ಟಿ20 ವಿಶ್ವಕಪ್‌ ಬಳಿಕ ಭಾರೀ ಬದಲಾವಣೆ: ಈ 4 ಸ್ಟಾರ್‌ಗಳು ನಾಯಕತ್ವ ತೊರೆಯುವುದು ಬಹುತೇಕ ನಿಶ್ಚಿತ!

ಟಿ20 ವಿಶ್ವಕಪ್‌ನ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿಯಿದ್ದು ಎಲ್ಲಾ ತಂಡಗಳು ಕೂಡ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಎಲ್ಲಾ ತಂಡಗಳು ಕೂಡ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗಿಯಾಗುವ ಆಟಗಾರರ ಬಳಗವನ್ನು ಘೋಷಣೆ ಮಾಡಿದ್ದು ಯಾವ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದು ಕೂಡ ಸ್ಪಷ್ಟವಾಗಿದೆ. ಇದೀಗ ಆಸಿಸ್ ನೆಲದಲ್ಲಿ ನಡೆಯಲಿರುವ ಈ ಟಿ20 ವಿಶ್ವಕಪ್‌ನಲ್ಲಿ ಗೆದ್ದು ಬೀಗಲಿರುವ ತಂಡ ಯಾವುದು ಎಂಬುದು ಕುತೂಹಲವಾಗಿ ಉಳಿದುಕೊಂಡಿದೆ.

ಇನ್ನು ವಿಶ್ವಕಪ್‌ನಂತಾ ಮಹತ್ವದ ಟೂರ್ನಿಗಳು ನಡೆದ ಬಳಿಕ ತಂಡಗಳಲ್ಲಿ ಕೆಲ ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಹಾಗಾಗಿಯೇ ಈ ಬಾರಿಯ ಟಿ20 ವಿಶ್ವಕಪ್‌ನ ನಂತರ ಕೂಡ ಬಹುತೇಕ ತಂಡಗಳಲ್ಲಿ ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ. ಅದರಲ್ಲಿ ತಂಡಗಳ ನಾಯಕರ ಬದಲಾವಣೆ ಕೂಡ ಒಂದು. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಬಳಿಕ ಚುಟುಕು ಮಾದರಿಯಲ್ಲಿ ಪ್ರಮುಖ ನಾಲ್ಕು ನಾಯಕರು ಬದಲಾವಣೆಯಾಗುವ ಸಾಧ್ಯತೆಯಿದೆ. ಆ ನಾಲ್ವರು ಸ್ಟಾರ್ ನಾಯಕರು ಯಾರು? ಮುಂದೆ ಓದಿ..

T20 ಕ್ರಿಕೆಟ್‌ನ ಟಾಪ್ 5 ಅಜೇಯ ಓಪನಿಂಗ್ ಜೊತೆಯಾಟ: 1 ವಿಕೆಟ್ ಕಳೆದುಕೊಳ್ಳದೆ ಗುರಿ ಮುಟ್ಟಿದವರು!T20 ಕ್ರಿಕೆಟ್‌ನ ಟಾಪ್ 5 ಅಜೇಯ ಓಪನಿಂಗ್ ಜೊತೆಯಾಟ: 1 ವಿಕೆಟ್ ಕಳೆದುಕೊಳ್ಳದೆ ಗುರಿ ಮುಟ್ಟಿದವರು!

ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್

ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್

ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಣೆ ಮಾಡಿದ್ದರು. ಚುಟುಕು ಕ್ರಿಕೆಟ್‌ನಲ್ಲಿಯೂ ಅಂಥಾದ್ದೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಕಳೆದ ಕೆಲ ಸಮಯಗಳಿಂದ ಫಿಂಚ್ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಸದ್ಯ ಟಿ20 ಕ್ರಿಕೆಟ್‌ನಲ್ಲಿ ಮಾತ್ರವೇ ಆಡುತ್ತಿರುವ ಕಾರಣ ಒಂದು ಮಾದರಿಯಲ್ಲಿ ಮಾತ್ರವೇ ತಂಡವನ್ನು ಮುನ್ನಡೆಸುತ್ತಿರುವ ಕಾರಣ ಟಿ20 ವಿಶ್ವಕಪ್ ಅಂತ್ಯವಾಗುತ್ತಿದ್ದಂತೆಯೇ ಆರೋನ್ ಫಿಂಚ್ ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆಯಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ವೈಟ್‌ಬಾಲ್ ತಂಡದ ನಾಯಕತ್ವವನ್ನು ಓರ್ವನಿಗೆ ಒಪ್ಪಿಸುವ ಸಾಧ್ಯತೆಯಿದೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ

ಕಳೆದ ವರ್ಷದ ಟಿ20 ವಿಶ್ವಕಪ್‌ನ ನಂತರ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ ರೋಹಿತ್ ಶರ್ಮಾ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಭವುಷ್ಯದ ದೃಷ್ಟಿಯಿಂದ ಯುವ ಆಟಗಾರರಿಗೆ ತಂಡದ ನಾಯಕತ್ವದ ಹೊಣೆಗಾರಿಗೆ ನೀಡಬೇಕು ಎಂಬ ಅಭಿಪ್ರಾಯ ಕೇಳಿ ಬಂದಿದ್ದರು ಕೂಡ ಈ ಬಾರಿಯ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ರೋಹಿತ್ ಶರ್ಮಾಗೆ ಟಿ20 ಮಾದರಿಯ ನಾಯಕಯತ್ವ ನೀಡಲಾಗಿತ್ತು. ಆದರೆ ಈ ಬಾರಿಯ ಟಿ20 ವಿಶ್ವಕಪ್‌ನ ಮುಕ್ತಾಯದ ಬಳಿಕ ರೋಹಿತ್ ಶರ್ಮಾ ಟಿ20 ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆಯಿದೆ. ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಅಥವಾ ಜಸ್ಪ್ರೀತ್ ಬೂಮ್ರಾ ಈ ಮೂವರ ಪೈಕಿ ಯಾರಿಯಾದರೂ ಒಬ್ಬರಿಗೆ ಟಿ2 ತಂಡದ ನಾಯಕತ್ವದ ಹೊಣೆಗಾರಿಕೆ ದೊರೆಯುವ ಸಾಧ್ಯತೆಯಿದೆ.

ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್

ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್

ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಮುನ್ನಡೆಸಿದ್ದ ಶಕೀಬ್ ಅಲ್ ಹಸನ್ ನಾಯಕನಾಗಿ ನಿರಾಸೆ ಮೂಡಿಸಿದ್ದರು. ಹೀಗಾಗಿ ಬಾಂಗ್ಲಾದೇಶ ತಂಡ 2024ರ ಟಿ20 ವಿಶ್ವಕಪ್‌ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಯುವ ಆಟಗಾರರನ್ನು ನಾಯಕನಾಗಿ ಬೆಳೆಸುವ ಅಗತ್ಯವಿದೆ. ಬಾಂಗ್ಲಾದೇಶ ತಂಡದಲ್ಲಿ ಸುದೀರ್ಘ ಕಾಲದಿಂದ ಆಟಗಾರನಾಗಿರುವ ಶಕೀಬ್ ಅಲ್ ಹಸನ್ ಯುವ ಆಟಗಾರನಿಗೆ ನಾಯಕತ್ವದ ಹೊಣೆಗಾರಿಕೆ ಬಿಟ್ಟುಕೊಡುವ ಅನಿವಾರ್ಯತೆಯಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಚಾರವಾಗಿ ಶಕೀಬ್ ಅಲ್ ಹಸನ್ ಬಾಂಗ್ಲಾದೇಶದ ಪಾಲಿಗೆ ಪ್ರಮುಖ ಅಸ್ತ್ರವಾಗಿದ್ದು ಇದೇ ಕಾರಣದಿಂದಾಗಿ ಬಾಂಗ್ಲಾದೇಶ ತಂಡದ ನಾಯಕತ್ವದ ಜವಾಬ್ಧಾರಿ ಮತ್ತೊಂದು ಬಾರಿ ಆಲ್‌ರೌಂಡರ್‌ನನ್ನು ಹುಡುಕಿಕೊಂಡು ಬಂದಿತ್ತು. ಆದರೆ ನಿರೀಕ್ಷಿತ ಪ್ರದರ್ಶನ ಬಾರಿದಿರುವುದು ನಿರಾಸೆ ಮೂಡಿಸಿದೆ. ಇದೇ ಸಂದರ್ಭದಲ್ಲಿ ವಯಸ್ಸು ಕೂಡ ಶಕೀಬ್ ಪರವಾಗಿ ಇಲ್ಲದಿರುವ ಕಾರಣದಿಂದಾಗಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಬಳಿಕ ನಾಯಕತ್ವ ತೊರೆಯುವ ಸಾಧ್ಯತೆಯಿದೆ.

ಅಫ್ಘಾನಿಸ್ತಾನ ನಾಯಕ ಮೊಹಮ್ಮದ್ ನಬಿ

ಅಫ್ಘಾನಿಸ್ತಾನ ನಾಯಕ ಮೊಹಮ್ಮದ್ ನಬಿ

ಕಳೆದ ವರ್ಷದ ವಿಶ್ವಕಪ್‌ಗೆ ಮುನ್ನ ರಶೀದ್ ಖಾನ್ ನಾಯಕತ್ವದ ಹೊಣೆಗಾರಿಕೆಯಿಂದ ಕೆಳಗಿಳಿದ ಬಳಿಕ ಹಿರಿಯ ಆಟಗಾರ ಮೊಹಮ್ಮದ್ ನಬಿ ಅಫ್ಘಾನಿಸ್ತಾನ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಈ ಬಾರಿಯ ವಿಶ್ವಕಪ್‌ಗೆ ಕೂಡ ಮೊಹಮ್ಮದ್ ನಬಿ ಅಫ್ಘಾನ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಸದ್ಯ 37ರ ಹರೆಯದವರಾಗಿರುವ ನಬಿ 2024ರ ವಿಶ್ವಕಪ್‌ನಲ್ಲಿ ಭಾಗವಹಿಸುವುದು ಅಸಂಭವ. ಹೀಗಾಗಿ ಟಿ20 ವಿಶ್ವಕಪ್‌ನ ಅಂತ್ಯದ ಬಳಿಕ ಅಫ್ಘಾನಿಸ್ತಾನದ ಟಿ20 ನಾಯಕತ್ವದಲ್ಲಿ ಬದಲಾವಣೆಯಾಗುವುದು ಬಹುತೇಕ ಖಚಿತ.

For Quick Alerts
ALLOW NOTIFICATIONS
For Daily Alerts
Story first published: Friday, September 23, 2022, 16:25 [IST]
Other articles published on Sep 23, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X