ಎಂಎಸ್ ಧೋನಿ ಖಾತೆಯಿಂದ 'ಬ್ಲೂ' ಟಿಕ್ ಕಿತ್ತು ವಾಪಾಸ್ ನೀಡಿದ ಟ್ವಿಟ್ಟರ್

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಕೆಲ ಕಾಲ 'ಬ್ಲೂ ಟಿಕ್' ಮಾಯವಾಗಿ ಮತ್ತೆ ಕಾಣಿಸಿಕೊಂಡಿದೆ. ಟ್ವಿಟ್ಟರ್ ಸಂಸ್ಥೆ ಈ ಬ್ಲೂ ಟಿಕ್‌ಅನ್ನು ಶುಕ್ರವಾರ ತೆಗೆದು ಹಾಕಿತ್ತು. ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಗಳು ಟ್ವಿಟ್ಟರ್ ನೀಡಿಲ್ಲವಾದರೂ ಧೋನಿ ಅಭಿಮಾನಿಗಳು ಈ ಬೆಳವಣಿಗೆಯ ಬಗ್ಗೆ ಅಚ್ಚರಿಗೊಂಡಿದ್ದರು. ಅಧಿಕೃತವಾಗಿ ಮಾನ್ಯತೆ ಪಡೆದ ಖಾತೆಗಳಿಗೆ ಮಾತ್ರವೇ ಟ್ವಿಟ್ಟರ್ ಬ್ಲೂ ಟಿಕ್ ನೀಡುತ್ತದೆ.

ಮಹೇಂದ್ರ ಸಿಂಗ್ ಧೋನಿ ಸಾಮಾಜಿಕ ಜಾಲತಾಣಗಳಿಂದಲೂ ಸಾಕಷ್ಟು ಅಂತರವನ್ನು ಕಾಯ್ದುಕೊಂಡು ಬಂದಿದ್ದಾರೆ. ಟ್ವಿಟ್ಟರ್, ಇನ್ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿದ್ದರೂ ಧೋನಿ ಕಳೆದ ಹಲವಾರು ತಿಂಗಳಿನಿಂದ ಯಾವುದೇ ಅಪ್‌ಡೇಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿಲ್ಲ.

ಮಾಜಿ ನಾಯಕ ಎಂಎಸ್ ಧೋನಿ ಟ್ವಿಟ್ಟರ್‌ನಲ್ಲಿ 82 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಫೇಸ್‌ಬುಕ್‌ನಲ್ಲಿ 2.6 ಕೋಟಿ ಫಾಲೋವರ್ಸ್‌ಗಳನ್ನು ಹೊಂದಿದ್ದು ಇನ್ಸ್ಟಾಗ್ರಾಂನಲ್ಲಿ ಧೋನಿ ಫಾಲೋವರ್ಸ್‌ಗಳ ಸಂಖ್ಯೆ 3.45 ಕೋಟಿಯಷ್ಟಿದೆ. ಆದರೆ ಸುದೀರ್ಘ ಕಾಲದಿಂದ ಟ್ವಿಟ್ಟರ್‌ನಲ್ಲಿ ಯಾವುದೇ ಅಪ್‌ಡೇಟ್‌ಗಳನ್ನು ಮಾಡದಿರುವ ಕಾರಣದಿಂದಾಗಿ ಈ ಬ್ಲ್ಯೂಟಿಕ್ ಹಿಂಪಡೆದಿರುವ ಸಾಧ್ಯತೆಯಿದೆ. ಬಳಿಕ ಅದನ್ನು ಮತ್ತೆ ನೀಡಲಾಗಿದೆ.

ರಾಜೀವ್ ಗಾಂಧಿ ಖೇಲ್ ರತ್ನ ಇನ್ಮುಂದೆ 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ'!ರಾಜೀವ್ ಗಾಂಧಿ ಖೇಲ್ ರತ್ನ ಇನ್ಮುಂದೆ 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ'!

ಟ್ವಿಟ್ಟರ್‌ನಲ್ಲಿ ಜನವರಿಯಲ್ಲಿ ಕೊನೆಯ ಪೋಸ್ಟ್: ಎಂಎಸ್ ಧೋನಿ ಟ್ವಿಟ್ಟರ್‌ನಲ್ಲಿ ಕೊನೆಯ ಪೋಸ್ಟ್ ಮಾಡಿರುವುದು ಕಳೆದ ಜನವರಿ ತಿಂಗಳ 8 ರಂದು. ಅದಾರ ಬಳಿಕ ಸಂಪೂರ್ಣವಾಗಿ ಧೋನಿ ಟ್ವಿಟ್ಟರ್‌ನಿಂದ ದೂರವುಳಿದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿಯೂ ಅದೇ ದಿನ ಧೋನಿ ತಮ್ಮ ಕೊನೇಯ ಪೋಸ್ಟ್ ಮಾಡಿದ್ದರು. ಫೇಸ್‌ಬುಕ್‌ನಲ್ಲಿ ಏಪ್ರಿಲ್ 30ರಂದು ಕೊನೆಯ ಬಾರಿಗೆ ಪೋಸ್ಟ್‌ವೊಂದನ್ನು ಮಾಡಿದ್ದರು ಎಂಎಸ್ ಧೋನಿ.

ಬ್ಲೂ ಟಿಕ್ ವಿವಾದ ಹೊಸತಲ್ಲ: ಟ್ವಿಟ್ಟರ್‌ನ ಬ್ಲೂ ಟಿಕ್ ವಿಚಾರವಾಗಿ ಉಂಟಾಗಿರುವ ಗೊಂದಲ ವಿವಾದ ಭಾರತದಲ್ಲಿ ಇದೇನು ಮೊದಲಲ್ಲ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಹಿತ ಕೆಲ ಪ್ರಮುಖ ನಾಯಕರ ಖಾತೆಯಿಂದಲೂ ಬ್ಲೂ ಟಿಕ್ ತೆಗೆದು ಹಾಕಿದ್ದು ಈ ಮೊದಲು ಭಾರೀ ಸುದ್ದಿಯಾಗಿತ್ತು. ಟ್ವಿಟ್ಟರ್ ಸಂಸ್ಥೆಯ ಈ ನಿರ್ಧಾರ ವಾವದವನ್ನೆಬ್ಬಿಸಿತ್ತು. ಬಳಿಕ ಅದನ್ನು ಟ್ವಿಟ್ಟರ್ ಮರಳಿಸುವ ಮೂಲಕ ವಿವಾದ ತಣ್ಣಗಾಗಿತ್ತು. ಈಗ ಎಂಎಸ್ ಧೋನಿ ಟ್ವಿಟ್ಟರ್ ಖಾತೆ ವಿಚಾರವಾಗಿಯೂ ಇದೇ ರೀತಿಯಾಗಿದೆ. ಆದರೆ ಎಂಎಸ್ ಧೋನಿ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿಯೇ ಈ ಬಗ್ಗೆ ತಮ್ಮ ಬೇಸರವನ್ನು ಹೊರಹಾಕಲು ಆರಂಭಿಸುತ್ತಿದ್ದಂತೆಯೇ ಟ್ವಿಟ್ಟರ್ ಎಚ್ಚೆತ್ತುಕೊಂಡಿದ್ದು ತಕ್ಷಣವೇ ಬ್ಲೂ ಟಿಕ್ ಮರಳಿಸಿದೆ.

2020 ಆಗಸ್ಟ್ 15ರಂದು ಧೋನಿ ನಿವೃತ್ತಿ: ಎಂಎಸ್ ಧೋನಿ 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡು ನಿರ್ಗಮಿಸಿದ ಬಳಿಕ ಕ್ರಿಕೆಟ್‌ನಿಂದ ದೂರವುಳಿದಿದ್ದರು. ಬಳಿಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿದ್ದವು. ಆದರೆ ಸುಮಾರು ಒಂದು ವರ್ಷಗಳ ಬಳಿಕ ಧೋನಿ ಇದ್ದಕ್ಕಿದ್ದಂತೆಯೇ ನಿವೃತ್ತಿಯನ್ನು ಘೋಷಿಸಿದ್ದರು. ಅಚ್ಚರಿಯೆಂದರೆ ಧೋನಿ ಸಾಮಾಜಿಕ ಜಾಲತಾಣದಲ್ಲಿಯೇ ತಮ್ಮ ನಿವೃತ್ತಿ ವಿಚಾರವನ್ನು ಬಹಿರಂಗಪಡಿಸಿದ್ದರು.

ಇತ್ತೀಚೆಗೆ ವೈರಲ್ ಆಗಿತ್ತು ಧೋನಿಯ ಹೊಸ ಹೇರ್‌ಸ್ಟೈಲ್: ಸದ್ಯ ಎಂಎಸ್ ಧೋನಿ ಐಪಿಎಲ್ ಕ್ರಿಕೆಟ್‌ನಲ್ಲಿ ಮಾತ್ರವೇ ಸಕ್ರಿಯವಾಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಬಾರಿಯ ಐಪಿಎಲ್ ಕೊರೊನಾವೈರಸ್‌ನಿಂದ ಮುಂದೂಡಲ್ಪಟ್ಟ ಬಳಿಕ ಧೋನಿ ಮತ್ತೆಲ್ಲೂ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗಷ್ಟೇ ಜಾಹೀರಾತಿನ ಶೂಟ್‌ಗಾಗಿ ಕಾಣಿಸಿಕೊಂಡಿದ್ದ ಧೋನಿ ಫೋಟೋಗಳು, ಹೊಸ ಹೇರ್‌ಸ್ಟೈಲ್ ಸಾಕಷ್ಟು ವೈರಲ್ ಆಗಿತ್ತು. ಇದೀಗ ಮತ್ತೆ ಐಪಿಎಲ್‌ನ ಎರಡನೇ ಚರಣ ಮುಂದಿನ ತಿಂಗಳು ಯುಎಇನಲ್ಲಿ ಆರಂಭವಾಗಲಿದೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಮತ್ತೆ ಅಂಗಳಕ್ಕಿಳಿಯುವುದನ್ನು ನೋಡಲು ಅಭಿಮಾನಿಗಳು ಕಾತರಿಸುತ್ತಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, August 6, 2021, 18:06 [IST]
Other articles published on Aug 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X