ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಸಿಡಿಸಿರುವ 3 ಆಟಗಾರರು (ಏಕದಿನ ಕ್ರಿಕೆಟ್‌)

Virat kohli

ಕ್ರಿಕೆಟ್‌ನ ಯಾವುದೇ ಫಾರ್ಮೆಟ್ ಆಗಲಿ, ಅದಕ್ಕೆ ತಕ್ಕಂತಹ ಆಟಗಾರರಿರೋದು ಸಹಜ. ಕೆಲವರು ಟೆಸ್ಟ್ ಫಾರ್ಮೆಟ್‌ಗೆ ಒಗ್ಗಿಕೊಂಡಿದ್ರೆ, ಮತ್ತೆ ಕೆಲವರು ಲಿಮಿಟೆಡ್ ಓವರ್‌ ಕ್ರಿಕೆಟ್‌ನಲ್ಲಿ ಹೆಚ್ಚು ಯಶಸ್ಸು ಕಾಣುತ್ತಾರೆ. ಅದೇ ರೀತಿಯಲ್ಲಿ ಮೂರು ಫಾರ್ಮೆಟ್‌ನಲ್ಲಿ ಮಿಂಚೋದು ಬೆರಳಣಿಕೆಯ ಆಟಗಾರರು ಮಾತ್ರ.

ಏಕದಿನ ಆಗಿರಲಿ, ಟೆಸ್ಟ್ ಕ್ರಿಕೆಟ್ ಆಗಿರಲಿ ಕೆಲ ಬ್ಯಾಟರ್‌ಗಳು ನಿರ್ದಿಷ್ಟವಾದ ಕ್ರಮಾಂಕದಲ್ಲಿ ಹೆಚ್ಚು ಕಾಲ ಆಡಿ ದಾಖಲೆಯನ್ನ ಮಾಡಿದ್ದನ್ನ ನೋಡಿದ್ದೇವೆ. ಅದ್ರಲ್ಲೂ ದಿಗ್ಗಜ ಆಟಗಾರರಲ್ಲಿ ಕೆಲವರಂತೂ ಒಮ್ಮೆ ಯಶಸ್ಸು ಸಾಧಿಸಿದ ಮೇಲಂತೂ ಅದೇ ಕ್ರಮಾಂಕದಲ್ಲೇ ಕೊನೆಯವರೆಗೂ ಆಡಿ ನಿವೃತ್ತಿಯಾಗಿರುವ ಉದಾಹರಣೆಗಳು ಸಹ ಇದೆ.

ಅಂದಹಾಗೆ, ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಬ್ಯಾಟ್ಸ್‌ಮನ್‌ಗಳ ಕೊಡುಗೆಯೂ ಬಹಳ ಮುಖ್ಯ. ಏಕೆಂದರೆ ಕೆಲವೊಮ್ಮೆ ಆರಂಭಿಕ ಬ್ಯಾಟ್ಸ್‌ಮನ್ ಬೇಗನೆ ಔಟಾಗುತ್ತಾನೆ ಮತ್ತು ಅದರ ನಂತರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಬ್ಯಾಟ್ಸ್‌ಮನ್‌ ಮೇಲೆ ಜವಾಬ್ದಾರಿ ಇನ್ನಷ್ಟು ಹೆಚ್ಚಾಗುತ್ತದೆ.

ಏಕದಿನ ಕ್ರಿಕೆಟ್ ವಿಚಾರದ ಕುರಿತು ನೋಡಿದ್ರೆ, ಮೂರನೇ ಕ್ರಮಾಂಕದ ಬ್ಯಾಟಿಂಗ್ ತುಂಬಾನೆ ಮಹತ್ವದ್ದಾಗಿದೆ. ಪವರ್‌ಪ್ಲೇ ಓವರ್‌ಗಳಲ್ಲಿ ಬೇಗನೆ ವಿಕೆಟ್ ಉರುಳಿದ್ರೆ, ಕ್ರೀಸ್‌ನಲ್ಲಿ ನೆಲೆಯೂರಿ ಆಡುವುದರ ಜೊತೆಗೆ ಸ್ಟ್ರೈಕ್‌ರೇಟ್ ಕೂಡ ನಿಭಾಯಿಸಬೇಕಾಗುತ್ತದೆ. ಈ ಲೇಖನದಲ್ಲಿ ಅಂತಹ ಮೂವರು ಬ್ಯಾಟರ್‌ಗಳ ಕುರಿತು ನಾವು ನಿಮಗೆ ತಿಳಿಸುತ್ತೇವೆ. ಏಕದಿನ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಅತ್ಯಂತ ಯಶಸ್ಸು ಕಂಡು ಅತಿ ಹೆಚ್ಚು ರನ್ ಕಲೆಹಾಕಿದ್ದಾರೆ.

ಕುಮಾರ ಸಂಗಕ್ಕಾರ

ಕುಮಾರ ಸಂಗಕ್ಕಾರ

ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ದ್ವೀಪ ರಾಷ್ಟ್ರ ವಿಶ್ವ ಕ್ರಿಕೆಟ್‌ಗೆ ನೀಡಿದ ಬೆಸ್ಟ್‌ ಎಡಗೈ ಬ್ಯಾಟರ್ ಆಗಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಸಂಗಕ್ಕಾರ ಅನೇಕ ಅಮೋಘ ಇನ್ನಿಂಗ್ಸ್‌ ಆಡಿದ್ದಾರೆ. ಈತ 238 ಇನ್ನಿಂಗ್ಸ್‌ನಲ್ಲಿ 9,747 ರನ್ ಕಲೆಹಾಕಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಆಡಿದ ಸಂಗಕ್ಕಾರ 18 ಶತಕ ಮತ್ತು 66 ಅರ್ಧಶತಕಗಳನ್ನ ಸಹ ದಾಖಲಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನ 4ನೇ ಇನ್ನಿಂಗ್ಸ್‌ನಲ್ಲಿ ವೇಗದ ಶತಕ ಸಿಡಿಸಿದ ಟಾಪ್ 3 ಬ್ಯಾಟ್ಸ್‌ಮನ್‌ಗಳು

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಏಕದಿನ ಕ್ರಿಕೆಟ್‌ನಲ್ಲಿ ತನ್ನ ಫೇವರಿಟ್ ಕ್ರಮಾಂಕದಲ್ಲಿ(3) ಆಡುವ ವಿರಾಟ್ ಕೊಹ್ಲಿ ಕೇವಲ 190 ಇನ್ನಿಂಗ್ಸ್‌ನಲ್ಲಿ 10,000 ರನ್ ಪೂರೈಸಿದರು. ಟೀಂ ಇಂಡಿಯಾದ ರನ್ ಮಶಿನ್ ಆಗಿರುವ ವಿರಾಟ್ ಮೂರನೇ ಕ್ರಮಾಂಕದಲ್ಲಿ ಒಟ್ಟು 197 ಏಕದಿನ ಇನ್ನಿಂಗ್ಸ್‌ನಲ್ಲಿ 10195 ರನ್ ಕಲೆಹಾಕಿದ್ದಾರೆ.

ತನ್ನ ಅಗ್ರೆಸ್ಸಿವ್ ಬ್ಯಾಟಿಂಗ್‌ನಲ್ಲಿ ಹೆಸರುವಾಸಿಯಾದ ಕೊಹ್ಲಿ ಚೇಸಿಂಗ್ ಮಾಸ್ಟರ್ ಕೂಡ ಆಗಿದ್ದಾರೆ. ಆದ್ರೆ ವಿರಾಟ್ 70 ಅಂತರಾಷ್ಟ್ರೀಯ ಶತಕ ಪೂರೈಸಿದ ಬಳಿಕ ಬ್ಯಾಟಿಂಗ್‌ನಲ್ಲಿ ಮಂಕಾಗಿದ್ದು, ಕಳೆದ ಎರಡು ವರ್ಷಗಳಿಂದ ಕಳಪೆ ಫಾರ್ಮ್ ಎದುರಿಸುತ್ತಿದ್ದಾರೆ.

ನಿವೃತ್ತಿಯ ಚಿಂತನೆಯಲ್ಲಿ ಇಂಗ್ಲೆಂಡ್‌ ಕಂಡ ಶ್ರೇಷ್ಠ ನಾಯಕ!: ವಾರದೊಳಗೆ ನಿವೃತ್ತಿ ಘೋಷಿಸಲಿರುವ ಕ್ರಿಕೆಟಿಗ ಯಾರು?

Rohit ಅಲಭ್ಯತೆಯಲ್ಲಿ ಇಂಗ್ಲೆಂಡ್ ನಲ್ಲಿ‌ ಮಿಂಚುತ್ತಾರಾ ಮಯಾಂಕ್ ಅಗರ್ವಾಲ್ | *Cricket | OneIndia Kannada
ರಿಕಿ ಪಾಂಟಿಂಗ್

ರಿಕಿ ಪಾಂಟಿಂಗ್

ಆಸ್ಟ್ರೇಲಿಯಾ ಕಂಡಂತಹ ಶ್ರೇಷ್ಟ ನಾಯಕರಲ್ಲಿ ಒಬ್ಬರಾದ ರಿಕಿ ಪಾಂಟಿಂಗ್ ಮೂರನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ತನ್ನ ಅಮೋಘ ಸ್ಥಿರ ಪ್ರದರ್ಶನ ಜೊತೆಗೆ ಮಿಂಚಿದ ಪಾಂಟಿಂಗ್‌ಗೆ ಏಕದಿನ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕ ಅಚ್ಚುಮೆಚ್ಚು.

ರಿಕಿ ಮೂರನೇ ಕ್ರಮಾಂಕದಲ್ಲಿ 330 ಇನ್ನಿಂಗ್ಸ್‌ಗಳಲ್ಲಿ ದಾಖಲೆಯ 12662 ರನ್ ಕಲೆಹಾಕಿದ್ದಾರೆ. ಜೊತೆಗೆ 29 ಶತಕಗಳು ಮತ್ತು 74 ಅರ್ಧಶತಕಗಳು ಒಳಗೊಂಡಿವೆ.

Story first published: Monday, June 27, 2022, 17:44 [IST]
Other articles published on Jun 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X