ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಬಾರಿ ವಿಶ್ವಕಪ್‌ನಲ್ಲಿ ಮೋಡಿ ಮಾಡಬಲ್ಲ Top 5 ಸ್ಪಿನ್ನರ್‌ಗಳು!

World Cup 2019: ಈ ಬಾರಿ ವಿಶ್ವಕಪ್ ನಲ್ಲಿ ಮೋದಿ ಮಾಡಬಲ್ಲ ಟಾಪ್ 5 ಸ್ಪಿನ್ನರ್ ಗಳು | Oneindia Kannada
Top 5 spinners who can spin webs on batsmen this World Cup

ಬೆಂಗಳೂರು, ಮೇ 16: ಈ ಬಾರಿ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಸಾಕ್ಷಿಯಾಗಲಿದೆ ಎಂದು ಈಗಾಗಲೇ ಕ್ರಿಕೆಟ್‌ ಪಂಡಿತರೆಲ್ಲಾ ಭವಿಷ್ಯ ನುಡಿದಾಗಿದೆ.

ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸಬಲ್ಲ ಬೌಲರ್‌ಗಳಿವರು!ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸಬಲ್ಲ ಬೌಲರ್‌ಗಳಿವರು!

ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ವಿಶ್ವಕಪ್‌ನಲ್ಲಿ ಬ್ಯಾಟಿಂಗ್‌ ಪಿಚ್‌ಗಳೇ ಹೆಚ್ಚು ಎಂದೆಲ್ಲಾ ಹೇಳಲಾಗುತ್ತಿದೆ. ಇದಕ್ಕೆ ಉದಾಹರಣೆಯಾಗಿ ಪ್ರಸಕ್ತ ಚಾಲ್ತಿಯಲ್ಲಿರುವ ಇಂಗ್ಲೆಂಡ್‌ ಮತ್ತು ಪಾಕಿಸ್ತಾನ ನಡುವಣ ಏಕದಿನ ಸರಣಿಯ ಪ್ರತಿ ಪಂದ್ಯಗಳಲ್ಲೂ ಸತತವಾಗಿ 350+ ಮೊತ್ತಗಳು ದಾಖಲಾಗುತ್ತಿದೆ.

ಸಿಎಸ್‌ಕೆ ಅಭಿಮಾನಿಗಳಿಗೆ ಆಸ್ಟ್ರೇಲಿಯಾದಿಂದ ಸಂದೇಶ ರವಾನಿಸಿದ ವ್ಯಾಟ್ಸನ್‌!ಸಿಎಸ್‌ಕೆ ಅಭಿಮಾನಿಗಳಿಗೆ ಆಸ್ಟ್ರೇಲಿಯಾದಿಂದ ಸಂದೇಶ ರವಾನಿಸಿದ ವ್ಯಾಟ್ಸನ್‌!

ಇಂತಹ ಪಿಚ್‌ಗಳಲ್ಲಿಯೂ ಇನಿಂಗ್ಸ್‌ ಮಧ್ಯದಲ್ಲಿ ಉತ್ತಮ ತಿರುವು ಪಡೆದು ಬ್ಯಾಟ್ಸ್‌ಮನ್‌ಗಳನ್ನು ಸ್ಪಿನ್‌ ಬಲೆಗೆ ಬೀಳಿಸಬಲ್ಲ ಚಾಣಾಕ್ಷ್ಯ ಸಿಪ್ಪಿನ್ನರ್‌ಗಳು ಈ ಬಾರಿ ವಿಶ್ವಕಪ್‌ ಅಖಾಡಕ್ಕೆ ಇಳಿಯುತ್ತಿದ್ದು, ಅವರಲ್ಲಿನ ಅಗ್ರ 5 ಸ್ಪಿನ್ನರ್‌ಗಳ ವಿವರ ಇಲ್ಲಿ ನೀಡಲಾಗಿದೆ.

ಕುಲ್ದೀಪ್‌ ಯಾದವ್‌

ಚೈನಾಮನ್‌ ಬೌಲಿಂಗ್‌ ಶೈಲಿಯ ಎಡಗೈ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಟೀಮ್ ಇಂಡಿಯಾದ ಬೌಲಿಂಗ್‌ ವಿಭಾಗದ ಪ್ರಮುಖ ಅಸ್ತ್ರ. ಮೂರನೇ ವಿಶ್ವಕಪ್‌ ಗೆಲುವಿನತ್ತ ಕಣ್ಣಿಟ್ಟಿರುವ ಭಾರತ ತಂಡ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯ ಬೇಕಾದರೆ ಕುಲ್ದೀಪ್‌ ಅವರ ಪ್ರದರ್ಶನ ಮುಖ್ಯವಾಗುತ್ತದೆ. ಕಳೆದ ಬಾರಿ ಭಾರತ ತಂಡ ಇಂಗ್ಲೆಂಡ್‌ ನೆಲದಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನಾಡಿದಾಗ ಕುಲ್ದೀಪ್‌ 9 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ಆದರೆ ಭಾರತ ತಂಡ ಸರಣಿಯಲ್ಲಿ 1-2 ಅಂತರದ ಸೋಲುಂಡಿತ್ತು. ಇನ್ನು 44 ಒಡಿಐಗಳಲ್ಲಿ 85 ವಿಕೆಟ್‌ಗಳನ್ನು ಪಡೆದಿರುವ ಕುಲ್ದೀಪ್‌, ಇತ್ತೀಚೆಗೆ ತಮ್ಮ ಲಯ ಕಳೆದುಕೊಂಡಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕೊತಾ ನೈಟ್ ರೈಡರ್ಸ್‌ ಪರ ಆಡಿದ 9 ಪಂದ್ಯಗಳಲ್ಲಿ ಕೇವಲ 4 ವಿಕೆಟ್‌ ಪಡೆಯಲಷ್ಟೇ ಶಕ್ತರಾಗಿದ್ದರು. ಆದರೂ, 24 ವರ್ಷದ ಯುವ ಸ್ಪಿನ್ನರ್‌ ಇಂಗ್ಲೆಂಡ್‌ ಪಿಚ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಮೋಡಿ ಮಾಡಬಲ್ಲರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ರಶೀದ್‌ ಖಾನ್‌

ಅಫಘಾನಿಸ್ತಾನದ ಲೆಗ್‌ ಸ್ಪಿನ್ನರ್‌ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿ ಮೂಡಿಬಂದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಶೀದ್‌ ಖಾನ್‌ ಬೆಳೆದಷ್ಟು ಬೇರಾವ ಸ್ಪಿನ್ನರ್‌ ಬೆಳೆದಿಲ್ಲ ಎಂದರೆ ತಪ್ಪಾಗಲಾರದು. ಏಕದಿನ ಕ್ರಿಕೆಟ್‌ ಶ್ರೇಯಾಂಕದಲ್ಲಿ ನಂ.3 ಬೌಲರ್‌ ಆಗಿರುವ ರಶೀದ್‌ ಖಾನ್‌, ಅಫಘಾನಿಸ್ತಾನ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಹಿಂದೆ ಇರುವ ಗುಟ್ಟಾಗಿದ್ದಾರೆ. ಯಾವುದೇ ಸಂದರ್ಬದಲ್ಲಿ ತಂಡಕ್ಕೆ ವಿಕೆಟ್‌
ತಂದುಕೊಡಬಲ್ಲ ಬೌಲರ್‌ ರಶೀದ್‌ ಖಾನ್‌. 20 ವರ್ಷದ ಲೆಗ್‌ ಸ್ಪಿನ್ನರ್‌ ಇತ್ತೀಚೆಗೆ ಅಂತ್ಯಗೊಂಡ ಐಪಿಎಲ್‌ ಟೂರ್ನಿಯಲ್ಲಿ ಸನ್‌ರೈಸಸರ್ಸ್‌ ಹೈದರಾಬಾದ್‌ ಪರ 15 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಉರುಳಿಸಿ ಮಿಂಚಿದ್ದರು.

ನೇಥನ್‌ ಲಯಾನ್‌

ಆಸ್ಟ್ರೇಲಿಯಾ ಟೆಸ್ಟ್‌ ತಂಡದ ಪ್ರಮುಖ ಸ್ಪಿನ್ನರ್‌ ನೇಥನ್‌ ಲಯಾನ್‌. ಅನುಭವಿ ಆಫ್‌ ಸ್ಪಿನ್ನರ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಹಲವು ಪಂದ್ಯಗಳನ್ನು
ಗೆದ್ದುಕೊಟ್ಟ ಅನುಭವ ಹೊಂದಿದ್ದಾರೆ. ಆದರೂ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಲಯಾನ್‌ ಆಡಿರುವುದು ಬಹಳ ಕಡಿಮೆ. ಏಕದಿನದಲ್ಲಿ ಕೇವಲ 25 ಪಂದ್ಯಗಳನ್ನು
ಆಡಿದ್ದರೂ, ಟೆಸ್ಟ್‌ನಲ್ಲಿ ಆಡಿದ ಅನುಭವ ಅವರ ನೆರವಿಗೆ ಬರಲಿದೆ. ಹೀಗಾಗಿ ತಮ್ಮ ಚೊಚ್ಚಲ ವಿಶ್ವಕಪ್‌ ಟೂರ್ನಿಯಲ್ಲಿ ತಂಡದ ಗೆಲುವಿಗಾಗಿ ಲಯಾನ್‌ ಸಂಪೂರ್ಣ ಶ್ರಮವಹಿಸುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಲಯಾನ್‌, ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪ್ರಮುಖ ಅಸ್ತ್ರ ಎಂದರೆ ತಪ್ಪಿಲ್ಲ.

ಇಮ್ರಾನ್‌ ತಾಹಿರ್‌

ವೃತ್ತಿ ಜೀವನದ ಕೊನೆಯ ವಿಶ್ವಕಪ್‌ ಟೂರ್ನಿಯನ್ನು ಆಡಲಿರುವ ದಕ್ಷಿಣ ಆಫ್ರಿಕಾ ತಂಡದ ಅನುಭವಿ ಲೆಗ್‌ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌, ತಮ್ಮ ಶ್ರೇಷ್ಠ ಪ್ರದರ್ಶನ ಹೊರ ಹಾಕುವುದನ್ನು ಎದುರು ನೋಡುತ್ತಿದ್ದಾರೆ. ಇತ್ತೀಚೆಗೆ ಮುಗಿದ ಐಪಿಎಲ್‌ ಟೂರ್ನಿಯಲ್ಲಿ ಒಟ್ಟಾರೆ 26 ವಿಕೆಟ್‌ಗಳನ್ನು ಪಡೆದು ಅತಿ ಹೆಚ್ಚು ವಿಕೆಟ್‌ ಸಂಪಾದಿಸಿದ ಬೌಲರ್‌ ಎಂದೆನಿಸಿ ಪರ್ಪಲ್‌ ಕ್ಯಾಪ್‌ ಕೂಡ ಗೆದ್ದ 40 ವರ್ಷದ ತಾಹಿರ್‌, ಹಲವು ದಾಖಲೆಗಳನ್ನೂ ಬರೆದಿದ್ದರು. ಇನ್ನು ವಿಶ್ವಕಪ್‌ನಲ್ಲಿ ಹರಿಣ ಪಡೆ ಚೊಚ್ಚಲ ವಿಶ್ವಕಪ್‌ ಗೆಲ್ಲಬೇಕಾದರೆ ತಾಹಿರ್‌ ಪ್ರದರ್ಶನ ಉತ್ತಮವಾಗಿರಬೇಕು. ಆಡಿದ 98 ಒಡಿಐ ಪಂದ್ಯಗಳಲ್ಲಿ 162 ವಿಕೆಟ್‌ಗಳನ್ನು ಉರುಳಿಸಿರುವ ಇಮ್ರಾನ್‌, 45ಕ್ಕೆ 7 ವಿಕೆಟ್‌ ಪಡೆದಿರುವುದು ಅವರ ಶ್ರೇಷ್ಠ ಸಾಧನೆ.

ಶಾಕಿಬ್‌ ಅಲ್‌ ಹಸನ್‌

ಬಾಂಗ್ಲಾದೇಶ ವಿಶ್ವಕಪ್‌ ಟೂರ್ನಿಯಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ನೀಡಬೇಕಾದರೆ, ಆಲ್‌ರೌಂಡರ್‌ ಶಾಕಿಬ್‌ ಅಲ್‌ ಹಸನ್‌ ಅವರಿಂದ ಮೊದಲಿಗೆ ಬೌಲಿಂಗ್‌ನಲ್ಲಿ ಭರ್ಜರಿ ಪ್ರದರ್ಶನ ಮೂಡಿ ಬರಬೇಕಿದೆ. ವಿಶ್ವದ ವಿವಿಧ ಭಾಗಗಳಲ್ಲಿ ಆಡಿ ಸೈ ಎನಿಸಿಕೊಂಡಿರುವ ಗುಣಮಟ್ಟದ ಸ್ಪಿನ್ನರ್‌ ಆಗಿರುವ ಶಾಕಿಬ್‌, 198 ಏಕದಿನ ಪಂದ್ಯಗಳನ್ನಾಡಿದ್ದು 249 ವಿಕೆಟ್‌ಗಳನ್ನು ಪಡೆದ ಅನುಭವ ಹೊಂದಿದ್ದಾರೆ. ಆದರೆ, ಇತ್ತೀಚೆಗೆ ಗಾಯದ ಸಮಸ್ಯೆ ಎದುರಿಸಿ ಚೇತರಿಸಿರುವ ಅವರು ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಬಲ್ಲರೇ ಎಂಬುದನ್ನು ಕಾದು ನೋಡಬೇಕಿದೆ.

Story first published: Thursday, May 16, 2019, 18:38 [IST]
Other articles published on May 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X