ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

TNPL 2022: ಬಾಬಾ ಅಪರಾಜಿತ್‌ಗೆ ಮಧ್ಯದ ಬೆರಳು ತೋರಿಸಿದ ಸಿಎಸ್‌ಕೆಯ ಎನ್. ಜಗದೀಶನ್

TNPL 2022 Opening Match: N Jagadeesan Shows Middle Finger Twice After Being Mankaded
N Jagadeesan ಹಾಗು Aparajith ನಡುವೆ ದೊಡ್ಡ ಜಗಳ | *Cricket | OneIndia Kannada

2016ರಲ್ಲಿ ಆರಂಭವಾಗಿದ್ದ ತಮಿಳುನಾಡು ಪ್ರೀಮಿಯರ್ ಲೀಗ್‌ನ ಆರನೇ ಆವೃತ್ತಿ ಜೂನ್ 23ರಿಂದ ಆರಂಭವಾಗಿದ್ದು, ಈ ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸಿವೆ. ಒಟ್ಟು 32 ಪಂದ್ಯಗಳು ನಡೆಯಲಿವೆ.

2017, 2019 ಮತ್ತು 2021ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಚೆಪಾಕ್ ಸೂಪರ್ ಗಿಲ್ಲೀಸ್ ತಂಡ ಈ ಬಾರಿಯೂ ಕೂಡ ಗೆದ್ದು ಚಾಂಪಿಯನ್ ಪಟ್ಟವನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ಗುರಿ ಹೊಂದಿದೆ. ಜೂನ್ 23ರಂದು ಆರಂಭವಾಗಿರುವ ಈ ಟೂರ್ನಿ ಜುಲೈ 31ರಂದು ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಮುಕ್ತಾಯಗೊಳ್ಳಲಿದೆ.

ರೋಮಾಂಚಕ ಸ್ಪರ್ಧೆಯಿಂದ ಕೂಡಿದ್ದ ಗಿಲ್ಲೀಸ್ ಮತ್ತು ನೆಲ್ಲೈ

ರೋಮಾಂಚಕ ಸ್ಪರ್ಧೆಯಿಂದ ಕೂಡಿದ್ದ ಗಿಲ್ಲೀಸ್ ಮತ್ತು ನೆಲ್ಲೈ

ಚೆಪಾಕ್ ಸೂಪರ್ ಗಿಲ್ಲೀಸ್ ಮತ್ತು ನೆಲ್ಲೈ ರಾಯಲ್ ಕಿಂಗ್ಸ್ ನಡುವಿನ ತಮಿಳುನಾಡು ಪ್ರೀಮಿಯರ್ ಲೀಗ್ 2022ರ ಆರಂಭಿಕ ಪಂದ್ಯವು ರೋಮಾಂಚಕ ಸ್ಪರ್ಧೆಯಿಂದ ಕೂಡಿತ್ತು. ತಿರುನಲ್ವೇಲಿಯ ಸಿಮೆಂಟ್ ಕಂಪನಿ ಮೈದಾನದಲ್ಲಿ ರೋಮಾಂಚಕ ಟೈನಲ್ಲಿ ಕೊನೆಗೊಂಡಿತ್ತು. ಆದರೆ ಚೆಪಾಕ್ ಸೂಪರ್ ಗಿಲ್ಲೀಸ್ ವಿರುದ್ಧ ನೆಲ್ಲೈ ರಾಯಲ್ ಕಿಂಗ್ಸ್ ಸೂಪರ್ ಓವರ್‌ನಲ್ಲಿ ಗೆದ್ದಿತು.

ಇದೇ ವೇಳೆ ಈ ಪಂದ್ಯದಲ್ಲಿ ತಮಿಳುನಾಡಿನ ಪ್ರಥಮ ದರ್ಜೆ ಆಟಗಾರರಾದ ಎನ್. ಜಗದೀಶನ್ ಮತ್ತು ಬಾಬಾ ಅಪರಾಜಿತ್ ನಡುವಿನ ಅಸಭ್ಯ ಘಟನೆಗೆ ಸಾಕ್ಷಿಯಾಯಿತು.

'ಮಂಕಡೆಡ್' ಮೂಲಕ ಔಟ್ ಆದ ಎನ್. ಜಗದೀಶನ್

'ಮಂಕಡೆಡ್' ಮೂಲಕ ಔಟ್ ಆದ ಎನ್. ಜಗದೀಶನ್

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುವ ಎನ್. ಜಗದೀಶನ್ ಅವರನ್ನು ನೆಲ್ಲೈ ರಾಯಲ್ ಕಿಂಗ್ಸ್ ಬೌಲರ್ ಬಾಬಾ ಅಪರಾಜಿತ್ ಅವರು "ಮಂಕಡೆಡ್' ಮೂಲಕ ಔಟ್ ಮಾಡಿದರು. ಇದರಿಂದ ಎನ್. ಜಗದೀಶನ್ ತಾಳ್ಮೆ ಕಳೆದುಕೊಂಡರು.

ಚೆಪಾಕ್ ಸೂಪರ್ ಗಿಲ್ಲೀಸ್ ಓಪನರ್ ಎನ್. ಜಗದೀಶನ್ 15 ಬಾಲ್‌ಗಳಲ್ಲಿ 25 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದರು. ಆದರೆ ಬಾಬಾ ಅಪರಾಜಿತ್ ತಮ್ಮ ಇನ್ನಿಂಗ್ಸ್ ಅನ್ನು ಮಂಕಡೆಡ್ ಮಾಡುವ ಮೂಲಕ ಕೊನೆಗೊಳಿಸಿದರು. MCC ಕಾನೂನಿನ ಪ್ರಕಾರ ವಜಾಗೊಳಿಸುವ ಕಾನೂನು ವಿಧಾನವಾಗಿದೆ.

ಬಾಬಾ ಅಪರಾಜಿತ್ ಕಡೆಗೆ ಮಧ್ಯದ ಬೆರಳು ತೋರಿಸಿದ ಎನ್. ಜಗದೀಶನ್

ಬಾಬಾ ಅಪರಾಜಿತ್ ಕಡೆಗೆ ಮಧ್ಯದ ಬೆರಳು ತೋರಿಸಿದ ಎನ್. ಜಗದೀಶನ್

ಎನ್. ಜಗದೀಶನ್ ಔಟಾದ ನಂತರ ದೀರ್ಘ ನಡಿಗೆಯನ್ನು ಹಾಕಿ ಪೆವಿಲಿಯನ್‌ಗೆ ಹಿಂತಿರುಗುವಾಗ, ಹಿಂತಿರುಗಿ ನೋಡುತ್ತಾ ತನ್ನ ಮಧ್ಯದ ಬೆರಳನ್ನು ಬಾಬಾ ಅಪರಾಜಿತ್ ಕಡೆಗೆ ತೋರಿಸಿದ್ದು, ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಎನ್. ಜಗದೀಶನ್ ಅವರಂತಹ ಹಿರಿಯ ಆಟಗಾರರಿಂದ ಇದು ಅನಿರೀಕ್ಷಿತವಾಗಿದ್ದು, ಅವರ ಈ ಗೆಸ್ಚರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಇನ್ನು ಪಂದ್ಯದ ಕುರಿತು ಮಾತನಾಡುವುದಾದರೆ, ಮೊದಲು ಬ್ಯಾಟ್ ಮಾಡಿದ ನೆಲ್ಲೈ ರಾಯಲ್ ಕಿಂಗ್ಸ್ ಬೋರ್ಡ್‌ನಲ್ಲಿ 187 ರನ್‌ಗಳನ್ನು ಕಲೆ ಹಾಕಿತು. ಎಲ್. ಸೂರ್ಯಪ್ರಕಾಶ್ ಅವರ 50 ಎಸೆತಗಳಲ್ಲಿ 62 ರನ್ ಮತ್ತು ಪಂದ್ಯ ಪುರುಷೋತ್ತಮ ಸಂಜಯ್ ಯಾದವ್ ಅವರ 47 ಎಸೆತಗಳಲ್ಲಿ ಆರು ಸಿಕ್ಸರ್ ಮತ್ತು ಐದು ಬೌಂಡರಿಗಳೊಂದಿಗೆ 87 ರನ್ ಗಳಿಸಿ, ಉತ್ತಮ ಮೊತ್ತದ ಗುರಿ ನೀಡಿದ್ದರು.

ಸೂಪರ್ ಓವರ್‌ನಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ ಗೆಲುವು

ಸೂಪರ್ ಓವರ್‌ನಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ ಗೆಲುವು

ಅಸಾಧಾರಣ ಗುರಿ ಬೆನ್ನತ್ತಿದ ಚೆಪಾಕ್ ಸೂಪರ್ ಗಿಲ್ಲೀಸ್, ಪ್ರತ್ಯುತ್ತರವಾಗಿ ನಾಯಕ ಕೌಶಿಕ್ ಗಾಂಧಿ ಅವರ 43 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು 7 ಬೌಂಡರಿಗಳೊಂದಿಗೆ 64 ರನ್ ಗಳಿಸಿದರು ಮತ್ತು ಸೋನು ಯಾದವ್ (34) ಮತ್ತು ಎಸ್. ಹರೀಶ್ ಕುಮಾರ್ (26) ಅವರ ಉತ್ತಮ ಬ್ಯಾಟಿಂಗ್‌ನಿಂದ ಚೆಪಾಕ್ ಸೂಪರ್ ಗಿಲ್ಲೀಸ್ ತಂಡವನ್ನು ಸೂಪರ್ ಓವರ್‌ಗೆ ತಂದು ನಿಲ್ಲಿಸಿದರು.

ಸೂಪರ್ ಓವರ್‌ನಲ್ಲಿ ಚೆಪಾಕ್ ಸೂಪರ್ ಗಿಲ್ಲೀಸ್ ತಂಡ 9 ರನ್ ಗಳಿಸಿ ನೆಲ್ಲೈ ರಾಯಲ್ ಕಿಂಗ್ಸ್ ಗೆಲುವಿಗೆ 10 ರನ್‌ಗಳನ್ನು ನಿಗದಿಪಡಿಸಲಾಯಿತು. ಅವರು ಒಂದು ವಿಕೆಟ್ ನಷ್ಟಕ್ಕೆ ಗುರಿ ಸಾಧಿಸುವಲ್ಲಿ ಯಶಸ್ವಿಯಾದರು.

Story first published: Friday, June 24, 2022, 15:35 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X