ಅಂಡರ್ 19 ತಂಡದ ಯಶಸ್ಸಿನ ಹಿಂದೆ ಕೋಚ್ ರಾಹುಲ್ ದ್ರಾವಿಡ್

Posted By:

ಬೆಂಗಳೂರು, ಜನವರಿ 31: ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಅಂಡರ್‌19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ ಭಾರತದ ಕಿರಿಯರು ಫೈನಲ್ ಪ್ರವೇಶಿಸಿದ್ದಾರೆ.

ಪಂದ್ಯಾವಳಿಯ ಆರಂಭದಿಂದಲೂ ಒಂದೂ ಪಂದ್ಯ ಸೋಲದೆ ಗುಣಮಟ್ಟದ ಕ್ರಿಕೆಟ್ ಆಡುತ್ತಿರುವ ಈ ಹುಡುಗರು ಭವಿಷ್ಯದ ಭಾರತದ ಕ್ರಿಕೆಟ್‌ ಕಲಿಗಳು ಎಂದೇ ಬಿಂಬಿತರಾಗುತ್ತಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಈ ಹುಡುಗರು ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದು, ಈ ಬೆಳೆಯುವ ಸಿರಿಗಳಿಗೆ ನೀರು ಉಣಿಸಿ ಆಕಾರ ನೀಡಿ ಬೆಳೆಸುತ್ತಿರುವುದು ಭಾರತದ ಹೆಮ್ಮೆಯ ಕ್ರಿಕೆಟಿಗ ರಾಹುಲ್ ದ್ರಾವಿಡ್. ಭಾರತದ ಅಂಡರ್‌19 ತಂಡದ ಕೋಚ್ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್‌.

ಅಂಡರ್ 19 ಆಟಗಾರರಿಗೆ ನಗದು ಬಹುಮಾನ ಘೋಷಣೆ!

ಭಾರತದ ಅಂಡರ್‌19 ತಂಡ ಪಾಕಿಸ್ತಾನವನ್ನು ಭರ್ಜರಿಯಾಗಿ ಬಗ್ಗುಬಡಿದು ವಿಶ್ವಕಪ್‌ ಪೈನಲ್ ಪ್ರವೇಶಿಸುತ್ತಿದ್ದಂತೆ ತಂಡಕ್ಕೆ ಅಭಿನಂದನೆಗಳ ಸುರಿಮಳೆಯನ್ನೇ ಕ್ರಿಕೆಟ್‌ ಪ್ರಿಯರು ಮಾಡಿದ್ದಾರೆ. ಅಷ್ಟೆ ಮೆಚ್ಚುಗೆಗಳು ತಂಡದ ಕೋಚ್‌ ರಾಹುಲ್ ದ್ರಾವಿಡ್‌ ಅವರಿಗೂ ಸಂದಿವೆ.

ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್‌ ಪ್ರಿಯರು ರಾಹುಲ್ ದ್ರಾವಿಡ್‌ ಅವರನ್ನು ಕೊಂಡಾಡುತ್ತಿದ್ದು, ಕಿರಿಯರ ತಂಡದ ಸಾಧನೆಗೆ ಮೂಲಕ ಕಾರಣಕರ್ತ ರಾಹುಲ್ ಅವರನ್ನು ಇನ್ನಿಲ್ಲದಂತೆ ಕೊಂಡಾಡಲಾಗುತ್ತಿದೆ.

ಸಚಿನ್ ರಿಂದ ಕೈಫ್ ತನಕ ಪೃಥ್ವಿ ಶಾ ಪಡೆ ಹೊಗಳಿದ ಕ್ರಿಕೆಟರ್ಸ್

ರಾಹುಲ್ ದ್ರಾವಿಡ್‌ ಅವರ ಬಗ್ಗೆ ಆಯ್ದ ಕೆಲವು ಅತ್ಯುತ್ತಮ ಪ್ರತಿಕ್ರಿಯೆಗಳು ಇಲ್ಲಿ ನಿಮಗಾಗಿ...

ದ್ರಾವಿಡ್‌ ಕ್ರಿಕೆಟ್ ಪ್ರೀತಿಗೆ ಕನ್ನಡಿ

ಬೇರೆ ಎಲ್ಲಾ ಮಾಜಿ ಕ್ರಿಕೆಟರ್‌ಗಳು ಐಪಿಎಲ್‌ ನಲ್ಲಿ ಬ್ಯುಸಿಯಾಗಿದ್ದರೆ, ರಾಹುಲ್ ದ್ರಾವಿಡ್‌ ಮಾತ್ರ ಭಾರತದ ಕ್ರಿಕೆಟ್‌ ಭವಿಷ್ಯವನ್ನು ಭದ್ರ ಮಾಡುವಲ್ಲಿ ನಿರತರಾಗಿದ್ದಾರೆ. ಎಂಬ ಅರ್ಥ ಪೂರ್ಣ ಟ್ವೀಟ್‌ ಹಾಕಿದವರು ರಾಹುಲ್ ವಸ್ವಾನಿ.

ಕ್ರಿಕೆಟ್ ಬಿಟ್ಟು ಇನ್ನೇನಕ್ಕೂ ಇಲ್ಲಿ ಸ್ಥಳವಿಲ್ಲ

'ಇದು ರಾಹುಲ್ ದ್ರಾವಿಡ್ ಅವರು ಕಟ್ಟಿರುವ ತಂಡ ಇಲ್ಲಿ, ಉದ್ರೇಕ, ಮೂರ್ಖತನ, ಭಾವಾವೇಶಕ್ಕೆ ಜಾಗವಿಲ್ಲ, ಏನಿದ್ದರು ಕ್ರಿಕೆಟ್‌ ಅಷ್ಟೆ, ಮೌನವಾಗಿದ್ದುಕೊಂಡು ಸಾಧಿಸಿತೋರಿಸುವವರ ತಂಡ' ಎಂದು ಮಯಾಂಕ್ ನೆಮಾ ಎಂಬುವರು ಬರೆದುಕೊಂಡಿದ್ದಾರೆ.

ದ್ರಾವಿಡ್ ಹೆಕ್ಕಿದ ಪ್ರತಿಭೆ

ಭಾರತ ಕ್ರಿಕೆಟ್ ತಂಡದ ಭವಿಷ್ಯದ ತಾರೆಗಳಿವರು, ಖಂಡಿತಾ ಈ ತಂಡದಿಂದ 5-6 ಜನ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಾರೆ. ಎಲ್ಲಾ ಶ್ರೇಯ ದ್ರಾವಿಡ್‌ಗೆ ಸಲ್ಲಬೇಕು, ಆಟಗಾರರಲ್ಲಿನ ಪ್ರತಿಭೆಗೆ ಮೆರುಗು ನೀಡಿದವರವರು. ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದಿರುವವರು ಅರ್ಮಿಷ್ ಪರೇಖ್.

ರಾಹುಲ್ ಅವರನ್ನು ಮರೆಯುವ ಹಾಗಿಲ್ಲ

ಭಾರತದ ಅಂಡರ್‌19 ಕ್ರಿಕೆಟ್ ತಂಡದ ಯಶಸ್ಸಿನ ಹಿಂದೆ ಇರುವ ವ್ಯಕ್ತಿಯನ್ನು ಮರೆಯುವುದು ಬೇಡ. ಗೋಡೆ ಇನ್ನೂ ಭಾರತದ ಕ್ರಿಕೆಟ್‌ ಅನ್ನು ರಕ್ಷಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ ಉಮಂಗ್ ಮಿಶ್ರಾ.

ದಂತ ಕತೆ ದ್ರಾವಿಡ್

ಟ್ವಿಟರ್‌ನಲ್ಲಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ಸರ್ ರವೀಂದ್ರ ಜಡೇಜಾ ಎಂಬ ಖಾತೆಯ ಮೂಲಕ ದ್ರಾವಿಡ್‌ ಅವರಿಗೆ ಅಭಿನಂದನೆಗಳು ಸಲ್ಲಿಕೆಯಾಗಿದ್ದು, ದ್ರಾವಿಡ್ ಅವರ ಶ್ರಮಕ್ಕೆ ಅಭಿನಂದನೆಗಳು, ಅವರು ತಂಡವನ್ನು ಎಲ್ಲಾ ವಿಭಾಗದಲ್ಲೂ ಗಟ್ಟಿಗೊಳಿಸಿದ್ದಾರೆ ಎಂದು ಬರೆದು ತಮ್ಮ ಗೌರವ ಅರ್ಪಿಸಿದ್ದಾರೆ.

Story first published: Wednesday, January 31, 2018, 14:17 [IST]
Other articles published on Jan 31, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ