ರಾಹುಲ್ ದ್ರಾವಿಡ್ ಹುಟ್ಟುಹಬ್ಬವನ್ನು ಟ್ವಿಟ್ಟರಲ್ಲಿ ಸಂಭ್ರಮಿಸಿದ ಫ್ಯಾನ್ಸ್

Posted By:
Twitter explodes as Dravid turns 45

ಬೆಂಗಳೂರು, ಜನವರಿ 11: ಕ್ರಿಕೆಟ್ ಜಗತ್ತಿನ 'ದಿ ವಾಲ್' ರಾಹುಲ್ ದ್ರಾವಿಡ್ ಅವರಿಗೆ ಇಂದು (ಜನವರಿ 11) ಹುಟ್ಟುಹಬ್ಬದ ಸಂಭ್ರಮ.

ದಕ್ಷಿಣ ಆಫ್ರಿಕಾಕ್ಕೆ ಆಘಾತ, ಡೇಲ್ ಸ್ಟೇನ್ ಸರಣಿಯಿಂದ ಔಟ್!

ಯುವ ಪೀಳಿಗೆಗೆ ಮಾದರಿ ಆಟಗಾರನಾಗಿದ್ದ ರಾಹುಲ್ ದ್ರಾವಿಡ್ ಅವರು ಕ್ರೀಡಾಲೋಕದ ಅಜಾತಶತ್ರು ಎಂದರೆ ತಪ್ಪಾಗಲಾರದು. ಅನ್ ಅಂಡ್ ಆಫ್ ದಿ ಫೀಲ್ಡ್ ಸಭ್ಯ, ಸರಳ ಅನುಕರಣೀಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. Mr Dependable ಅಥವಾ Mr Consistency ಎಂದು ಎಲ್ಲಾ ಕಾಮೆಂಟೆಟರ್ಸ್ ಗಳಿಂದ ಹೊಗಳಿಸಿಕೊಂಡಿದ್ದಾರೆ.

ವೃತ್ತಿಪರ ಕ್ರಿಕೆಟ್ ನಿಂದ ನಿವೃತ್ತಿ ಪಡೆದರೂ ಕ್ರಿಕೆಟ್ ಜತೆ ನಂಟು ಬಿಟ್ಟಿಲ್ಲ. ಟೀಂ ಇಂಡಿಯಾ ಕೋಚ್ ಆಗುವ ಅವಕಾಶ ಸಿಕ್ಕರೂ, ಯುವ ಪ್ರತಿಭೆಗಳನ್ನು ಬೆಳಕಿಗೆ ತರಲು ಶ್ರಮಿಸುತ್ತಿದ್ದಾರೆ.

ಭಾರತ v/s ದಕ್ಷಿಣ ಆಫ್ರಿಕಾ ಸರಣಿ ವೇಳಾಪಟ್ಟಿ ಪ್ರಕಟ

ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಎರಡರಲ್ಲೂ 10 ಸಾವಿರ ಪ್ಲಸ್ ರನ್ ಗಳಿಸಿರುವ ದ್ರಾವಿಡ್ ಅವರು 36 ಟೆಸ್ಟ್ ಶತಕ, 12 ಏಕದಿನ ಶತಕ ಬಾರಿಸಿದ್ದಾರೆ. 1997ರಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ ಅಲಾನ್ ಡೊನಾಲ್ಡ್, ಶಾನ್ ಪೊಲ್ಲಾರ್ಕ್, ಲ್ಯಾನ್ಸ್ ಕ್ಲುಸೆನರ್, ಮೆಕ್ ಮಿಲನ್ ಅವರ ವೇಗದ ಬೌಲಿಂಗ್ ಎದುರಿಸಿ ತಾಳ್ಮೆಯ ಶತಕ ಬಾರಿಸಿದ್ದು ಮರೆಯುವಂತಿಲ್ಲ.

ದ್ರಾವಿಡ್ ಬಗ್ಗೆ ಕ್ರಿಕೆಟ್ ಜಗತ್ತಿನ ಜನಪ್ರಿಯ ಆಟಗಾರರು, ಯುವ ಪ್ರತಿಭೆಗಳು, ಕಾಮೆಂಟೆಟರ್ಸ್ ಸಂತಸದಿಂದ ಶುಭ ಹಾರೈಸಿದ್ದಾರೆ. ಮೈಖೇಲ್ ತಂಡ ಈ ಮೂಲಕ ದ್ರಾವಿಡ್ ಗೆ Happy Birthday ವಿಶ್ ಮಾಡುತ್ತಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, January 11, 2018, 19:07 [IST]
Other articles published on Jan 11, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ