ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ್ಯಶಸ್ ಸರಣಿಗೆ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಆಘಾತ: ವಿವಾದದ ಸುಳಿಗೆ ಸಿಲುಕಿ ನಾಯಕತ್ವ ತ್ಯಜಿಸಿದ ಟಿಮ್ ಪೈನ್

Tim Paine resigned Australias Test captain after being involved in off-field scandal

ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡವನ್ನು ಕಳೆದ ನಾಲ್ಕು ವರ್ಷಗಳಿಂದ ಮುನ್ನಡೆಸುತ್ತಿದ್ದ ಟಿಮ್ ಪೈನ್ ಅತ್ಯಂತ ಕೆಟ್ಟ ರೀತಿಯಲ್ಲಿ ನಾಯಕತ್ವವನ್ನು ತ್ಯಜಿಸಿದ್ದಾರೆ. ಮೈದಾನದಾಚೆಯ ವಿವಾದವೊಂದಕ್ಕೆ ಸಿಲುಕಿರುವ ಆಸಿಸ್ ನಾಯಕ ದೊಡ್ಡ ಸರಣಿಯೊಂದು ಸನಿಹದಲ್ಲಿರುವಾಗಲೇ ನಾಯಕತ್ವ ತ್ಯಜಿಸಿದ್ದಾರೆ. ಇದು ಟಿ20 ಚಾಂಪಿಯನ್ ಪಟ್ಟಕ್ಕೇರಿರುವ ಆಸ್ಟ್ರೇಲಿಯಾ ತಂಡಕ್ಕೆ ಹಾಗೂ ಅದರ ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿದೆ.

ಮಹಿಳಾ ಸಹೋದ್ಯೋಗಿಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಟಿಮ್ ಪೈನ್ ವಿರುದ್ಧ ತನಿಖೆಯನ್ನು ನಡೆಸುತ್ತಿದೆ. ಈ ಪ್ರಕರಣದ ಕಾರಣದಿಂದಾಗಿ ಟಿಮ್ ಪೈನ್ ಆಸ್ಟ್ರೇಲಿಯಾ ಕ್ರಿಕೆಟ್ ತಮಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಆಶಸ್ ಟೆಸ್ಟ್ ಸರಣಿಗೆ ಮೂರು ವಾರಗಳಿಗೂ ಕಡಿಮೆ ದಿನಗಳಿರುವಾಗ ಈ ಬೆಳವಣಿಗೆ ನಡೆದಿರುವುದು ಆಸಿಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

ರಿಷಭ್ ಪಂತ್‌, ಧೋನಿ ತರಹ ಎಂದುಕೊಂಡಿದ್ದೆ, ನಿರೀಕ್ಷೆಗಳೆಲ್ಲಾ ಹುಸಿಯಾಯಿತು: ಇಂಜಮಾಮ್ ಉಲ್ ಹಕ್ರಿಷಭ್ ಪಂತ್‌, ಧೋನಿ ತರಹ ಎಂದುಕೊಂಡಿದ್ದೆ, ನಿರೀಕ್ಷೆಗಳೆಲ್ಲಾ ಹುಸಿಯಾಯಿತು: ಇಂಜಮಾಮ್ ಉಲ್ ಹಕ್

ಶುಕ್ರವಾರ ಆಸ್ಟ್ರೇಲಿಯಾದ ಹೋಬಾರ್ಟ್‌ನಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಟಿಮ್ ಪೈನ್ ತಮ್ಮ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದ್ದಾರೆ. 2017ರಲ್ಲಿ ಕ್ರಿಕೆಟ್ ಟಾಸ್ಮೇನಿಯಾದ ಉದ್ಯೋಗಿ ಜೊತೆಗಿನ ಈ ಪ್ರಕರಣ ಬಹಿರಂಗವಾಗಿತ್ತು. ಹೀಗಾಗಿ ಈ ರಾಜೀನಾಮೆ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಟಿಮ್ ಪೈನ್.

ನಾಲ್ಕು ವರ್ಷಗಳ ಹಿಂದಿನ ಘಟನೆ ಹೇಳಿದ ಪೈನ್

ನಾಲ್ಕು ವರ್ಷಗಳ ಹಿಂದಿನ ಘಟನೆ ಹೇಳಿದ ಪೈನ್

ಇನ್ನು ರಾಜೀನಾಮೆ ನಿರ್ಧಾರ ಪ್ರಕಟಿಸಿದ ಸಂದರ್ಭದಲ್ಲಿ ಇದಕ್ಕೆ ಕಾರಣವಾದ ಅಂಶವನ್ನು ಕೂಡ ಸ್ವತಃ ತಾವೇ ಹೇಳಿಕೊಂಡಿದ್ದಾರೆ. "ಸುಮಾರು ನಾಲ್ಕು ವರ್ಷಗಳ ಹಿಂದೆ ನಾನು ನನ್ನ ಆಗಿನ ಸಹೋದ್ಯೋಗಿಯ ಜೊತೆಗೆ ಸಂದೇಶಗಳ ವಿನಿಮಯದಲ್ಲಿ ತೊಡಗಿದ್ದೆ. ಆ ಸಂದರ್ಭದಲ್ಲಿ ಈ ಸಂದೇಶಗಳ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾದ ಇಂಟಿಗ್ರಿಟಿ ಯೂನಿಟ್ ತನಿಖೆಯನ್ನು ನಡೆಸಿತ್ತು. ಈ ವಿಚಾರಣೆಯನ್ನು ನಾನು ಸಂಪೂರ್ಣವಾಗಿ ಹಾಗೂ ಬಹಿರಂಗವಾಗಿ ಭಾಗವಹಿಸಿದ್ದೆ. ಆ ತನಿಖೆಯಲ್ಲಿ ಹಾಗೂ ಕ್ರಿಕೆಟ್ ಟಾಸ್ಮೇನಿಯಾದ ಹೆಚ್‌ಆರ್ ತನಿಖೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದ ನೀತಿ ಸಂಹಿತೆಯ ಉಲ್ಲಂಘನೆ ಆಗಿಲ್ಲ ಎಂದು ಸಾಬೀತಾಗಿದೆ. ದೀಷ ಮುಕ್ತನಾದರೂ ಆ ಸಂದರ್ಭದಲ್ಲಿ ಹಾಗೂ ಈಗಲೂ ಈ ಘಟನೆಗೆ ನಾನು ತೀವ್ರವಾಗಿ ವಿಷಾದ ಹೊಂದಿದ್ದೇನೆ. ಈ ಸಂದರ್ಭದಲ್ಲಿ ನನಗೆ ನನ್ನ ಪತ್ನಿ ಹಾಗೂ ಕುಟುಂಬದವರು ನನಗೆ ಬೆಂಬಲವನ್ನು ನೀಡಿದ್ದಾರೆ. ಅದಕ್ಕಾಗಿ ಕೃತಜ್ಞನಾಗಿದ್ದೇನೆ" ಎಂದು ಟಿಮ್ ಪೈನ್ ಹೇಳಿದ್ದಾರೆ.

ಕಣ್ಣೀರಿಡುತ್ತಲೇ ನಿವೃತ್ತಿಯ ಘೋಷಣೆ

ಕಣ್ಣೀರಿಡುತ್ತಲೇ ನಿವೃತ್ತಿಯ ಘೋಷಣೆ

ವಿವಾದದಲ್ಲಿ ಸಿಲುಕಿರುವ ಆಸಿಸ್ ನಾಯಕ ಟಿಮ್ ಪೈನ್ ಮಾಧ್ಯಮಗೋಷ್ಠಿಯನ್ನು ಉದ್ಧೇಶಿಸಿ ನಾಯಕತ್ವ ತ್ಯಜಿಸುವ ನಿರ್ಧಾರ ಪ್ರಕಟಿಸುತ್ತಾ ಕಣ್ಣೀರಿಟ್ಟಿದ್ದಾರೆ. "ಇಂದು ನಾನು ಆಸ್ಟ್ರೇಲಿಯಾದ ಪುರುಷರ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಘೋಷಿಸುತ್ತಿದ್ದೇನೆ. ಇದೊಂದು ನಿಜಕ್ಕೂ ಕಠಿಣವಾದ ನಿರ್ಧಾರ. ಆದರೆ ಇದು ನನಗೆ, ನನ್ನ ಕುಟುಂಬಕ್ಕೆ ಹಾಗೂ ಕ್ರಿಕೆಟ್‌ಗೆ ಸೂಕ್ತವಾದ ನಿರ್ಧಾರವಾಗಿದೆ" ಎಂದು ತಮ್ಮ ನಿವೃತ್ತಿಯನ್ನು ಪ್ರಕಟಿಸುತ್ತಾ ಟಿಮ್ ಪೈನ್ ಹೇಳಿದ್ದಾರೆ.

ನಾಯಕತ್ವದ ರಾಜೀನಾಮೆ ಸ್ವೀಕರಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

ನಾಯಕತ್ವದ ರಾಜೀನಾಮೆ ಸ್ವೀಕರಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

ಇನ್ನು ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕತ್ವಕ್ಕೆ ಟಿಮ್ ಪೈನ್ ರಾಜೀನಾಮೆ ನೀಡಿರುವುದನ್ನು ಕ್ರಿಕೆಟ್ ಆಸ್ಟ್ರೇಲಿಯಾ ಸ್ವೀಕರಿಸಿದ್ದು ಅಂಗೀಕರಿಸಿದೆ. ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ರಿಚರ್ಡ್ ಫ್ರಾಡೆನ್ಸ್ಟ್ರೈನ್ ಪ್ರತಿಕ್ರಿಯಿಸಿದ್ದಾರೆ. "ತನ್ನ ಕುಟುಂಬ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್‌ನ ಒಳಿತಿಗಾಗಿ ತಾನು ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯುವುದು ಉತ್ತಮ ಎಂದು ಟಿಮ್ ಭಾವಿಸಿದ್ದಾರೆ. ಮಂಡಳಿ ಟಿಮ್ ಅವರ ರಾಜೀನಾಮೆಯನ್ನು ಸ್ವೀಕರಿಸುತ್ತದೆ. ಮುಂದೆ ರಾಷ್ಟ್ರೀಯ ಆಯ್ಕೆ ಮಂಡಳಿ ನೂತನ ನಾಯಕನ ಆಯ್ಕೆ ಹಾಗೂ ನೇಮಕದ ಪ್ರಕ್ರಿಯೆ ನಡೆಸಲಿದೆ" ಎಂದಿದ್ದಾರೆ.

ಪ್ಯಾಟ್ ಕಮ್ಮಿನ್ಸ್‌ಗೆ ನಾಯಕತ್ವ?

ಪ್ಯಾಟ್ ಕಮ್ಮಿನ್ಸ್‌ಗೆ ನಾಯಕತ್ವ?

ತಕ್ಷಣವೇ ಯಾವುದೇ ಪ್ರಮುಖ ಬದಲಾವನೆ ಮಾಡದಿದ್ದರೆ ಮುಂದಿನ ಆಶಸ್ ಸರಣಿಯಲ್ಲಿ ಸದ್ಯ ಉಪನಾಯಕನಾಗಿರುವ ಪ್ಯಾಟ್ ಕಮಿನ್ಸ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಹೀಗಾದಲ್ಲಿ 65 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡವನ್ನು ವೇಗದ ಬೌಲರ್ ಒಬ್ಬರು ತಂಡವನ್ನು ಮುನ್ನಡೆಸಿದಂತಾಗುತ್ತದೆ. ಆಸಿಸ್ ನಾಯಕತ್ವ ಪ್ಯಾಟ್ ಕಮ್ಮಿನ್ಸ್ ಹೆಗಲೇರಿದರೆ ತಂಡವನ್ನು ನಾಯಕನಾಗಿ ಮುನ್ನಡೆಸುವ 47ನೇ ಆಟಗಾರ ಎನಿಸಲಿದ್ದಾರೆ.

ಸೂರ್ಯಕುಮಾರ್ ಯಾದವ್ ಪಂದ್ಯ ಮುಗಿದಾದ ನಂತರ ಹೇಳಿದ್ದೇನು ? | Oneindia Kannada
ಸ್ಯಾಂಡ್ ಪೇಪರ್ ಹಗರಣದಿಂದ ನಾಯಕನ ಸ್ಥಾನಕ್ಕೇರಿದ ಟಿಮ್ ಪೈನ್

ಸ್ಯಾಂಡ್ ಪೇಪರ್ ಹಗರಣದಿಂದ ನಾಯಕನ ಸ್ಥಾನಕ್ಕೇರಿದ ಟಿಮ್ ಪೈನ್

ಟಿಮ್ ಪೈನ್ ನಾಯಕತ್ವದ ಜವಾಬ್ಧಾರಿಯನ್ನು ವಹಿಸಿಕೊಂಡದ್ದು ಕೂಡ ಆಸ್ಟ್ರೇಲಿಯಾ ತಂಡ ದೊಡ್ಡ ವಿವಾದದಲ್ಲಿ ಸಿಲುಕಿದ್ದ ಸಂದರ್ಭದಲ್ಲಿ. 2018ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡ ಕ್ರಿಕೆಟ್ ಮೈದಾಬದ ಅತಿ ದೊಡ್ಡ ವಿವಾದಗಳಲ್ಲಿ ಒಂದಾದ ಸ್ಯಾಂಡ್ ಪೇಪರ್ ಪ್ರಕರಣದಲ್ಲಿ ಸಿಲುಕಿ ನಗುಗಿತ್ತು. ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪ ನಾಯಕ ಡೇವಿಡ್ ವಾರ್ನರ್ ಇಬ್ಬರು ಕೂಡ ಈ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷಗಳ ಕಾಲ ನಿಶೇಧಕ್ಕೆ ಒಳಗಾಗಿದ್ದರು. ಇಂತಾ ಸಂದರ್ಭದಲ್ಲಿ ಟಿಮ್ ಪೈನ್ ಆಸ್ಟ್ರೇಲಿಯಾ ತಂಡದ ನಾಯಕತ್ವದ ಜವಾಬ್ಧಾರಿ ವಹಿಸಿಕೊಂಡಿದ್ದರು.

Story first published: Friday, November 19, 2021, 11:32 [IST]
Other articles published on Nov 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X