಿತು ಎಂಬ ಸಂದೇಶಗಳು ಹರಿದು ಬರುತ್ತಲೆ ಇವೆ. ಮುಂಬೈ ಇಂಡಿಯನ್ಸ್ ತಂಡದ ಅಧಿಕೃತ ಟ್ವೀಟ್ ಖಾತೆಯಿಂದಲೂ #ThankYouNani ಎಂಬ ಸಂದೇಶ ಹೊರ ಬಂದಿದೆ. ಒಟ್ಟಾರೆ, ಮುಂಬೈ ಗೆಲುವು ಅಜ್ಜಿಯ ಸಂಭ್ರಮವನ್ನು ಹೆಚ್ಚಿಸಿದೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X