ಐಪಿಎಲ್ ಅಥವಾ ಪಿಎಸ್ಎಲ್ ಯಾವುದು ಶ್ರೀಮಂತ ಲೀಗ್? ಮಾಜಿ ಆರ್‌ಸಿಬಿ ಆಟಗಾರನ ಉತ್ತರವಿದು

ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಪಾಕಿಸ್ತಾನ್ ಸೂಪರ್ ಲೀಗ್ ಈ ಎರಡರಲ್ಲಿ ಯಾವ ಫ್ಯಾಂಟಸಿ ಲೀಗ್ ಉತ್ತಮ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಲೇ ಇರುತ್ತವೆ. ಈಗಾಗಲೇ ಹಲವಾರು ಕ್ರಿಕೆಟಿಗರು ಈ ಕುರಿತು ಮಾತನಾಡಿದ್ದು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಇಂಗ್ಲೆಂಡ್ ವೇಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಟೈಮಲ್ ಮಿಲ್ಸ್ ಕೂಡ ಈ ಎರಡೂ ಟೂರ್ನಿಗಳ ಬಗ್ಗೆ ತಮ್ಮ ನಿಲುವೇನು ಎಂಬುದನ್ನು ವ್ಯಕ್ತಪಡಿಸಿದ್ದಾರೆ.

ಧೋನಿ,ಕೊಹ್ಲಿ ಮತ್ತು ರೋಹಿತ್ ಈ ಮೂವರನ್ನೂ ಅತಿಹೆಚ್ಚು ಕಾಡಿದ ಏಕೈಕ ಬೌಲರ್ ಈತ!

ಟೈಮಲ್ ಮಿಲ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಪಾಕಿಸ್ತಾನ್ ಸೂಪರ್ ಲೀಗ್ ಎರಡರಲ್ಲಿಯೂ ಆಟವಾಡಿರುವ ಅನುಭವವನ್ನು ಹೊಂದಿದ್ದಾರೆ. ಹೀಗಾಗಿ ಯಾವ ಲೀಗ್ ಯಾವ ರೀತಿ ಇರಲಿದೆ ಎಂಬುದು ಟೈಮಲ್ ಮಿಲ್ಸ್‌ಗೆ ಅನುಭವವಾಗಿರುತ್ತದೆ. 2017ರಲ್ಲಿ ಬರೋಬ್ಬರಿ 12 ಕೋಟಿಗೆ ಟೈಮಲ್ ಮಿಲ್ಸ್‌ನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿತು, ಆ ಆವೃತ್ತಿಯಲ್ಲಿ ಬೆಂಗಳೂರು ಪರ 4 ಪಂದ್ಯಗಳನ್ನಾಡಿದ್ದ ಮಿಲ್ಸ್ ಕೇವಲ 3 ವಿಕೆಟ್ ಪಡೆದು ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಲಿಲ್ಲ. ಹೀಗಾಗಿ ಆ ಟೂರ್ನಿಯ ನಂತರ ಮತ್ತೆ ಟೈಮಲ್ ಮಿಲ್ಸ್ ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ಪಡೆಯಲಿಲ್ಲ. ಇನ್ನು ಪಿಎಸ್ಎಲ್‌ನಲ್ಲಿ 4 ವರ್ಷಗಳ ಅನುಭವವನ್ನು ಹೊಂದಿರುವ ಟೈಮಲ್ ಮಿಲ್ಸ್ ಕೆಲವು ತಂಡಗಳ ಪರ ಆಡಿದ್ದಾರೆ.

2021ರ ಐಪಿಎಲ್‌ಗಾಗಿ ಟೆಸ್ಟ್‌ ಸರಣಿ ಮುಂಚಿತವಾಗಿ ನಡೆಸಲು ಇಸಿಬಿಗೆ ಬಿಸಿಸಿಐ ಕೋರಿಕೆ?!

ಹೀಗೆ ಎರಡೂ ಟೂರ್ನಿಗಳಲ್ಲಿಯೂ ಆಡಿರುವ ಅನುಭವವನ್ನು ಹೊಂದಿರುವ ಟೈಮಲ್ ಮಿಲ್ಸ್ ಎರಡೂ ಲೀಗ್‌ಗಳ ಕುರಿತು ಈ ಕೆಳಕಂಡಂತೆ ಮಾತನಾಡಿದ್ದಾರೆ.

1. ಐಪಿಎಲ್ ವಿಶ್ವದಲ್ಲಿಯೇ ದೊಡ್ಡ ಲೀಗ್

1. ಐಪಿಎಲ್ ವಿಶ್ವದಲ್ಲಿಯೇ ದೊಡ್ಡ ಲೀಗ್

ಕೇವಲ ಒಂದೇ ಒಂದು ಐಪಿಎಲ್ ಆವೃತ್ತಿಯಲ್ಲಿ ಆಡಿರುವ ಅನುಭವ ಹೊಂದಿರುವ ಟೈಮಲ್ ಮಿಲ್ಸ್ ವಿಶ್ವದಲ್ಲಿಯೇ ಇಂಡಿಯನ್ ಪ್ರೀಮಿಯರ್ ಲೀಗ್ ಅತಿದೊಡ್ಡ ಫ್ಯಾಂಟಸಿ ಲೀಗ್ ಆಗಿದ್ದು ಅದನ್ನು ಪ್ರತಿಯೊಬ್ಬರು ಕೂಡ ಒಪ್ಪಿಕೊಳ್ಳಲೇಬೇಕು ಎಂದಿದ್ದಾರೆ.

2. ಪಿಎಸ್ಎಲ್ ಒಂದು ಉತ್ಸಾಹಭರಿತ ಲೀಗ್

2. ಪಿಎಸ್ಎಲ್ ಒಂದು ಉತ್ಸಾಹಭರಿತ ಲೀಗ್

ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ 4 ವರ್ಷದ ಅನುಭವವಿದೆ, ಪಾಕಿಸ್ತಾನದ ಕ್ರೀಡಾಂಗಣಗಳು ಕೂಡ ಭಾರತದ ರೀತಿಯೇ ದೊಡ್ಡ ಕ್ರೀಡಾಂಗಣಗಳಾಗಿದ್ದು ಜನಸಂದಣಿ ಕೂಡ ದೊಡ್ಡ ಮಟ್ಟದಲ್ಲಿಯೇ ಇರುತ್ತದೆ. ಟಿಕೆಟ್‌ಗಳು ಸಂಪೂರ್ಣ ಮಾರಾಟವಾಗಿ ಕ್ರೀಡಾಂಗಣ ತುಂಬಿ ತುಳುಕುವುದರಿಂದ ಆಟವನ್ನಾಡಲು ಹೆಚ್ಚಿನ ಉತ್ಸಾಹ ಸಿಗಲಿದೆ ಎಂದು ಟೈಮಲ್ ಮಿಲ್ಸ್ ಹೇಳಿದ್ದಾರೆ.

3. ಐಪಿಎಲ್ ಶ್ರೀಮಂತ ಟೂರ್ನಿ

3. ಐಪಿಎಲ್ ಶ್ರೀಮಂತ ಟೂರ್ನಿ

ಮೊದಲೇ ಹೇಳಿದ ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೈಮಲ್ ಮಿಲ್ಸ್‌ನ್ನು 12 ಕೋಟಿಗೆ ಖರೀದಿ ಮಾಡಿತ್ತು. ಟೈಮಲ್ ಮಿಲ್ಸ್ ಕೂಡ ಆ ದೊಡ್ಡ ಮೊತ್ತವನ್ನು ಮರೆತಂತಿಲ್ಲ, ಐಪಿಎಲ್ ಅತ್ಯುನ್ನತ ಗುಣಮಟ್ಟದ ಟೂರ್ನಿಯಾಗಿದ್ದು ಅದರಲ್ಲಿ ಹಣದ ಹರಿವು ಕೂಡ ದೊಡ್ಡ ಮಟ್ಟದಲ್ಲಿಯೇ ಇರುತ್ತದೆ ಎಂದು ಹೇಳಿದ್ದಾರೆ.

4. ಪಿಎಸ್ಎಲ್‌ನಲ್ಲಿ ವಿದೇಶಿ ಆಟಗಾರರಿಗೆ ಅವಕಾಶ ಕಡಿಮೆ

4. ಪಿಎಸ್ಎಲ್‌ನಲ್ಲಿ ವಿದೇಶಿ ಆಟಗಾರರಿಗೆ ಅವಕಾಶ ಕಡಿಮೆ

ಪಾಕಿಸ್ತಾನದಲ್ಲಿಯೇ ಹಲವಾರು ವೇಗಿಗಳಿರುವುದರಿಂದ ಪಿಎಸ್ಎಲ್‌ನಲ್ಲಿ ವಿದೇಶಿ ವೇಗಿಗಳಿಗೆ ಅವಕಾಶ ಕಡಿಮೆ ಎಂದು ಟೈಮಲ್ ಮಿಲ್ಸ್ ಅಭಿಪ್ರಾಯಪಟ್ಟಿದ್ದಾರೆ.

5. ಐಪಿಎಲ್‌ನಲ್ಲಿ ಚೆನ್ನಾಗಿ ಆಡಿದ್ರೆ ಮಾತ್ರ ಮತ್ತೊಂದು ಅವಕಾಶ

5. ಐಪಿಎಲ್‌ನಲ್ಲಿ ಚೆನ್ನಾಗಿ ಆಡಿದ್ರೆ ಮಾತ್ರ ಮತ್ತೊಂದು ಅವಕಾಶ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಮುಂದಿನ ಆವೃತ್ತಿಗಳಲ್ಲಿ ಸ್ಥಾನ ಸಿಗುತ್ತದೆ ಕಳಪೆ ಪ್ರದರ್ಶನ ತೋರಿದರೆ ನಮ್ಮ ಜಾಗಕ್ಕೆ ಬೇರೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದೇ ಐಪಿಎಲ್ ಟೂರ್ನಿಯ ಗುಣ, ಇದರಿಂದಲೇ ಐಪಿಎಲ್ ಟೂರ್ನಿ ವಿಶ್ವದ ಅತ್ಯುತ್ತಮ ಟೂರ್ನಿಯಾಗಿ ನಿಂತಿದೆ ಎಂದು ಟೈಮಲ್ ಮಿಲ್ಸ್ ಐಪಿಎಲ್ ಟೂರ್ನಿಯನ್ನು ಕೊಂಡಾಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, May 21, 2021, 14:36 [IST]
Other articles published on May 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X